AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

U19 ಏಷ್ಯಾಕಪ್​ನಲ್ಲಿ ಭಾರತ ತಂಡ ಚಾಂಪಿಯನ್

U19 Women's Asia Cup 2024: ಪುರುಷರ ಅಂಡರ್-19 ಏಷ್ಯಾಕಪ್ ಫೈನಲ್​ನಲ್ಲಿ ಭಾರತ ತಂಡವನ್ನು ಮಣಿಸಿ ಬಾಂಗ್ಲಾದೇಶ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಮಹಿಳಾ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಬಗ್ಗು ಬಡಿದು ಭಾರತ ತಂಡವು ಕಿರೀಟ ಮುಡಿಗೇರಿಸಿಕೊಂಡಿದೆ.

U19 ಏಷ್ಯಾಕಪ್​ನಲ್ಲಿ ಭಾರತ ತಂಡ ಚಾಂಪಿಯನ್
IND vs BAN
ಝಾಹಿರ್ ಯೂಸುಫ್
|

Updated on: Dec 22, 2024 | 10:55 AM

Share

ಕೌಲಾಲಂಪುರ್​ನಲ್ಲಿ ನಡೆದ ಅಂಡರ್-19 ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ರಣರೋಚಕ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಮಣಿಸಿ ಟೀಮ್ ಇಂಡಿಯಾ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ಅಂಡರ್-19 ತಂಡದ ನಾಯಕಿ ಸುಮಯ್ಯ ಅಕ್ತೆರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ಗೊಂಗಡಿ ತ್ರಿಷಾ ಉತ್ತಮ ಆರಂಭ ಒದಗಿಸಿದ್ದರು.

ಆರಂಭಿಕಗಳಾಗಿ ಕಣಕ್ಕಿಳಿದ ತ್ರಿಷಾ 47 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್​​ಗಳೊಂದಿಗೆ 52 ರನ್ ಬಾರಿಸಿದರು. ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

ನಾಯಕಿ ನಿಕಿ ಪ್ರಸಾದ್ 12 ರನ್​​ಗಳಿಸಿದರೆ, ಕೆಳ ಕ್ರಮಾಂಕದಲ್ಲಿ ಮಿಥಿಲಾ ವಿನೋದ್ 17 ರನ್​​ಗಳ ಕೊಡುಗೆ ನೀಡಿದರು. ಈ ರನ್​ಗಳ ಕೊಡುಗೆಯೊಂದಿಗೆ ಭಾರತ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 117 ರನ್ ಕಲೆಹಾಕಿತು.

118 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡಕ್ಕೆ ಫಹೋಮಿದಾ ಚೋಯಾ (18) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಜುವೈರಿಯಾ ಫೆರ್ಡಸ್ 18 ರನ್​ಗಳನ್ನು ಬಾರಿಸಿದರು.

ಈ ಮೂಲಕ ಮೊದಲ 10 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 52 ರನ್​ ಕಲೆಹಾಕಿತು. ಆದರೆ ದ್ವಿತೀಯಾರ್ಧದಲ್ಲಿ ಟೀಮ್ ಇಂಡಿಯಾ ಬೌಲರ್​​ಗಳು ಅದ್ಭುತ ಬೌಲಿಂಗ್ ಪ್ರದರ್ಶಿಸಿದರು.

ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುತ್ತಾ ಸಾಗಿದ ಭಾರತೀಯ ಬೌಲರ್​​ಗಳು 18.3 ಓವರ್​ಗಳಲ್ಲಿ 76 ರನ್​​ಗಳಿಗೆ ಬಾಂಗ್ಲಾದೇಶ್ ತಂಡವನ್ನು ಆಲೌಟ್ ಮಾಡಿದರು. ಈ ಮೂಲಕ ಟೀಮ್ ಇಂಡಿಯಾ 41 ರನ್​​ಗಳ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಉಭಯ ತಂಡಗಳು:

ಭಾರತ ಮಹಿಳಾ U19 ತಂಡ: ನಿಕಿ ಪ್ರಸಾದ್ (ನಾಯಕಿ), ಸನಿಕಾ ಚಲ್ಕೆ, ಜಿ. ತ್ರಿಷಾ, ಕಮಲಿನಿ ಜಿ (ವಿಕೆಟ್ ಕೀಪರ್), ಭಾವಿಕಾ ಅಹಿರೆ, ಈಶಾವರಿ ಅವಸರೆ, ಮಿಥಿಲಾ ವಿನೋದ್, ಜೋಶಿತಾ ವಿಜೆ, ಸೋನಮ್ ಯಾದವ್, ಪರುಣಿಕಾ ಸಿಸೋಡಿಯಾ, ಕೇಸರಿ ದೃತಿ, ಆಯುಷಿ ಶುಕ್ಲಾ, ಆನಂದಿತಾ ಕಿಶೋರ್, ಎಂ.ಡಿ.ಶಬನಂ, ನಂಧನ ಎಸ್.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಆಘಾತ: ರೋಹಿತ್ ಶರ್ಮಾ ಗಾಯಾಳು

ಬಾಂಗ್ಲಾದೇಶ್ ಮಹಿಳಾ U19 ತಂಡ: ಸುಮಯ್ಯ ಅಕ್ತೆರ್ (ನಾಯಕಿ), ಅಫಿಯಾ ಅಶಿಮಾ ಎರಾ, ಎಂಎಸ್​ಟಿ ಇವಾ, ಫಹೋಮಿದಾ ಚೋಯಾ, ಹಬೀಬಾ ಇಸ್ಲಾಂ ಪಿಂಕಿ, ಜುವೈರಿಯಾ ಫೆರ್ದೌಸ್, ಫರಿಯಾ ಆಕ್ಟರ್, ಫರ್ಜಾನಾ ಈಸ್ಮಿನ್, ಅನಿಸಾ ಅಕ್ಟರ್ ಸೋಬಾ, ಸುಮೈಯಾ ಅಕ್ಥರ್ ಸುಬೋರ್ನಾ, ನಿಶಿತಾ ಮಾ ಅಕ್ಟರ್ ನಿಶಿ, ಅರ್ವಿನ್ ತಾನಿ, ಜನ್ನತುಲ್ , ಸಾದಿಯಾ ಅಕ್ಟರ್, ಮಹಾರುನ್ ನೇಸಾ.