AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾಕಪ್​ಗೂ ಮುನ್ನ ಪಾಕಿಸ್ತಾನದ ತ್ರಿಕೋನ ಸರಣಿ

ಬಹುನಿರೀಕ್ಷಿತ ಏಷ್ಯಾಕಪ್​ ಟೂರ್ನಿಗೆ ಪೂರ್ವ ಸಿದ್ಧತೆಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಈ ಯೋಜನೆಯಂತೆ ಪಾಕಿಸ್ತಾನ್ ತಂಡವು ಏಷ್ಯಾಕಪ್​ಗೂ ಮುನ್ನ ಯುಎಇ ಹಾಗೂ ಅಫ್ಘಾನಿಸ್ತಾನ್ ವಿರುದ್ಧ ಟಿ20 ಸರಣಿ ಆಡಲಿದೆ. ಅಂದರೆ ಮೂರು ತಂಡಗಳು ತ್ರಿಕೋನ ಸರಣಿಯಲ್ಲಿ ಮುಖಾಮುಖಿಯಾಗಲಿದೆ.

ಏಷ್ಯಾಕಪ್​ಗೂ ಮುನ್ನ ಪಾಕಿಸ್ತಾನದ ತ್ರಿಕೋನ ಸರಣಿ
AFG-UAE-PAK
ಝಾಹಿರ್ ಯೂಸುಫ್
| Edited By: |

Updated on:Sep 01, 2025 | 5:21 PM

Share

ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ ಏಷ್ಯಾಕಪ್ ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇನಲ್ಲಿ ನಡೆಯಲಿರುವ ಈ ಏಷ್ಯಾಕಪ್​​​ ಗೆಲ್ಲಲು ಪಾಕಿಸ್ತಾನ್ ತಂಡ ಭರ್ಜರಿ ಪ್ಲ್ಯಾನ್ ರೂಪಿಸಿದೆ. ಅದು ಸಹ ಏಷ್ಯಾಕಪ್​​ಗೂ ಮುನ್ನ ತ್ರಿಕೋನ ಸರಣಿ ಆಯೋಜಿಸುವ ಮೂಲಕ. ಪಾಕಿಸ್ತಾನ್ ಕ್ರಿಕೆಟ್​ ಮಂಡಳಿ ಆಗಸ್ಟ್ 29 ರಿಂದ ಯುಎಇನಲ್ಲಿ ಮೂರು ತಂಡಗಳ ನಡುವಣ ತ್ರಿಕೋನ ಸರಣಿ ಆಯೋಜಿಸಲು ನಿರ್ಧರಿಸಿದೆ.

ಅದರಂತೆ ಈ ಸರಣಿಯು ಆಗಸ್ಟ್ 29 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಸೆಪ್ಟೆಂಬರ್ 7 ರಂದು ನಡೆಯಲಿದೆ. ಅಂದರೆ ಏಷ್ಯಾಕಪ್ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ತ್ರಿಕೋನ ಸರಣಿಯ ಅಂತಿಮ ಪಂದ್ಯ ನಡೆಯಲಿದೆ.

ಇದಾದ ಬಳಿಕ ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯವು ಸೆಪ್ಟೆಂಬರ್ 14 ರಂದು ಜರುಗಲಿದ್ದು, ಅದಕ್ಕೂ ಮುನ್ನ ತ್ರಿಕೋನ ಸರಣಿಯ ಮೂಲಕ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲು ಪಾಕಿಸ್ತಾನ್ ತಂಡ ಪ್ಲ್ಯಾನ್ ರೂಪಿಸಿದೆ.

ತ್ರಿಕೋನ ಸರಣಿ ವೇಳಾಪಟ್ಟಿ:

  1. ಆಗಸ್ಟ್ 29  ಅಫ್ಘಾನಿಸ್ತಾನ್ ಪಾಕಿಸ್ತಾನ  (ಶಾರ್ಜಾ ಸ್ಟೇಡಿಯಂ)
  2. ಆಗಸ್ಟ್ 30  ಯುಎಇ ಪಾಕಿಸ್ತಾನ್  (ಶಾರ್ಜಾ ಸ್ಟೇಡಿಯಂ)
  3. ಸೆಪ್ಟೆಂಬರ್ 1  ಯುಎಇ v ಅಫ್ಘಾನಿಸ್ತಾನ್  (ಶಾರ್ಜಾ ಸ್ಟೇಡಿಯಂ)
  4. ಸೆಪ್ಟೆಂಬರ್ 2  ಪಾಕಿಸ್ತಾನ್ ಅಫ್ಘಾನಿಸ್ತಾನ್  (ಶಾರ್ಜಾ ಸ್ಟೇಡಿಯಂ)
  5. ಸೆಪ್ಟೆಂಬರ್ 4  ಪಾಕಿಸ್ತಾನ್ ಯುಎಇ  (ಶಾರ್ಜಾ ಸ್ಟೇಡಿಯಂ)
  6. ಸೆಪ್ಟೆಂಬರ್ 5  ಅಫ್ಘಾನಿಸ್ತಾನ್ ಯುಎಇ  (ಶಾರ್ಜಾ ಸ್ಟೇಡಿಯಂ)
  7. ಸೆಪ್ಟೆಂಬರ್ 7  ಫೈನಲ್ ಪಂದ್ಯ (ಶಾರ್ಜಾ ಸ್ಟೇಡಿಯಂ)

ಇದನ್ನೂ ಓದಿ: IPL 2026: ಐಪಿಎಲ್ ನಿಯಮ… RCB ಈ ಇಬ್ಬರನ್ನು ಬಿಡುಗಡೆ ಮಾಡಲೇಬೇಕು!

ಯುಎಇ ತಂಡ: ಮುಹಮ್ಮದ್ ವಸೀಮ್ (ನಾಯಕ), ಹೈದರ್ ಅಲಿ, ರಾಹುಲ್ ಚೋಪ್ರಾ, ಎಥಾನ್ ಡಿಸೋಜಾ, ಮುಹಮ್ಮದ್ ಫಾರೂಕ್, ಮುಹಮ್ಮದ್ ಜವದುಲ್ಲಾ, ಹರ್ಷಿತ್ ಕೌಶಿಕ್, ಆಸಿಫ್ ಖಾನ್, ರೋಹಿದ್ ಖಾನ್, ಸಘೀರ್ ಖಾನ್, ಧ್ರುವ ಪರಾಶರ್, ಅಲಿಶಾನ್ ಶರಫು, ಆರ್ಯಾಂಶ್ ಶರ್ಮಾ, ಜುನೈದ್ ಸಿದ್ದಿಕ್, ಮುಹಮ್ಮದ್ ಝೊಹೈಬ್.

ಪಾಕಿಸ್ತಾನ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್​ಝಾದ್ ಫರ್ಹಾನ್, ಶಾಹೀನ್ ಅಫ್ರಿದಿ, ಸಲ್ಮಾನ್ ಮಿರ್ಝಾ, ಸೈಮ್ ಅಯ್ಯೂಬ್ ಮತ್ತು ಸುಫಿಯಾನ್ ಮುಖಿಮ್.

ಅಫ್ಘಾನಿಸ್ತಾನ್ ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂದ್ರಾನ್, ದರ್ವಿಶ್ ರಸೂಲಿ, ಸೇದಿಖುಲ್ಲಾ ಅಟಲ್, ಅಝ್ಮತುಲ್ಲಾ ಒಮರ್ಝಾಹಿ, ಕರೀಂ ಜನತ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಶರಫುದ್ದೀನ್ ಅಶ್ರಫ್, ಮೊಹಮ್ಮದ್ ಇಶಾಕ್, ಮುಜೀಬ್ ಉರ್ ರಹಮಾನ್, ಅಲ್ಲಾ ಘಝನ್​ಪರ್, ನೂರ್ ಅಹ್ಮದ್, ಫರೀದ್ ಮಲಿಕ್, ಅಬ್ದುಲ್ಲಾ ಅಹ್ಮದ್​ಝಾಹಿ, ಫಝಲ್​ಹಕ್ ಫಾರೂಖಿ.

Published On - 9:55 am, Thu, 28 August 25

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ