Virender Sehwag: ಕೆಎಲ್ ರಾಹುಲ್ ಅಲ್ಲ, ಟೀಮ್ ಇಂಡಿಯಾ ಉಪನಾಯಕ ಇವರಾಗಬೇಕೆಂದ ಸೆಹ್ವಾಗ್

| Updated By: ಝಾಹಿರ್ ಯೂಸುಫ್

Updated on: Nov 09, 2021 | 3:03 PM

Team India: ಭಾರತ ಕ್ರಿಕೆಟ್ ತಂಡವನ್ನು ಇದುವರೆಗೆ ವೇಗದ ಬೌಲರ್ ಮುನ್ನಡೆಸಿಲ್ಲ. ಈ ಹಿಂದೆ ಕಪಿಲ್ ದೇವ್ ಮುನ್ನಡೆಸಿದ್ದರೆ, ಅವರು ಆಲ್ ರೌಂಡರ್ ಆಗಿದ್ದರು. ಇನ್ನು ಸ್ಪಿನ್ನರ್ ಅನಿಲ್ ಕುಂಬ್ಳೆ ಟೆಸ್ಟ್‌ನಲ್ಲಿ ಅಲ್ಪಾವಧಿಗೆ ತಂಡವನ್ನು ಮುನ್ನಡೆಸಿದ್ದರು.

Virender Sehwag: ಕೆಎಲ್ ರಾಹುಲ್ ಅಲ್ಲ, ಟೀಮ್ ಇಂಡಿಯಾ ಉಪನಾಯಕ ಇವರಾಗಬೇಕೆಂದ ಸೆಹ್ವಾಗ್
Virender Sehwag
Follow us on

ಟಿ20 ವಿಶ್ವಕಪ್ (T20 World Cup 2021) ಅಭಿಯಾನ ಅಂತ್ಯದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ (Team India) ಪ್ರಮುಖ ಬದಲಾವಣೆಗಳು ಕಂಡು ಬರಲಿದೆ. ಈಗಾಗಲೇ ಹೊಸ ಕೋಚ್ ಆಗಿ ರಾಹುಲ್ ದ್ರಾವಿಡ್ (Rahul Dravid) ನೇಮಕವಾಗಿದ್ದು, ಶೀಘ್ರದಲ್ಲೇ ಟಿ20 ತಂಡದ ಹೊಸ ನಾಯಕನ ಘೋಷಣೆ ಕೂಡ ಆಗಲಿದೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ (Rohit Sharma) ಹೆಸರು ಮುಂಚೂಣಿಯಲ್ಲಿದ್ದು, ಹೀಗಾಗಿ ಹಿಟ್​ಮ್ಯಾನ್ ನಾಯಕನ ಪಟ್ಟ ಸಿಗುವುದು ಬಹುತೇಕ ಖಚಿತ ಎನ್ನಬಹುದು. ಆದರೆ ಉಪನಾಯಕ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಏಕೆಂದರೆ ಪ್ರಸ್ತುತ ತಂಡದ ಉಪನಾಯಕರಾಗಿರುವ ರೋಹಿತ್ ಶರ್ಮಾ ನಾಯಕನ ಸ್ಥಾನಕ್ಕೇರಿದರೆ, ಅವರ ಸ್ಥಾನದಲ್ಲಿ ಬೇರೊಬ್ಬ ಆಟಗಾರನನ್ನು ಆಯ್ಕೆ ಮಾಡಬೇಕಾಗಿದೆ. ಇದೀಗ ಉಪನಾಯಕನ ಚರ್ಚೆಯ ಬೆನ್ನಲ್ಲೇ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ಹೆಸರಿಸಿದ್ದಾರೆ.

ಉಪನಾಯಕನ ಪಟ್ಟಿಯಲ್ಲಿ ಕೆಎಲ್ ರಾಹುಲ್, ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಹೆಸರುಗಳು ಕೇಳಿ ಬರುತ್ತಿದೆ. ಆದರೆ ಸೆಹ್ವಾಗ್ ಅವರ ಪ್ರಕಾರ ಅನುಭವಿ ಆಟಗಾರ ಜಸ್​ಪ್ರೀತ್ ಬುಮ್ರಾ ಅವರಿಗೆ ಉಪನಾಯಕನ ಸ್ಥಾನ ನೀಡುವುದು ಸೂಕ್ತ ಎಂದಿದ್ದಾರೆ. ಏಕೆಂದರೆ ಮೂರು ಮಾದರಿಯಲ್ಲೂ ಆಡುವ ಆಟಗಾರರನ್ನು ನಾಯಕ ಅಥವಾ ಉಪನಾಯಕನಾಗಿ ಮಾಡಬೇಕು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಾ ಮೂರು ಫಾರ್ಮ್ಯಾಟ್‌ಗಳಲ್ಲಿ ಆಡುವ ಆಟಗಾರರಲ್ಲಿ, ಜಸ್​ಪ್ರೀತ್ ಬುಮ್ರಾಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಏಕೆಂದರೆ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುತ್ತಾರೆಯೇ ಅಥವಾ ಭವಿಷ್ಯದಲ್ಲಿ ಹಾಗೆ ತಂಡದಲ್ಲಿರುತ್ತಾರೆಯೇ? ಎಂದು ಹೇಳಲಾಗುವುದಿಲ್ಲ. ಆದರೆ ಬುಮ್ರಾ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿ ನನ್ನ ಪ್ರಕಾರ ಅವರೇ ಉಪನಾಯಕನ ಸ್ಥಾನಕ್ಕೆ ಸೂಕ್ತ ಆಯ್ಕೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಕ್ರಿಕೆಟ್ ತಂಡವನ್ನು ಇದುವರೆಗೆ ವೇಗದ ಬೌಲರ್ ಮುನ್ನಡೆಸಿಲ್ಲ. ಈ ಹಿಂದೆ ಕಪಿಲ್ ದೇವ್ ಮುನ್ನಡೆಸಿದ್ದರೆ, ಅವರು ಆಲ್ ರೌಂಡರ್ ಆಗಿದ್ದರು. ಇನ್ನು ಸ್ಪಿನ್ನರ್ ಅನಿಲ್ ಕುಂಬ್ಳೆ ಟೆಸ್ಟ್‌ನಲ್ಲಿ ಅಲ್ಪಾವಧಿಗೆ ತಂಡವನ್ನು ಮುನ್ನಡೆಸಿದ್ದರು. ಪ್ರಸ್ತುತ ಸನ್ನಿವೇಶವನ್ನು ನೋಡಿದರೆ, ಭಾರತದ T20 ಅಂತರಾಷ್ಟ್ರೀಯ ತಂಡದಲ್ಲಿ ಉಪನಾಯಕನಾಗಿ ಬುಮ್ರಾ ಸೂಕ್ತ ಆಯ್ಕೆ ಎಂದು ಸೆಹ್ವಾಗ್ ತಿಳಿಸಿದ್ದಾರೆ.

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: Virat Kohli: ಟೀಮ್ ಇಂಡಿಯಾ ಮುಂದಿನ ನಾಯಕ ಯಾರು? ಸುಳಿವು ನೀಡಿದ ವಿರಾಟ್ ಕೊಹ್ಲಿ

(Virender Sehwag backs another superstar for Team India’s vice-captaincy in T20Is)