ಡಿವಿಲಿಯರ್ಸ್ ಎಸೆದ ಬುಲೆಟ್ ಥ್ರೋ ಆಫ್ರಿಕಾ ತಂಡವನ್ನು ಫೈನಲ್ಗೇರಿಸಿತು..! ಹೇಗೆ ಗೊತ್ತಾ? ವಿಡಿಯೋ ನೋಡಿ
WCL 2025 Final: 2025ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾವನ್ನು ಒಂದು ರನ್‌ನಿಂದ ರೋಮಾಂಚಕ ಪಂದ್ಯದಲ್ಲಿ ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ಎಬಿ ಡಿವಿಲಿಯರ್ಸ್ ಅವರ ಅದ್ಭುತ ಫೀಲ್ಡಿಂಗ್ ಮತ್ತು ನಿಖರ ಎಸೆತಗಳು ದಕ್ಷಿಣ ಆಫ್ರಿಕಾದ ಗೆಲುವಿಗೆ ಕಾರಣವಾಯಿತು.

2025 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ನ ಪ್ರಶಸ್ತಿ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಆಗಸ್ಟ್ 2 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿರುವ ಈ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಪರಸ್ಪರ ಮುಖಾಮುಖಿಯಾಗಲಿವೆ. ಆಗಸ್ಟ್ 1 ರಂದು ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ, 41 ವರ್ಷದ ನಾಯಕ ಎಬಿ ಡಿವಿಲಿಯರ್ಸ್ ಅವರ ಅದ್ಭುತ ಫೀಲ್ಡಿಂಗ್‌ನಿಂದ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾವನ್ನು ಒಂದು ರನ್‌ನಿಂದ ಸೋಲಿಸಿ ಫೈನಲ್‌ಗೇರುವಲ್ಲಿ ಯಶಸ್ವಿಯಾಯಿತು. ಇತ್ತ ಮೊದಲ ಸೆಮಿಫೈನಲ್ ಪಂದ್ಯ ಭಾರತ ಹಾಗೂ ಪಾಕಿಸ್ತಾನದ ವಿರುದ್ಧ ನಡೆಯಬೇಕಿತ್ತು. ಆದರೆ ಪಾಕಿಸ್ತಾನದ ವಿರುದ್ಧ ಪಂದ್ಯವನ್ನಾಡಲು ನಿರಾಕರಿಸಿ ಭಾರತ ತಂಡ ಟೂರ್ನಿಯಿಂದ ತನ್ನ ಹೆಸರನ್ನು ಹಿಂಪಡೆದುಕೊಂಡಿತು. ಹೀಗಾಗಿ ಪಾಕಿಸ್ತಾನ ತಂಡ ಸೆಮಿಫೈನಲ್ ಪಂದ್ಯವನ್ನಾಡದೆ ಫೈನಲ್ಗೇರಿತು.
ಕೊನೆಯ ಎಸೆತದಲ್ಲಿ ಸೋತ ಆಸ್ಟ್ರೇಲಿಯಾ
WCL 2025 ರ ಎರಡನೇ ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 186 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಚಾಂಪಿಯನ್ಸ್‌ಗೆ ಕೊನೆಯ ಎಸೆತದಲ್ಲಿ ಮೂರು ರನ್‌ಗಳು ಬೇಕಾಗಿದ್ದವು, ಆದರೆ ನಾಯಕ ಎಬಿ ಡಿವಿಲಿಯರ್ಸ್ ಅವರ ನಿಖರವಾದ ಎಸೆತವು ಆಸೀಸ್ ತಂಡದ ಭರವಸೆಯನ್ನು ಹುಸಿಗೊಳಿಸಿತು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ ರೋಮಾಂಚಕ ಪಂದ್ಯದಲ್ಲಿ ಒಂದು ರನ್‌ನಿಂದ ಸೋಲನ್ನು ಎದುರಿಸಬೇಕಾಯಿತು.
Australian Legends needed 3 runs off 1 ball & AB de Villiers pulled off a perfect throw to take South Africa legends to the finals of the WCL 2025.
Talk about clutchnessss.🐐🐐pic.twitter.com/3sJyALTf9e
— . (@ABDszn17) July 31, 2025
ಬ್ಯಾಟಿಂಗ್ನಲ್ಲಿ ಡಿವಿಲಿಯರ್ಸ್ ವಿಫಲ
ಇದಕ್ಕೂ ಮೊದಲು, ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಜೆಜೆ ಸ್ಮಟ್ಸ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೋರ್ನೆ ವ್ಯಾನ್ ವೈಕ್ ಅವರ ಅದ್ಭುತ ಅರ್ಧಶತಕದ ಸಹಾಯದಿಂದ, ದಕ್ಷಿಣ ಆಫ್ರಿಕಾ 186 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ, ನಾಯಕ ಎಬಿ ಡಿವಿಲಿಯರ್ಸ್ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ ಮತ್ತು ಕೇವಲ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇದರ ನಂತರ, ಸ್ಮಟ್ಸ್ ಮತ್ತು ವೈಕ್ ಎರಡನೇ ವಿಕೆಟ್‌ಗೆ 60 ಎಸೆತಗಳಲ್ಲಿ 111 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.
ಸ್ಮಟ್ಸ್ 41 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಾರ್ನೆ ವ್ಯಾನ್ ವೈಕ್ 35 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 7 ಬೌಂಡರಿ ನೆರವಿನಿಂದ 76 ರನ್ ಗಳಿಸಿದರು. ಈ ಇಬ್ಬರನ್ನು ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್‌ಮನ್ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಪರ ಪೀಟರ್ ಸಿಡ್ಲ್ ಗರಿಷ್ಠ 4 ವಿಕೆಟ್ ಪಡೆದರೆ, ಡಿ’ಆರ್ಸಿ ಶಾರ್ಟ್ ಎರಡು ವಿಕೆಟ್ ಪಡೆದರು. ನಾಯಕ ಬ್ರೆಟ್ ಲೀ ಒಂದು ವಿಕೆಟ್ ಪಡೆದರು.
AB De Villiers Celebrating With His Family After Qualify For Final in WCL. 😍🫶#abdevilliers #WCL2025 #cricket #wcl pic.twitter.com/mdjRhLJxKQ
— Honest Cricket Fan’s (@maddiess18) August 1, 2025
ವೇಗದ ಆರಂಭ ಪಡೆದ ಆಸ್ಟ್ರೇಲಿಯಾ
ದಕ್ಷಿಣ ಆಫ್ರಿಕಾ ನೀಡಿದ್ದ 187 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡ ಕೂಡ ಸ್ಫೋಟಕ ಆರಂಭ ಪಡೆಯಿತು. ಆರಂಭಿಕರಾದ ಶಾನ್ ಮಾರ್ಷ್ (25) ಮತ್ತು ಕ್ರಿಸ್ ಲಿನ್ (35) ಮೊದಲ ವಿಕೆಟ್‌ಗೆ 27 ಎಸೆತಗಳಲ್ಲಿ 45 ರನ್ ಸೇರಿಸಿದರು. ಮೊದಲ ವಿಕೆಟ್ ಪತನದ ನಂತರ, ಮಾರ್ಷ್ ಡಿ’ಆರ್ಸಿ ಶಾರ್ಟ್ (33) ಅವರೊಂದಿಗೆ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ದರು, ಆದರೆ ಮಾರ್ಷ್ ಔಟಾದ ತಕ್ಷಣ ಆಸ್ಟ್ರೇಲಿಯಾದ ಇನ್ನಿಂಗ್ಸ್ ಕುಸಿಯಿತು.
ಆಸ್ಟ್ರೇಲಿಯಾ ಪರ, ಡೇನಿಯಲ್ ಕ್ರಿಶ್ಚಿಯನ್ 29 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ ಅಜೇಯ 49 ರನ್ ಗಳಿಸಿದರು. ಇವರ ನಂತರ ಬಂದ ಯಾವುದೇ ಬ್ಯಾಟ್ಸ್ಮನ್ಗೆ ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆಸ್ಟ್ರೇಲಿಯಾ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 185 ರನ್‌ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಎಸೆತದಲ್ಲಿ, ಆಸ್ಟ್ರೇಲಿಯಾ ಗೆಲ್ಲಲು ಒಂದು ಎಸೆತದಲ್ಲಿ ಮೂರು ರನ್‌ಗಳ ಅಗತ್ಯವಿತ್ತು, ಆದರೆ ವೇಯ್ನ್ ಪಾರ್ನೆಲ್ ಅವರ ಅದ್ಭುತ ಬೌಲಿಂಗ್ ಮತ್ತು ಎಬಿ ಡಿವಿಲಿಯರ್ಸ್ ಅವರ ನಿಖರವಾದ ಎಸೆತವು ಕಾಂಗರೂಗಳ ಭರವಸೆಯನ್ನು ಹುಸಿಗೊಳಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:31 pm, Fri, 1 August 25
