Viral Video: ಪಂದ್ಯ ನಡೆಯುವಾಗ ಪಿಚ್ಗೆ ಸ್ಕೂಟರ್ನಲ್ಲಿ ಬಂದ ಯುವಕ..!
ವಿಶೇಷ ಎಂದರೆ ಈ ಹಿಂದೆ ಭಾರತದಲ್ಲೂ ಈ ಘಟನೆ ನಡೆದಿತ್ತು. ಕೆಲವು ವರ್ಷಗಳ ಹಿಂದೆ, 2017 ರಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶ ನಡುವಿನ ರಣಜಿ ಟ್ರೋಫಿ ಪಂದ್ಯದ ವೇಳೆ ವ್ಯಕ್ತಿಯೊಬ್ಬರು ಮೈದಾನದ ಮಧ್ಯದಲ್ಲಿ ತಮ್ಮ ಕಾರನ್ನು ಓಡಿಸಿದರು.
ಕ್ರಿಕೆಟ್ ಮ್ಯಾಚ್ ನಡೆಯುವಾಗ ಮೈದಾನಕ್ಕೆ ಅಭಿಮಾನಿಗಳು ನುಗ್ಗಿರುವುದನ್ನು ನೀವು ನೋಡುತ್ತೀರಿ. ಇನ್ನು ಕೆಲವೊಮ್ಮೆ ನಾಯಿಗಳು, ಪಕ್ಷಿಗಳು ಕೂಡ ಮೈದಾನದಲ್ಲಿ ಕಾಣಿಸಿಕೊಂಡು ಪಂದ್ಯಕ್ಕೆ ಅಡಚಣೆ ಉಂಟು ಮಾಡಿರುವುದನ್ನು ನೀಡು ಕಂಡಿರುತ್ತೀರಿ. ಆದರೆ ಪಂದ್ಯ ನಡೆಯುವಾಗ ಪಿಚ್‌ನ ಮಧ್ಯದಲ್ಲಿ ಹೋವರ್ ಸ್ಕೂಟರ್ ಜೊತೆ ಬಂದರೆ ಹೇಗಿರಬಹುದು?..ಅಂತಹದೊಂದು ಘಟನೆ ಇಂಗ್ಲೆಂಡ್ನಲ್ಲಿ ನಡೆದಿದೆ. ಕ್ಲಬ್ ಕ್ರಿಕೆಟ್ ಪಂದ್ಯದ ವೇಳೆ ಹೋವರ್ ಸ್ಕೂಟರ್ನಲ್ಲಿ ಯುವಕನೊಬ್ಬ ಮೈದಾನಕ್ಕೆ ಆಗಮಿಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಅದು ಕೂಡ ಪಿಚ್ ಮಧ್ಯೆದಲ್ಲೇ ಎಂಬುದು ವಿಶೇಷ.
ಸೋಟನ್ ಯೂನಿವರ್ಸಿಟಿ ಕ್ರಿಕೆಟ್‌ನ ಟ್ವಿಟರ್ ಹ್ಯಾಂಡಲ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇದೀಗ ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕ್ರಿಕೆಟ್ನಲ್ಲಿ ಈ ಹಿಂದೆ ಹಲವು ರೀತಿಯ ಅಡಚಣೆಗಳಿಗೆ ಸಾಕ್ಷಿಯಾಗಿದೆ. ಮಳೆ, ದೃಶ್ಯ ಪರದೆ ಸಮಸ್ಯೆಗಳು, ಮೈದಾನಕ್ಕೆ ಓಡುವ ಪ್ರಾಣಿಗಳು ಮತ್ತು ಒದ್ದೆಯಾದ ಔಟ್‌ಫೀಲ್ಡ್ ಕೆಲವು ಹಂತದಲ್ಲಿ ಆಟವನ್ನು ನಿಲ್ಲಿಸಿವೆ. ಆದರೆ ಪಂದ್ಯ ನಡೆಯುವಾಗ ಇಂಗ್ಲೆಂಡ್ನಲ್ಲಿ ಇಂತಹದೊಂದು ಅಡಚಣೆ ಕಂಡು ಬಂದಿರುವುದು ಇದೇ ಮೊದಲು ಎನ್ನಲಾಗಿದೆ.
The youth of today pic.twitter.com/p4BVxDPzMD
— Heather Knight’s Barmy Army (@TheBarmyArmy) May 9, 2022
ವಿಶೇಷ ಎಂದರೆ ಈ ಹಿಂದೆ ಭಾರತದಲ್ಲೂ ಈ ಘಟನೆ ನಡೆದಿತ್ತು. ಕೆಲವು ವರ್ಷಗಳ ಹಿಂದೆ, 2017 ರಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶ ನಡುವಿನ ರಣಜಿ ಟ್ರೋಫಿ ಪಂದ್ಯದ ವೇಳೆ ವ್ಯಕ್ತಿಯೊಬ್ಬರು ಮೈದಾನದ ಮಧ್ಯದಲ್ಲಿ ತಮ್ಮ ಕಾರನ್ನು ಓಡಿಸಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಗೌತಮ್ ಗಂಭೀರ್, ಸುರೇಶ್ ರೈನಾ ಮತ್ತು ಇಶಾಂತ್ ಶರ್ಮಾ ಪಾಲ್ಗೊಂಡಿದ್ದರು.
ರಣಜಿ ಟ್ರೋಫಿ ಪಂದ್ಯದ 3 ನೇ ದಿನದಂದು, ಒಬ್ಬ ವ್ಯಕ್ತಿ ತನ್ನ ವ್ಯಾಗನ್ ಆರ್ ಕಾರನ್ನು ಆಟದ ಮೈದಾನಕ್ಕೆ ತಂದು ನೇರವಾಗಿ ಪಿಚ್ನತ್ತ ನುಗ್ಗಿಸಿದರು. ಈ ಘಟನೆಯ ನಂತರ, ಮ್ಯಾಚ್ ರೆಫರಿ ಪಿಚ್ ಮತ್ತು ಔಟ್‌ಫೀಲ್ಡ್ ಅನ್ನು ಪರಿಶೀಲಿಸಿ ಯಾವುದೇ ಹಾನಿಯಾಗದ ಕಾರಣ ಪಂದ್ಯವನ್ನು ಮುಂದುವರೆಸಿದ್ದರು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:00 pm, Tue, 10 May 22