WBBL 2024: ಕೊನೆಗೂ ಚಾಂಪಿಯನ್ ಪಟ್ಟಕ್ಕೇರಿದ ಮೆಲ್ಬೋರ್ನ್ ರೆನೆಗೇಡ್ಸ್

|

Updated on: Dec 01, 2024 | 12:27 PM

WBBL 2024: ಕಳೆದ 9 ಸೀಸನ್ ವುಮೆನ್ಸ್ ಬಿಗ್ ಬ್ಯಾಷ್ ಲೀಗ್​​ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ಒಮ್ಮೆಯೂ ಫೈನಲ್​​ಗೆ ತಲುಪಿರಲಿಲ್ಲ. ಹಲವು ಬಾರಿ ಸೆಮಿಫೈನಲ್​ನಲ್ಲಿ ಮುಗ್ಗರಿಸಿದ್ದ ತಂಡವು ಈ ಬಾರಿ ಅಂತಿಮ ಸುತ್ತಿಗೆ ಪ್ರವೇಶಿಸಿತ್ತು. ಅದರಂತೆ ಚೊಚ್ಚಲ ಫೈನಲ್​​ನಲ್ಲೇ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳುವಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಯಶಸ್ವಿಯಾಗಿದೆ.

WBBL 2024: ಕೊನೆಗೂ ಚಾಂಪಿಯನ್ ಪಟ್ಟಕ್ಕೇರಿದ ಮೆಲ್ಬೋರ್ನ್ ರೆನೆಗೇಡ್ಸ್
Melbourne Renegades
Follow us on

ವುಮೆನ್ಸ್ ಬಿಗ್ ಬ್ಯಾಷ್​ ಲೀಗ್​​ನ ಫೈನಲ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮೆಲ್ಬೋರ್ನ್​ನ ಎಂಸಿಜಿ ಮೈದಾನದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​​ನಲ್ಲಿ ಟಾಸ್ ಗೆದ್ದ ಬಿಸ್ಬೇನ್ ಹೀಟ್ ತಂಡದ ನಾಯಕ ಜೆಸ್ ಜೊನಾಸೆನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಮೆಲ್ಬೋರ್ನ್ ರೆನೆಗೇಡ್ಸ್  ಪರ ಆರಂಭಿಕ ಆಟಗಾರ್ತಿ ಹೇಲಿ ಮ್ಯಾಥ್ಯೂಸ್ 61 ಎಸೆತಗಳಲ್ಲಿ 69 ರನ್ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಜಾರ್ಜಿಯಾ ವೇರ್ಹ್ಯಾಮ್ 21 ರನ್​​ಗಳ ಕೊಡುಗೆ ನೀಡಿದರು. ಈ ಮೂಲಕ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು 20 ಓವರ್​​ಗಳಲ್ಲಿ 9 ವಿಕೆಟ್ ಕಳೆದುಕೊಂಡು 141 ರನ್ ಕಲೆಹಾಕಿತು.

98 ರನ್​​ಗಳ ಗುರಿ:

ಬ್ರಿಸ್ನೇನ್ ಹೀಟ್ ತಂಡದ ಇನಿಂಗ್ಸ್​ ವೇಳೆ ಮಳೆ ಬಂದಿದ್ದರಿಂದ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್​ ಕಡಿತದೊಂದಿಗೆ ಟಾರ್ಗೆಟ್ ಅನ್ನು ಪುನರ್ ನಿಗದಿ ಮಾಡಲಾಯಿತು. ಅದರಂತೆ 12 ಓವರ್​​ಗಳಲ್ಲಿ 98 ರನ್​​ಗಳ ಗುರಿ ಪಡೆದ ಬ್ರಿಸ್ಬೇನ್ ಹೀಟ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಜೆಸ್ ಜೊನಾಸೆನ್ ಉತ್ತಮ ಹೋರಾಟ ಪ್ರದರ್ಶಿಸಿದರು. 28 ಎಸೆತಗಳನ್ನು ಎದುರಿಸಿದ ಜೆಸ್ 1 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 44 ರನ್ ಬಾರಿಸಿದರು.

ಇದನ್ನೂ ಓದಿ: IPL 2025: RCB ತಂಡಕ್ಕೆ 4 ತವರು ಮೈದಾನ..!

ಪರಿಣಾಮ ಕೊನೆಯ ಓವರ್​​ನಲ್ಲಿ 18 ರನ್​​ಗಳ ಗುರಿ ಪಡೆಯಿತು. ಆದರೆ ಅಂತಿಮ ಓವರ್​ನಲ್ಲಿ ಬ್ರಿಸ್ಬೇನ್ ಹೀಟ್ ಆಟಗಾರ್ತಿಯರು ಕೇವಲ 11 ರನ್​​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು 7 ರನ್​​ಗಳ ರೋಚಕ ಜಯ ಸಾಧಿಸಿ ಚೊಚ್ಚಲ ಬಾರಿಗೆ ವುಮೆನ್ಸ್ ಬಿಗ್ ಬ್ಯಾಷ್ ಲೀಗ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.

ಮಹಿಳಾ ಬಿಗ್ ಬ್ಯಾಷ್ ಲೀಗ್ ವಿಜೇತರ ಪಟ್ಟಿ:

WBBL ಸೀಸನ್ ಚಾಂಪಿಯನ್ ರನ್ನರ್-ಅಪ್ ಪ್ಲೇಯರ್ ಆಫ್ ದಿ ಸೀಸನ್
1ನೇ (2015-16) ಸಿಡ್ನಿ ಥಂಡರ್ ಸಿಡ್ನಿ ಸಿಕ್ಸರ್ಸ್ ಮೆಗ್ ಲ್ಯಾನಿಂಗ್
2ನೇ (2016-17) ಸಿಡ್ನಿ ಸಿಕ್ಸರ್ಸ್ ಪರ್ತ್ ಸ್ಕಾರ್ಚರ್ಸ್ ಬೆತ್ ಮೂನಿ
3ನೇ (2017-18) ಸಿಡ್ನಿ ಸಿಕ್ಸರ್ಸ್ ಪರ್ತ್ ಸ್ಕಾರ್ಚರ್ಸ್ ಆಮಿ ಸ್ಯಾಟರ್ಥ್‌ವೈಟ್
4ನೇ (2018-19) ಬ್ರಿಸ್ಬೇನ್ ಹೀಟ್ ಸಿಡ್ನಿ ಸಿಕ್ಸರ್ಸ್ ಎಲ್ಲಿಸ್ ಪೆರ್ರಿ
5 ನೇ (2019-20) ಬ್ರಿಸ್ಬೇನ್ ಹೀಟ್ ಅಡಿಲೇಡ್ ಸ್ಟ್ರೈಕರ್ಸ್ ಸೋಫಿ ಡಿವೈನ್
6ನೇ (2020-21) ಸಿಡ್ನಿ ಥಂಡರ್ ಮೆಲ್ಬೋರ್ನ್ ಸ್ಟಾರ್ಸ್ ಸೋಫಿ ಡಿವೈನ್
7ನೇ (2021-22) ಅಡಿಲೇಡ್ ಸ್ಟ್ರೈಕರ್ಸ್ ಪರ್ತ್ ಸ್ಕಾರ್ಚರ್ಸ್ ಹರ್ಮನ್‌ಪ್ರೀತ್ ಕೌರ್
8ನೇ (2022-23) ಅಡಿಲೇಡ್ ಸ್ಟ್ರೈಕರ್ಸ್ ಸಿಡ್ನಿ ಸಿಕ್ಸರ್ಸ್ ಆಶ್ಲೀ ಗಾರ್ಡ್ನರ್
9ನೇ (2023-24) ಅಡಿಲೇಡ್ ಸ್ಟ್ರೈಕರ್ಸ್ ಬ್ರಿಸ್ಬೇನ್ ಹೀಟ್ ಚಾಮರಿ ಅಥಾಪತ್ತು
10ನೇ (2024-25) ಮೆಲ್ಬೋರ್ನ್ ರೆನೆಗೇಡ್ಸ್ ಬ್ರಿಸ್ನೇನ್ ಹೀಟ್ ಎಲ್ಲಿಸ್ ಪೆರ್ರಿ