AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WCL 2025: 30 ಗ್ರಾಂ ಚಿನ್ನ ಮಿಶ್ರಿತ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ ವೆಸ್ಟ್ ಇಂಡೀಸ್ ಚಾಂಪಿಯನ್ ತಂಡ

WCL 2025: 2025ರ ಲೆಜೆಂಡ್ಸ್ ಕ್ರಿಕೆಟ್ ಚಾಂಪಿಯನ್‌ಶಿಪ್ ಟೂರ್ನಮೆಂಟ್ ಜುಲೈ 18ರಿಂದ ಆರಂಭವಾಗುತ್ತಿದೆ. ಈ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡ 30 ಗ್ರಾಂ ಚಿನ್ನ ಮಿಶ್ರತ ಜೆರ್ಸಿಯನ್ನು ಧರಿಸಲಿದೆ ಎಂದು ವರದಿಯಾಗಿದೆ. ಈ ಪಂದ್ಯಾವಳಿಯಲ್ಲಿ ಭಾರತ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಭಾಗವಹಿಸುತ್ತಿವೆ.

WCL 2025: 30 ಗ್ರಾಂ ಚಿನ್ನ ಮಿಶ್ರಿತ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ ವೆಸ್ಟ್ ಇಂಡೀಸ್ ಚಾಂಪಿಯನ್ ತಂಡ
West Indies Champions
ಪೃಥ್ವಿಶಂಕರ
|

Updated on: Jul 18, 2025 | 9:41 PM

Share

ಎರಡನೇ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2025 (World Championship Of Legends 2025) ಟೂರ್ನಮೆಂಟ್ ಜುಲೈ 18 ರ ಶುಕ್ರವಾರದಿಂದ ಪ್ರಾರಂಭವಾಗುತ್ತಿದೆ. ಈ ಟೂರ್ನಮೆಂಟ್‌ನಲ್ಲಿ, ಇಂಡಿಯಾ ಚಾಂಪಿಯನ್ಸ್, ವೆಸ್ಟ್ ಇಂಡೀಸ್ ಚಾಂಪಿಯನ್ಸ್, ಸೌತ್ ಆಫ್ರಿಕಾ ಚಾಂಪಿಯನ್ಸ್, ಪಾಕಿಸ್ತಾನ ಚಾಂಪಿಯನ್ಸ್, ಆಸ್ಟ್ರೇಲಿಯಾ ಚಾಂಪಿಯನ್ಸ್ ಮತ್ತು ಇಂಗ್ಲೆಂಡ್ ಚಾಂಪಿಯನ್ಸ್ ತಂಡಗಳು ಭಾಗವಹಿಸುತ್ತಿವೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ನಡುವೆ ವೆಸ್ಟ್ ಇಂಡೀಸ್ ಚಾಂಪಿಯನ್ಸ್ (West Indies Champions) ತಂಡಕ್ಕೆ ಸಂಬಂಧಿಸಿದ ಸುದ್ದಿಯೊಂದು ಸಾಕಷ್ಟು ಸದ್ದು ಮಾಡುತ್ತಿದ್ದು, ಈ ತಂಡದ ಆಟಗಾರರು 30 ಗ್ರಾಂ ಚಿನ್ನದಿಂದ ತಯಾರಿಸಲಾಗಿರುವ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದೆ ಎಂದು ವರದಿಯಾಗಿದೆ.

ದುಬಾರಿ ಬೆಲೆಯ ಜೆರ್ಸಿ ಧರಿಸಲಿದೆ ವಿಂಡೀಸ್ ತಂಡ

ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡ ಧರಿಸಲಿರುವ ಈ ಜೆರ್ಸಿಯ ಬೆಲೆ ಇನ್ನೂ ತಿಳಿದುಬಂದಿಲ್ಲ ಆದರೆ ಇದನ್ನು ದುಬೈನ ಲಾರೆನ್ಸ್ ಗ್ರೂಪ್ ಚಾನೆಲ್ 2 ಗ್ರೂಪ್‌ನ ಸಹಭಾಗಿತ್ವದಲ್ಲಿ ತಯಾರಿಸಿದೆ. ಈ ಪಂದ್ಯಾವಳಿಯಲ್ಲಿ, ವೆಸ್ಟ್ ಇಂಡೀಸ್ ತಂಡದ ಅನೇಕ ಸ್ಟಾರ್ ಆಟಗಾರರು ಈ ಜೆರ್ಸಿಯನ್ನು ಧರಿಸುವುದನ್ನು ಕಾಣಬಹುದ್ದಾಗಿದ್ದು, ಇದೀಗ ಈ ಜೆರ್ಸಿಯನ್ನು ಕ್ರಿಸ್ ಗೇಲ್, ಕೀರನ್ ಪೊಲಾರ್ಡ್ ಮತ್ತು ಡ್ವೇನ್ ಬ್ರಾವೋ ಬಿಡುಗಡೆ ಮಾಡಿದ್ದಾರೆ.

2025 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಮೆಂಟ್ ಬಗ್ಗೆ ಹೇಳುವುದಾದರೆ, ಈ ಪಂದ್ಯಾವಳಿಯಲ್ಲಿ ಅನೇಕ ಲೆಜೆಂಡರಿ ಆಟಗಾರರು ಆಡಲಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರು ಮಾತ್ರ ಇದರಲ್ಲಿ ಆಡುವುದನ್ನು ಕಾಣಬಹುದು. ವೆಸ್ಟ್ ಇಂಡೀಸ್ ತಂಡದ ನಾಯಕತ್ವವನ್ನು ಕ್ರಿಸ್ ಗೇಲ್ ಅವರಿಗೆ ವಹಿಸಲಾಗಿದೆ. ಇದು ಮಾತ್ರವಲ್ಲದೆ, ತಂಡವು ಅನೇಕ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳು ಮತ್ತು ಮಾರಕ ಬೌಲರ್‌ಗಳನ್ನು ಸಹ ಒಳಗೊಂಡಿದೆ.

WCL 2025: ಇಂದಿನಿಂದ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಲೀಗ್; ಪಂದ್ಯ ಎಷ್ಟು ಗಂಟೆಗೆ ಆರಂಭ? ಲೈವ್ ವೀಕ್ಷಿಸುವುದು ಹೇಗೆ?

ವೆಸ್ಟ್ ಇಂಡೀಸ್ ಚಾಂಪಿಯನ್ಸ್‌ ತಂಡ: ಕ್ರಿಸ್ ಗೇಲ್, ಕೀರನ್ ಪೊಲಾರ್ಡ್, ಡ್ವೇನ್ ಬ್ರಾವೋ, ಲೆಂಡ್ಲ್ ಸಿಮ್ಮನ್ಸ್, ಡ್ವೇನ್ ಸ್ಮಿತ್, ಶೆಲ್ಡನ್ ಕಾಟ್ರೆಲ್, ಶಿವನಾರಾಯಣ್ ಚಂದ್ರಪಾಲ್, ಚಾಡ್ವಿಕ್ ವಾಲ್ಟನ್, ಶಾನನ್ ಗೇಬ್ರಿಯಲ್, ಆಶ್ಲೇ ನರ್ಸ್, ಫಿಡೆಲ್ ಎಡ್ವರ್ಡ್ಸ್, ವಿಲಿಯಂ ಪರ್ಕಿನ್ಸ್, ಸುಲೈಮನ್ ಬೆನ್, ಡೇವ್ ಮೊಹಮ್ಮದ್, ನಿಕಿತಾ ಮಿಲ್ಲರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಸಿಜೆಪಿ ಪ್ರತಿಭಟನೆಗೂ ಮುನ್ನ ಪೊಲೀಸರ ಕಾರ್ಯಾಚರಣೆ: 30 ರಿಂದ 40 ಜನ ವಶಕ್ಕೆ
ಸಿಜೆಪಿ ಪ್ರತಿಭಟನೆಗೂ ಮುನ್ನ ಪೊಲೀಸರ ಕಾರ್ಯಾಚರಣೆ: 30 ರಿಂದ 40 ಜನ ವಶಕ್ಕೆ
ಪತ್ನಿ ಸೋನಲ್ ಕಡೆಯಿಂದ ಸಿಕ್ಕ ವಿಶೇಷ ಉಡುಗೊರೆ ಬಗ್ಗೆ ಹೇಳಿದ ತರುಣ್ ಸುಧೀರ್ 
ಪತ್ನಿ ಸೋನಲ್ ಕಡೆಯಿಂದ ಸಿಕ್ಕ ವಿಶೇಷ ಉಡುಗೊರೆ ಬಗ್ಗೆ ಹೇಳಿದ ತರುಣ್ ಸುಧೀರ್ 
ಮಹಾಲಯ ಅಮಾವಾಸ್ಯೆ: ಪಿತೃಗಳಿಗೆ ಕೃತಜ್ಞತೆ ಸಲ್ಲಿಸುವ ಈ ದಿನದ ಮಹತ್ವ
ಮಹಾಲಯ ಅಮಾವಾಸ್ಯೆ: ಪಿತೃಗಳಿಗೆ ಕೃತಜ್ಞತೆ ಸಲ್ಲಿಸುವ ಈ ದಿನದ ಮಹತ್ವ
ಏಳು ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಈ ವಾರ ಹೊರ ಹೋಗೋದು ಯಾರು?
ಏಳು ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಈ ವಾರ ಹೊರ ಹೋಗೋದು ಯಾರು?
ಬೆಂಗಳೂರು: ಬ್ರಿಗೇಡ್ ರಸ್ತೆ ಲೇಡಿಸ್​​ ಪಬ್​​ಗಳ ಮೇಲೆ ಪೊಲೀಸರ ದಿಢೀರ್ ದಾಳಿ
ಬೆಂಗಳೂರು: ಬ್ರಿಗೇಡ್ ರಸ್ತೆ ಲೇಡಿಸ್​​ ಪಬ್​​ಗಳ ಮೇಲೆ ಪೊಲೀಸರ ದಿಢೀರ್ ದಾಳಿ
ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ
ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?