ಟೀಮ್ ಇಂಡಿಯಾದ ಮೂವರು ಗೇಮ್ ಚೇಂಜರ್ಗಳನ್ನ ಹೆಸರಿಸಿದ ಸೆಹ್ವಾಗ್
Asia Cup 2025: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್ನಲ್ಲಿದೆ. ಹೀಗಾಗಿ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡಬಹುದು.

ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ ಏಷ್ಯಾಕಪ್ ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇನಲ್ಲಿ ನಡೆಯಲಿರುವ ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರತ ತಂಡವು ಯುಎಇ, ಪಾಕಿಸ್ತಾನ್ ಹಾಗೂ ಒಮಾನ್ ತಂಡಗಳನ್ನು ಎದುರಿಸಲಿದೆ. ಈ ಪಂದ್ಯಗಳಲ್ಲಿ ಗೆದ್ದರೆ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೇರಲಿದೆ. ಹೀಗೆ ಸೂಪರ್ ಫೋರ್ ಹಂತಕ್ಕೇರುವ ಮೂಲಕ ಭಾರತ ತಂಡಕ್ಕೆ ಕಪ್ ಗೆದ್ದುಕೊಡಬಲ್ಲ ಮೂವರು ಆಟಗಾರರನ್ನು ಹೆಸರಿಸಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್.
ಖಾಸಗಿ ಚಾನೆಲ್ನ ಸಂದರ್ಶನದಲ್ಲಿ ಕಾಣಿಸಿಕೊಂಡ ವೀರೇಂದ್ರ ಸೆಹ್ವಾಗ್ ಅವರಿಗೆ ಏಷ್ಯಾಕಪ್ನಲ್ಲಿ ಯಾರೆಲ್ಲಾ ಟೀಮ್ ಇಂಡಿಯಾ ಪರ ಗೇಮ್ ಚೇಂಜರ್ ಆಗಬಲ್ಲರು ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಸೆಹ್ವಾಗ್, ಮೂವರು ಆಟಗಾರರ ಹೆಸರನ್ನು ಹೆಸರಿಸಿದ್ದಾರೆ. ಅವರೆಂದರೆ…
- ಅಭಿಷೇಕ್ ಶರ್ಮಾ
- ಜಸ್ಪ್ರೀತ್ ಬುಮ್ರಾ
- ವರುಣ್ ಚಕ್ರವರ್ತಿ
ಅಗ್ರ ಕ್ರಮಾಂಕದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಹೆಸರು ಮಾಡಿರುವ ಉದಯೋನ್ಮುಖ ತಾರೆ ಅಭಿಷೇಕ್ ಶರ್ಮಾ ಇಡೀ ಪಂದ್ಯದ ಚಿತ್ರಣ ಬದಲಿಸಬಲ್ಲ ಆಟಗಾರ. ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡುವ ಅಭಿಷೇಕ್ ಶರ್ಮಾ ಅವರ ಆಟದಿಂದ ಟೀಮ್ ಇಂಡಿಯಾ ಪಂದ್ಯವನ್ನು ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ.
ಹಾಗೆಯೇ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸ್ಪಿನ್ ಮೋಡಿಯೊಂದಿಗೆ ಸಂಚಲನ ಸೃಷ್ಟಿಸಿರುವ ವರುಣ್ ಚಕ್ರವರ್ತಿ ಕೂಡ ಪ್ರಮುಖ ಪಾತ್ರವಹಿಸಲಿದ್ದಾರೆ. ವರುಣ್ ಅವರ ಬೌಲಿಂಗ್ ಟಿ20 ಸ್ವರೂಪದಲ್ಲಿ ಬಹಳ ಪರಿಣಾಮಕಾರಿ. ಹೀಗಾಗಿ ಅವರು ಸಹ ಭಾರತದ ಗೆಲುವುಗಳಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ.
ಇನ್ನು ಜಸ್ಪ್ರೀತ್ ಬುಮ್ರಾ ಬಗ್ಗೆ ಹೇಳಬೇಕಿಲ್ಲ. ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಬುಮ್ರಾ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಏಷ್ಯಾಕಪ್ನಲ್ಲೂ ಬುಮ್ರಾ ಕಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ಹೊಸ ವಿಶ್ವ ದಾಖಲೆ ಬರೆದ ಶಾಕಿಬ್ ಅಲ್ ಹಸನ್..!
ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.
ಏಷ್ಯಾಕಪ್ ವೇಳಾಪಟ್ಟಿ:
ಗ್ರೂಪ್- A ವೇಳಾಪಟ್ಟಿ:
| ದಿನಾಂಕ | ಪಂದ್ಯಗಳು | ಸ್ಥಳ | ಸಮಯ (IST) |
| ಸೆಪ್ಟೆಂಬರ್ 10 | ಭಾರತ vs ಯುಎಇ | ದುಬೈ | ಸಂಜೆ 7:30 |
| ಸೆಪ್ಟೆಂಬರ್ 12 | ಪಾಕಿಸ್ತಾನ್ vs ಒಮಾನ್ | ಅಬುಧಾಬಿ | ಸಂಜೆ 7:30 |
| ಸೆಪ್ಟೆಂಬರ್ 14 | ಭಾರತ vs ಪಾಕಿಸ್ತಾನ್ | ದುಬೈ | ಸಂಜೆ 7:30 |
| 15ನೇ ಸೆಪ್ಟೆಂಬರ್ | ಯುಎಇ vs ಒಮಾನ್ | ಅಬುಧಾಬಿ | ಸಂಜೆ 7:30 |
| 17ನೇ ಸೆಪ್ಟೆಂಬರ್ | ಪಾಕಿಸ್ತಾನ್ vs ಯುಎಇ | ದುಬೈ | ಸಂಜೆ 7:30 |
| 19ನೇ ಸೆಪ್ಟೆಂಬರ್ | ಭಾರತ vs ಒಮಾನ್ | ಅಬುಧಾಬಿ | ಸಂಜೆ 7:30 |
ಗ್ರೂಪ್-B ವೇಳಾಪಟ್ಟಿ:
| ದಿನಾಂಕ | ಪಂದ್ಯಗಳು | ಸ್ಥಳ | ಸಮಯ (IST) |
| ಸೆಪ್ಟೆಂಬರ್ 9 | ಅಫ್ಘಾನಿಸ್ತಾನ್ vs ಹಾಂಗ್ ಕಾಂಗ್ | ಅಬುಧಾಬಿ | ಸಂಜೆ 7:30 |
| ಸೆಪ್ಟೆಂಬರ್ 11 | ಬಾಂಗ್ಲಾದೇಶ್ vs ಹಾಂಗ್ ಕಾಂಗ್ | ದುಬೈ | ಸಂಜೆ 7:30 |
| ಸೆಪ್ಟೆಂಬರ್ 13 | ಶ್ರೀಲಂಕಾ vs ಬಾಂಗ್ಲಾದೇಶ್ | ಅಬುಧಾಬಿ | ಸಂಜೆ 7:30 |
| 15ನೇ ಸೆಪ್ಟೆಂಬರ್ | ಶ್ರೀಲಂಕಾ vs ಹಾಂಗ್ ಕಾಂಗ್ | ದುಬೈ | ಸಂಜೆ 7:30 |
| ಸೆಪ್ಟೆಂಬರ್ 16 | ಬಾಂಗ್ಲಾದೇಶ್ vs ಅಫ್ಘಾನಿಸ್ತಾನ್ | ಅಬುಧಾಬಿ | ಸಂಜೆ 7:30 |
| 18ನೇ ಸೆಪ್ಟೆಂಬರ್ | ಶ್ರೀಲಂಕಾ vs ಅಫ್ಘಾನಿಸ್ತಾನ್ | ದುಬೈ | ಸಂಜೆ 7:30 |
ಸೂಪರ್-4 ವೇಳಾಪಟ್ಟಿ:
| ದಿನಾಂಕ | ಪಂದ್ಯಗಳು | ಸ್ಥಳ | ಸಮಯ (IST) |
| ಸೆಪ್ಟೆಂಬರ್ 20 | ಗ್ರೂಪ್ B ಕ್ವಾಲಿಫೈಯರ್ 1 vs ಗ್ರೂಪ್ B ಕ್ವಾಲಿಫೈಯರ್ 2 | ದುಬೈ | ಸಂಜೆ 7:30 |
| ಸೆಪ್ಟೆಂಬರ್ 21 | ಗ್ರೂಪ್ A ಕ್ವಾಲಿಫೈಯರ್ 1 vs ಗ್ರೂಪ್ A ಕ್ವಾಲಿಫೈಯರ್ 2 | ದುಬೈ | ಸಂಜೆ 7:30 |
| 23ನೇ ಸೆಪ್ಟೆಂಬರ್ | ಗುಂಪು A ಕ್ವಾಲಿಫೈಯರ್ 1 vs ಗುಂಪು B ಕ್ವಾಲಿಫೈಯರ್ 2 | ದುಬೈ | ಸಂಜೆ 7:30 |
| 24ನೇ ಸೆಪ್ಟೆಂಬರ್ | ಗ್ರೂಪ್ B ಕ್ವಾಲಿಫೈಯರ್ 1 vs ಗ್ರೂಪ್ A ಕ್ವಾಲಿಫೈಯರ್ 2 | ದುಬೈ | ಸಂಜೆ 7:30 |
| 25ನೇ ಸೆಪ್ಟೆಂಬರ್ | ಗ್ರೂಪ್ A ಕ್ವಾಲಿಫೈಯರ್ 2 vs ಗ್ರೂಪ್ B ಕ್ವಾಲಿಫೈಯರ್ 2 | ದುಬೈ | ಸಂಜೆ 7:30 |
| ಸೆಪ್ಟೆಂಬರ್ 26 | ಗುಂಪು A ಕ್ವಾಲಿಫೈಯರ್ 1 vs ಗುಂಪು B ಕ್ವಾಲಿಫೈಯರ್ 1 | ದುಬೈ | ಸಂಜೆ 7:30 |
| ಸೆಪ್ಟೆಂಬರ್ 28 | ಫೈನಲ್ | ದುಬೈ | ಸಂಜೆ 7:30 |
