IND vs PAK: ಈ ವರ್ಷ ಭಾರತ-ಪಾಕಿಸ್ತಾನ್ 5 ಬಾರಿ ಮುಖಾಮುಖಿ ಸಾಧ್ಯತೆ..!

| Updated By: ಝಾಹಿರ್ ಯೂಸುಫ್

Updated on: Aug 04, 2022 | 11:51 AM

India vs Pakistan: ಏಷ್ಯಾಕಪ್​ನಲ್ಲಿ ಹಾಗೂ ಟಿ20 ವಿಶ್ವಕಪ್​ನಲ್ಲಿ ಒಂದೊಂದು ಬಾರಿ ಭಾರತ-ಪಾಕಿಸ್ತಾನ್ ಮುಖಾಮುಖಿ ಖಚಿತವಾಗಿದ್ದು, ಹೀಗಾಗಿ ಉಭಯ ತಂಡಗಳಿಂದ ಈ ಎರಡೂ ಪಂದ್ಯಗಳಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

IND vs PAK: ಈ ವರ್ಷ ಭಾರತ-ಪಾಕಿಸ್ತಾನ್ 5 ಬಾರಿ ಮುಖಾಮುಖಿ ಸಾಧ್ಯತೆ..!
India vs Pakistan
Follow us on

ಟಿ20 ವಿಶ್ವಕಪ್​ 2021 ರ ಹೀನಾಯ ಸೋಲಿನ ಬಳಿಕ ಭಾರತ ತಂಡವು ಪಾಕಿಸ್ತಾನ್ (India vs Pakistan) ವಿರುದ್ದ ಯಾವುದೇ ಪಂದ್ಯವಾಡಿಲ್ಲ. ಅತ್ತ ಉಭಯ ದೇಶಗಳು ಯಾವುದೇ ದ್ವಿಪಕ್ಷೀಯ ಸರಣಿಯನ್ನೂ ಕೂಡ ಆಡುತ್ತಿಲ್ಲ. ಹೀಗಾಗಿ ಮತ್ತೆ ಮುಖಾಮುಖಿಯಾಗಬೇಕಿದ್ದರೆ ಐಸಿಸಿ ಟೂರ್ನಿಯವರೆಗೂ ಕಾಯಬೇಕಿತ್ತು. ಆದರೆ ಈ ಸಲ ಏಷ್ಯಾ ಕಪ್ ನಡೆಸಲು ಏಷ್ಯನ್ ಕ್ರಿಕೆಟ್ ಅಸೋಷಿಯೇಷನ್ ಮುಂದಾಗಿದೆ. ಅದರಂತೆ ಟಿ20 ವಿಶ್ವಕಪ್​ಗೂ ಮುನ್ನವೇ ಈ ಬಾರಿ ಏಷ್ಯಾಕಪ್ ನಡೆಯುತ್ತಿದೆ. ವಿಶೇಷ ಎಂದರೆ ಈ ಬಾರಿ ಏಷ್ಯಾಕಪ್​ ಟಿ20 ಮಾದರಿಯಲ್ಲಿ ನಡೆಯಲಿದ್ದು, ಹೀಗಾಗಿ ಪಾಕಿಸ್ತಾನ್​ ವಿರುದ್ದ ಟಿ20 ವಿಶ್ವಕಪ್​ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ (Team India) ಮುಂದಿದೆ.

ಏಕೆಂದರೆ ಉಭಯ ತಂಡಗಳು ಒಂದೇ ಗ್ರೂಪ್​ನಲ್ಲಿದೆ. ಅಲ್ಲದೆ ಎರಡೂ ತಂಡಗಳು ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಇಲ್ಲಿ ಗ್ರೂಪ್ ಹಂತದಲ್ಲಿ ಭಾರತ-ಪಾಕಿಸ್ತಾನ್ ಆಗಸ್ಟ್ 28 ರಂದು ಸೆಣಸಲಿದೆ. ಗ್ರೂಪ್ ಹಂತದ 3 ತಂಡಗಳಿಂದ 2 ತಂಡಗಳು ಸೂಪರ್-4 ಹಂತಕ್ಕೆ ಹೋಗಲಿದೆ. ವಿಶೇಷ ಎಂದರೆ ಭಾರತ, ಪಾಕಿಸ್ತಾನ್ ಅಲ್ಲದೆ ಈ ಗ್ರೂಪ್​ನಲ್ಲಿರುವ ಮತ್ತೊಂದು ತಂಡ ಇನ್ನಷ್ಟೇ ಅರ್ಹತಾ ಸುತ್ತಿನಿಂದ ಆಯ್ಕೆಯಾಗಬೇಕಿದೆ. ಅಂದರೆ ಈ ಗ್ರೂಪ್​ನಲ್ಲಿ ಸ್ಥಾನ ಪಡೆಯಲಿರುವುದು ಬಲಿಷ್ಠ ತಂಡವಲ್ಲ.

ಇಲ್ಲಿ ಭಾರತ-ಪಾಕ್ ಬಲಿಷ್ಠವಾಗಿರುವ ಕಾರಣ ಎರಡೂ ತಂಡಗಳು ಸೂಪರ್-4 ಆಡುವುದು ಬಹುತೇಕ ಖಚಿತ. ಹೀಗಾಗಿ ಗ್ರೂಪ್​ ಹಂತದ ಬಳಿಕ ಉಭಯ ತಂಡಗಳು ಸೂಪರ್-4 ಹಂತದಲ್ಲಿ ಮುಖಾಮುಖಿಯಾಗಲಿದೆ ಎನ್ನಬಹುದು. ಹಾಗೆಯೇ ಎರಡೂ ತಂಡಗಳು ಫೈನಲ್​ಗೆ ಪ್ರವೇಶಿಸಿದರೆ ಮೂರನೇ ಬಾರಿ ಮುಖಾಮುಖಿಯಾಗಬಹುದು. ಹೀಗಾದರೆ ಏಷ್ಯಾಕಪ್​ನಲ್ಲೇ ಉಭಯ ತಂಡಗಳು ಪರಸ್ಪರ 3 ಬಾರಿ ಸೆಣಸುವ ಸಾಧ್ಯತೆಗಳಿವೆ.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇನ್ನು ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲೂ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಅಕ್ಟೋಬರ್ 23 ರಂದು ನಡೆಯಲಿರುವ ಸೂಪರ್-12 ಪಂದ್ಯದ ಮೂಲಕ ಉಭಯ ತಂಡಗಳು ಟಿ20 ವಿಶ್ವಕಪ್​ ಅಭಿಯಾನ ಆರಂಭಿಸಲಿರುವುದು ವಿಶೇಷ. ಇದಾಗಿ ಎರಡೂ ತಂಡಗಳು ಫೈನಲ್​ ಪ್ರವೇಶಿಸಿದರೆ ಮತ್ತೊಮ್ಮೆ ಮುಖಾಮುಖಿಯಾಗಬಹುದು. ಅಂದರೆ ಏಷ್ಯಾಕಪ್​ನಲ್ಲಿ 3 ಬಾರಿ ಹಾಗೂ ಟಿ20 ವಿಶ್ವಕಪ್​ನಲ್ಲಿ 2 ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದೆ. ಈ ಮೂಲಕ 2022 ರಲ್ಲಿ ಭಾರತ-ಪಾಕಿಸ್ತಾನ್ ನಡುವಣ 5 ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ಒದಗಿ ಬಂದರೂ ಅಚ್ಚರಿಪಡಬೇಕಿಲ್ಲ.

ಇದಾಗ್ಯೂ ಏಷ್ಯಾಕಪ್​ನಲ್ಲಿ ಹಾಗೂ ಟಿ20 ವಿಶ್ವಕಪ್​ನಲ್ಲಿ ಒಂದೊಂದು ಬಾರಿ ಭಾರತ-ಪಾಕಿಸ್ತಾನ್ ಮುಖಾಮುಖಿ ಖಚಿತವಾಗಿದ್ದು, ಹೀಗಾಗಿ ಉಭಯ ತಂಡಗಳಿಂದ ಈ ಎರಡೂ ಪಂದ್ಯಗಳಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಇದಾಗ್ಯೂ ಭಾರತ-ಪಾಕಿಸ್ತಾನ್ ನಡುವಣ ಹೆಚ್ಚುವರಿ 3 ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಕ್ರಿಕೆಟ್​ ಪ್ರೇಮಿಗಳಿಗೆ ಒದಗಿ ಬರಲಿದೆಯಾ ಕಾದು ನೋಡಬೇಕಿದೆ.