AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WCL 2025: ಜುಲೈ 20 ರಂದು ಭಾರತ- ಪಾಕಿಸ್ತಾನ ನಡುವೆ ಕ್ರಿಕೆಟ್ ಕದನ

WCL 2025:2025 ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಜುಲೈ 18 ರಿಂದ ಆರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮಹತ್ವದ ಪಂದ್ಯ ಜುಲೈ 20 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿದೆ. ಯುವರಾಜ್ ಸಿಂಗ್ ನೇತೃತ್ವದ ಭಾರತ ತಂಡ ಮತ್ತು ಮೊಹಮ್ಮದ್ ಹಫೀಜ್ ನೇತೃತ್ವದ ಪಾಕಿಸ್ತಾನ ತಂಡದಲ್ಲಿ ಅನೇಕ ಸ್ಟಾರ್ ಆಟಗಾರರಿದ್ದಾರೆ. ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಮತ್ತು ಫ್ಯಾನ್‌ಕೋಡ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು.

WCL 2025: ಜುಲೈ 20 ರಂದು ಭಾರತ- ಪಾಕಿಸ್ತಾನ ನಡುವೆ ಕ್ರಿಕೆಟ್ ಕದನ
Ind Vs Pak
ಪೃಥ್ವಿಶಂಕರ
|

Updated on: Jul 18, 2025 | 10:19 PM

Share

2025 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ( World Championship of Legends 2025) ಟೂರ್ನಮೆಂಟ್ ಜುಲೈ 18 ರ ಶುಕ್ರವಾರದಿಂದ ಪ್ರಾರಂಭವಾಗಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಲೀಗ್​ನ ಹಾಲಿ ಚಾಂಪಿಯನ್ ಆಗಿರುವ ಭಾರತ ಚಾಂಪಿಯನ್ಸ್ ತಂಡ ಕೂಡ ಯುವರಾಜ್ ಸಿಂಗ್ ನಾಯಕತ್ವದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ವೇಳಾಪಟ್ಟಿಯ ಪ್ರಕಾರ ಭಾರತ ಚಾಂಪಿಯನ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಕಳೆದ ಬಾರಿಯ ಫೈನಲ್ ಪಂದ್ಯದ ಎದುರಾಳಿ ಹಾಗೂ ಬದ್ಧವೈರಿ ಪಾಕಿಸ್ತಾನ ಚಾಂಪಿಯನ್ಸ್ (India vs Pakistan) ತಂಡದ ವಿರುದ್ಧ ಆಡಲಿದೆ.

ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ?

ಭಾರತ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ನಡುವಿನ ಪಂದ್ಯವು ಜುಲೈ 20 ರಂದು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳಲ್ಲಿ ಲೆಜೆಂಡರಿ ಆಟಗಾರರ ದಂಡೇ ಇದೆ. ಈ ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ 1 ನಲ್ಲಿ ಪ್ರಸಾರ ಮಾಡಲಾಗುತ್ತದೆ ಮತ್ತು ನೇರ ಪ್ರಸಾರವು ಫ್ಯಾನ್‌ಕೋಡ್ ಅಪ್ಲಿಕೇಶನ್‌ನಲ್ಲಿರುತ್ತದೆ. ಈ ಪಂದ್ಯಾವಳಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 9 ಗಂಟೆಗೆ ಪ್ರಾರಂಭವಾಗುತ್ತವೆ ಮತ್ತು ಡಬಲ್ ಹೆಡರ್ ದಿನದ ಪಂದ್ಯಗಳು ಸಂಜೆ 5 ಗಂಟೆಗೆ ಪ್ರಾರಂಭವಾಗುತ್ತವೆ.

ಇನ್ನು ತಂಡದ ಬಗ್ಗೆ ಹೇಳುವುದಾದರೆ, ಯುವರಾಜ್ ಸಿಂಗ್ ಹೊರತುಪಡಿಸಿ, ಶಿಖರ್ ಧವನ್, ಸುರೇಶ್ ರೈನಾ, ಅಂಬಟಿ ರಾಯುಡು, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ರಾಬಿನ್ ಉತ್ತಪ್ಪ, ಹರ್ಭಜನ್ ಸಿಂಗ್ ಸೇರಿದಂತೆ ಅನೇಕ ಆಟಗಾರರು ಇಂಡಿಯಾ ಚಾಂಪಿಯನ್ಸ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೆಯೇ ಪಾಕಿಸ್ತಾನ ತಂಡದಲ್ಲಿ ಶೋಯೆಬ್ ಮಲಿಕ್, ಮಿಸ್ಬಾ-ಉಲ್-ಹಕ್, ಯೂನಸ್ ಖಾನ್, ಅಬ್ದುಲ್ ರಜಾಕ್, ಕಮ್ರಾನ್ ಅಕ್ಮಲ್, ಸರ್ಫರಾಜ್ ಖಾನ್, ಸೊಹೈಲ್ ತನ್ವೀರ್ ಮತ್ತು ವಹಾಬ್ ರಿಯಾಜ್ ಸೇರಿದಂತೆ ಅನೇಕ ಆಟಗಾರರು ಸ್ಥಾನ ಪಡೆದಿದ್ದಾರೆ.

ಭಾರತ ಚಾಂಪಿಯನ್ಸ್: ಯುವರಾಜ್ ಸಿಂಗ್ (ನಾಯಕ), ಶಿಖರ್ ಧವನ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಪಿಯೂಷ್ ಚಾವ್ಲಾ, ಸ್ಟುವರ್ಟ್ ಬಿನ್ನಿ, ವರುಣ್ ಆರೋನ್, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಸಿದ್ಧಾರ್ಥ್ ಕೌಲ್, ಗುರುಕೀರತ್ ಮಾನ್.

ಪಾಕಿಸ್ತಾನ ಚಾಂಪಿಯನ್ಸ್: ಮೊಹಮ್ಮದ್ ಹಫೀಜ್ (ನಾಯಕ), ಶೋಯೆಬ್ ಮಲಿಕ್, ಸರ್ಫ್ರಾಜ್ ಅಹ್ಮದ್, ಶರ್ಜೀಲ್ ಖಾನ್, ವಹಾಬ್ ರಿಯಾಜ್, ಆಸಿಫ್ ಅಲಿ, ಶಾಹಿದ್ ಅಫ್ರಿದಿ, ಕಮ್ರಾನ್ ಅಕ್ಮಲ್, ಅಮೀರ್ ಯಾಮಿನ್, ಸೊಹೈಲ್ ಖಾನ್, ಸೊಹೈಲ್ ತನ್ವೀರ್.

WCL 2025: 30 ಗ್ರಾಂ ಚಿನ್ನ ಮಿಶ್ರಿತ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ ವೆಸ್ಟ್ ಇಂಡೀಸ್ ಚಾಂಪಿಯನ್ ತಂಡ

ಪೂರ್ಣ ವೇಳಾಪಟ್ಟಿ

  • ಜುಲೈ 18 – ಇಂಗ್ಲೆಂಡ್ ಚಾಂಪಿಯನ್ಸ್ vs ಪಾಕಿಸ್ತಾನ ಚಾಂಪಿಯನ್ಸ್, ರಾತ್ರಿ 9 ಗಂಟೆಗೆ
  • ಜುಲೈ 19 – ವೆಸ್ಟ್ ಇಂಡೀಸ್ ಚಾಂಪಿಯನ್ಸ್ vs ದಕ್ಷಿಣ ಆಫ್ರಿಕಾ ಚಾಂಪಿಯನ್ಸ್, ಸಂಜೆ 5:00
  • ಜುಲೈ 19 – ಇಂಗ್ಲೆಂಡ್ ಚಾಂಪಿಯನ್ಸ್ vs ಆಸ್ಟ್ರೇಲಿಯಾ ಚಾಂಪಿಯನ್ಸ್, ರಾತ್ರಿ 9 ಗಂಟೆಗೆ
  • ಜುಲೈ 20 – ಭಾರತ ಚಾಂಪಿಯನ್ಸ್ vs ಪಾಕಿಸ್ತಾನ ಚಾಂಪಿಯನ್ಸ್, ರಾತ್ರಿ 9 ಗಂಟೆಗೆ
  • ಜುಲೈ 22 – ಇಂಗ್ಲೆಂಡ್ ಚಾಂಪಿಯನ್ಸ್ vs ವೆಸ್ಟ್ ಇಂಡೀಸ್ ಚಾಂಪಿಯನ್ಸ್, ಸಂಜೆ 5:00
  • ಜುಲೈ 22 – ಭಾರತ ಚಾಂಪಿಯನ್ಸ್ vs ದಕ್ಷಿಣ ಆಫ್ರಿಕಾ ಚಾಂಪಿಯನ್ಸ್, ರಾತ್ರಿ 9 ಗಂಟೆಗೆ
  • ಜುಲೈ 23 – ಆಸ್ಟ್ರೇಲಿಯಾ ಚಾಂಪಿಯನ್ಸ್ vs ವೆಸ್ಟ್ ಇಂಡೀಸ್ ಚಾಂಪಿಯನ್ಸ್, ರಾತ್ರಿ 9 ಗಂಟೆಗೆ
  • ಜುಲೈ 24 – ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ vs ಇಂಗ್ಲೆಂಡ್ ಚಾಂಪಿಯನ್ಸ್, ರಾತ್ರಿ 9 ಗಂಟೆಗೆ
  • ಜುಲೈ 25 – ಪಾಕಿಸ್ತಾನ ಚಾಂಪಿಯನ್ಸ್ vs ದಕ್ಷಿಣ ಆಫ್ರಿಕಾ ಚಾಂಪಿಯನ್ಸ್, ರಾತ್ರಿ 9 ಗಂಟೆಗೆ
  • ಜುಲೈ 26 – ಭಾರತ ಚಾಂಪಿಯನ್ಸ್ vs ಆಸ್ಟ್ರೇಲಿಯಾ ಚಾಂಪಿಯನ್ಸ್, ಸಂಜೆ 5:00
  • ಜುಲೈ 26 – ಪಾಕಿಸ್ತಾನ ಚಾಂಪಿಯನ್ಸ್ vs ವೆಸ್ಟ್ ಇಂಡೀಸ್ ಚಾಂಪಿಯನ್ಸ್, ರಾತ್ರಿ 9 ಗಂಟೆಗೆ
  • ಜುಲೈ 27 – ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ vs ಆಸ್ಟ್ರೇಲಿಯಾ ಚಾಂಪಿಯನ್ಸ್, ಸಂಜೆ 5:00
  • ಜುಲೈ 27 – ಭಾರತ ಚಾಂಪಿಯನ್ಸ್ vs ಇಂಗ್ಲೆಂಡ್ ಚಾಂಪಿಯನ್ಸ್, ರಾತ್ರಿ 9 ಗಂಟೆಗೆ
  • ಜುಲೈ 29 – ಆಸ್ಟ್ರೇಲಿಯಾ ಚಾಂಪಿಯನ್ಸ್ vs ಪಾಕಿಸ್ತಾನ ಚಾಂಪಿಯನ್ಸ್, ಸಂಜೆ 5:00
  • ಜುಲೈ 29 – ಇಂಡಿಯಾ ಚಾಂಪಿಯನ್ಸ್ vs ವೆಸ್ಟ್ ಇಂಡೀಸ್ ಚಾಂಪಿಯನ್ಸ್, ರಾತ್ರಿ 9 ಗಂಟೆಗೆ
  • ಜುಲೈ 31 – ಮೊದಲ ಸೆಮಿಫೈನಲ್, ಸಂಜೆ 5 ಗಂಟೆಗೆ
  • ಜುಲೈ 31 – ಎರಡನೇ ಸೆಮಿಫೈನಲ್, ರಾತ್ರಿ 9 ಗಂಟೆಗೆ
  • ಆಗಸ್ಟ್ 2 – ಫೈನಲ್, ರಾತ್ರಿ 9 ಗಂಟೆಗೆ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ