IPL 2024: ವಿರಾಟ್ಗೆ ಬೇಕು ಕೇವಲ 6 ರನ್: ಐಪಿಎಲ್‌ನ ಮೊದಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಲಿದ್ದಾರೆ ಕೊಹ್ಲಿ
Virat Kohli Record IPL 2024: 2024ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 12,000 ಟಿ20 ರನ್ ಗಳಿಸಿದ ಇತಿಹಾಸದಲ್ಲಿ ಮೊದಲ ಭಾರತೀಯ ಎನಿಸಿಕೊಳ್ಳಲು ಕೇವಲ ಆರು ರನ್ ಗಳಿಸಬೇಕಾಗಿದೆ. ಸದ್ಯಕ್ಕೆ ಕೊಹ್ಲಿ ಒಟ್ಟು 11994 ರನ್‌ಗಳನ್ನು ಟಿ20 ಮಾದರಿಯಲ್ಲಿ ಗಳಿಸಿದ್ದಾರೆ. ಅದರಲ್ಲಿ 4037 ರನ್‌ಗಳು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಂದಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2o24) ನ 2024 ರ ಋತು ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ಮಾರ್ಚ್ 22 ರಂದು ನಡೆಯಲಿರುವ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚೆನ್ನೈನ ಐಕಾನಿಕ್ ಎಂಸಿ ಚಿದಂಬರಂ ಸ್ಟೇಡಿಯಂನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ. ಕ್ರಿಕೆಟ್ ಲೋಕದ ಇಬ್ಬರು ದಿಗ್ಗಜ ಆಟಗಾರರಾದ ಕೊಹ್ಲಿ ಹಾಗೂ ಧೋನಿಯನ್ನು ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇದರ ನಡುವೆ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲೇ ಇತಿಹಾಸವನ್ನು ಸೃಷ್ಟಿಸಲು ಮುಂದಾಗಿದ್ದಾರೆ.
ಐಪಿಎಲ್‌ನ ಇತಿಹಾಸದಲ್ಲಿ ಒಂದೇ ತಂಡಕ್ಕಾಗಿ ಇದುವರೆಗೆ ಎಲ್ಲಾ 16 ಲೀಗ್‌ಗಳನ್ನು ಆಡಿದ ಏಕೈಕ ಆಟಗಾರ ಕೊಹ್ಲಿ. ಮಲೇಷ್ಯಾದಲ್ಲಿ ನಡೆದ ICC U19 ವರ್ಲ್ಡ್ ಕಪ್ 2008 ರಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ ಕೆಲವೇ ದಿನಗಳಲ್ಲಿ, 2008 ರ ಐಪಿಎಲ್ ಹರಾಜಿನಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಇವರನ್ನು ಖರೀದಿಸಿತು.
ವಿರಾಟ್ ಕೊಹ್ಲಿ ಆರ್ಸಿಬಿ ಕ್ಯಾಂಪ್ ಸೇರುವುದು ಯಾವಾಗ?: ಹೊರಬಿತ್ತು ದೊಡ್ಡ ಸುದ್ದಿ
ಅಲ್ಲಿಂದೀಚೆಗೆ, ಕೊಹ್ಲಿಯನ್ನು 2011, 2014, 2018, ಮತ್ತು 2022 ರಲ್ಲಿ ಉಳಿಸಿಕೊಂಡ ನಂತರ ಆರ್ಸಿಬಿಯ ಭಾಗವಾಗಿ ಉಳಿದಿದ್ದಾರೆ. ಕೊಹ್ಲಿ ಇನ್ನೂ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯದಿದ್ದರೂ, ಪ್ರಶಸ್ತಿಗಾಗಿ ಹುಡುಕಾಟವನ್ನು ಮುಂದುವರೆಸಿದೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಮತ್ತು ಶತಕಗಳ ದಾಖಲೆ ಕಿಂಗ್ ಕೊಹ್ಲಿ ಹೆಸರಲ್ಲಿದೆ. 2016 ರಲ್ಲಿ, ಅವರು ದಾಖಲೆಯ 973 ರನ್‌ಗಳೊಂದಿಗೆ ಒಂದೇ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸಹ ಮಾಡಿದರು.
2024ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 12,000 ಟಿ20 ರನ್ ಗಳಿಸಿದ ಇತಿಹಾಸದಲ್ಲಿ ಮೊದಲ ಭಾರತೀಯ ಎನಿಸಿಕೊಳ್ಳಲು ಕೇವಲ ಆರು ರನ್ ಗಳಿಸಬೇಕಾಗಿದೆ. ಸದ್ಯಕ್ಕೆ ಕೊಹ್ಲಿ ಒಟ್ಟು 11994 ರನ್‌ಗಳನ್ನು ಟಿ20 ಮಾದರಿಯಲ್ಲಿ ಗಳಿಸಿದ್ದಾರೆ. ಅದರಲ್ಲಿ 4037 ರನ್‌ಗಳು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಂದಿವೆ, ಅಲ್ಲಿ ಅವರು ಜಗತ್ತಿನಾದ್ಯಂತ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ ಒಟ್ಟು 7263 ರನ್ ಗಳಿಸಿದ್ದಾರೆ. ಕೊಹ್ಲಿ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ, ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ರಾಜ್ಯ ತಂಡಕ್ಕಾಗಿಯೂ ಆಡಿದ್ದರು.
WPL 2024: ವುಮೆನ್ಸ್ ಪ್ರೀಮಿಯರ್ ಲೀಗ್ ಪ್ಲೇಆಫ್ ವೇಳಾಪಟ್ಟಿ
ಕ್ರಿಸ್ ಗೇಲ್ , ಶೋಯೆಬ್ ಮಲಿಕ್ , ಕೀರಾನ್ ಪೊಲಾರ್ಡ್, ಅಲೆಕ್ಸ್ ಹೇಲ್ಸ್ ಮತ್ತು ಡೇವಿಡ್ ವಾರ್ನರ್ ನಂತರ ಈ ಸಾಧನೆ ಮಾಡಿದ ವಿಶ್ವದ ಆರನೇ ಆಟಗಾರ ಕೊಹ್ಲಿ ಆಗಲಿದ್ದಾರೆ.
ಟಿ20ಯಲ್ಲಿ ಅತಿ ಹೆಚ್ಚು ರನ್:
- ಕ್ರಿಸ್ ಗೇಲ್ – 14562
- ಶೋಯೆಬ್ ಮಲಿಕ್ – 13360
- ಕೀರಾನ್ ಪೊಲಾರ್ಡ್ – 12900
- ಅಲೆಕ್ಸ್ ಹೇಲ್ಸ್ – 12225
- ಡೇವಿಡ್ ವಾರ್ನರ್ – 12065
- ವಿರಾಟ್ ಕೊಹ್ಲಿ – 11194
ಟಿ20ಯಲ್ಲಿ ಭಾರತ ಪರ ಅತಿ ಹೆಚ್ಚು ರನ್:
- ವಿರಾಟ್ ಕೊಹ್ಲಿ – 11194
- ರೋಹಿತ್ ಶರ್ಮಾ – 11156
- ಶಿಖರ್ ಧವನ್ – 9465
- ಸುರೇಶ್ ರೈನಾ – 8654
- ಕೆಎಲ್ ರಾಹುಲ್ – 7066
ವೈಯಕ್ತಿಕ ಕಾರಣಗಳಿಂದಾಗಿ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಕಳೆದುಕೊಂಡಿರುವ ಕೊಹ್ಲಿ ಎರಡು ತಿಂಗಳ ಅಂತರದ ನಂತರ 2024 ರ ಐಪಿಎಲ್ ಮೂಲಕ ಮೈದಾನಕ್ಕೆ ಮರಳಲಿದ್ದಾರೆ. ಬಹುನಿರೀಕ್ಷಿತ ಟಿ20 ವಿಶ್ವಕಪ್ 2024 ರ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಅನುಮಾನಗಳಿರುವ ಕಾರಣ, ಕಿಂಗ್ ಕೊಹ್ಲಿಗೆ ಇದು ಮಹತ್ವದ ಟೂರ್ನಿ ಆಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ