India vs England 3rd Test: ಹೆಡಿಂಗ್ಲೆಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್​ಗೆ ಮಳೆ ಅಡ್ಡಿಪಡಿಸಲಿದೆಯಾ?; ವರದಿ ಇಲ್ಲಿದೆ

| Updated By: shivaprasad.hs

Updated on: Aug 25, 2021 | 10:22 AM

Weater and Pitch Report: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಲೀಡ್ಸ್​​ಮ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿದ್ದು, ಹವಾಮಾನ ವರದಿ ಹಾಗೂ ಪಿಚ್ ರಿಪೋರ್ಟ್ ಇಲ್ಲಿದೆ.

India vs England 3rd Test: ಹೆಡಿಂಗ್ಲೆಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್​ಗೆ ಮಳೆ ಅಡ್ಡಿಪಡಿಸಲಿದೆಯಾ?; ವರದಿ ಇಲ್ಲಿದೆ
ಹೆಡಿಂಗ್ಲೆ ಮೈದಾನ (ಸಂಗ್ರಹ ಚಿತ್ರ)
Follow us on

ಕ್ರಿಕೆಟ್ ಕಾಶಿ ಲಾರ್ಡ್ಸ್ (Lords Test) ​ ಮೈದಾನದಲ್ಲಿ ಇಂಗ್ಲೆಂಡ್ (England) ವಿರುದ್ಧದ ಐತಿಹಾಸಿಕ ಗೆಲುವಿನ ಬಳಿಕ ಇದೀಗ ಟೀಮ್ ಇಂಡಿಯಾ ಮೂರನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದೆ. ಇಂದಿನಿಂದ(ಆಗಸ್ಟ್ 25) ಆರಂಭವಾಗಲಿರುವ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ (Virat Kohli) ಪಡೆ ಗೆಲುವು ದಾಖಲಿಸಿದರೆ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲಿದೆ. ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯವು ಡ್ರಾ ಆಗಿದ್ದು, ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿರುವ ಲೀಡ್ಸ್​​ನ ಹೆಡಿಂಗ್ಲೆ ಮೈದಾನವು ಇದುವರೆಗೆ ಭಾರತದ ಪರವಾಗಿ ಉತ್ತಮ ದಾಖಲೆಯನ್ನು ಹೊಂದಿದೆ.

ಭಾರತ ಹೆಡಿಂಗ್ಲೆಯಲ್ಲಿ ಕಳೆದ 51 ವರ್ಷಗಳಿಂದ ಸೋಲಿಲ್ಲದ ಸರದಾರನಾಗಿದ್ದರೆ, ಇಂಗ್ಲೆಂಡ್ ಈ ಮೈದಾನದಲ್ಲಿ ಆಡಿದ ಕೊನೆಯ ಹತ್ತು ಪಂದ್ಯಗಳಲ್ಲಿ 5ರಲ್ಲಿ ಸೋಲನುಭವಿಸಿದೆ. ಆದ್ದರಿಂದಲೇ ವಿರಾಟ್ ಕೊಹ್ಲಿ ಪಡೆ ಮತ್ತಷ್ಟು ಆತ್ಮವಿಶ್ವಾಸದಿಂದ ಈ ಮೈದಾನದಲ್ಲಿ ಕಣಕ್ಕಿಳಿಯಲಿದೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಲಾರ್ಡ್ಸ್​ನಲ್ಲಿ ನಡೆದ ಪಂದ್ಯಕ್ಕೂ ಮಳೆ ಹಾಜರಾಗುವ ಭೀತಿ ಇದ್ದೇ ಇತ್ತು. ಈ ನಡುವೆ ಹೆಡಿಂಗ್ಲೆಯ ಪಂದ್ಯಕ್ಕೆ ಹವಾಮಾನ ಹೇಗಿರಲಿದೆ ಎಂಬ ಮಾಹಿತಿ ಇಲ್ಲಿದೆ.

ಲೀಡ್ಸ್​​ನ ಹವಾಮಾನ ವರದಿ:

ಲೀಡ್ಸ್​ನಲ್ಲಿ ಬುಧವಾರವು ಬಹುತೇಕ ಬಿಸಿಲಿರಲಿದೆ ಎಂದು ಆಕ್ಯುವೆದರ್ ತನ್ನ ವರದಿಯಲ್ಲಿ ತಿಳಿಸಿದೆ. ದಿನದ ಪ್ರಾರಂಭದಲ್ಲಿ ಮೋಡಗಳು ಆವರಿಸುವ ಲಕ್ಷಣವಿದ್ದರೂ ಮಳೆಯ ಸಂಭವವಿಲ್ಲ ಎಂಬ ವರದಿ ಇರುವುದು ಕ್ರೀಡಾ ಪ್ರೇಮಿಗಳ ಮುಖದಲ್ಲಿ ಸಂತಸ ಮೂಡಿಸಿದೆ. ಪಂದ್ಯದ ಎಲ್ಲಾ ದಿನ ವಾತಾವರಣ ತಣ್ಣಗಿರಲಿದ್ದು, ಸುಮಾರು 18 ಡಿಗ್ರಿ ಸೆಲ್ಸಿಯಸ್ ಇಂದ 22 ಡಿಗ್ರಿ ಸೆಲ್ಸಿಯಸ್​ವರೆಗೆ ತಾಪಮಾನ ದಾಖಲಾಬಹುದು ಎಂದು ವರದಿ ತಿಳಿಸಿದೆ. ಅದಾಗ್ಯೂ ಇಂಗ್ಲೆಂಡ್​ನಂತಹ ದೇಶಗಳಲ್ಲಿ ಮಳೆಯ ವಾತಾವರಣವನ್ನು ತಳ್ಳಿ ಹಾಕುವಂತಿಲ್ಲ. ಇದಕ್ಕೆ ಪೂರಕವೆಂಬಂತೆ ಹವಾಮಾನ ವರದಿಯೂ ಬೆಳಕು ಚೆಲ್ಲಿದ್ದು, ಪಂದ್ಯದ ಕೊನೆಯ ಮೂರು ದಿನ ತುಸು ಮಳೆಯಾಗಬಹುದು ಎಂದು ತಿಳಿಸಿದೆ.

ಹೆಡಿಂಗ್ಲೆ ಕ್ರೀಡಾಂಗಣದ ಪಿಚ್ ವರದಿ:

ಹೆಡಿಂಗ್ಲೆ ಪಿಚ್ ವೇಗಿಗಳಿಗೆ ನೆರವು ನೀಡಲಿರುವುದರಿಂದ, ಭಾರತವು ತನ್ನ ಹಳೆಯ ಫಾರ್ಮುಲಾವನ್ನೇ ಮುಂದುವರೆಸುವ ನಿರೀಕ್ಷೆ ಇದೆ. ಅಂದರೆ ನಾಲ್ಕು ವೇಗಿಗಳು ಹಾಗೂ ಓರ್ವ ಸ್ಪಿನ್ ಬೌಲರ್​ನೊಂದಿಗೆ ಕೊಹ್ಲಿ ಪಡೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಈ ಕ್ರೀಡಾಂಗಣದಲ್ಲಿ ಆಡಲಾಗಿರುವ ಕೊನೆಯ ಎಂಟು ಪಂದ್ಯಗಳಲ್ಲಿ ಏಳು ಪಂದ್ಯಗಳಲ್ಲಿ ಫಲಿತಾಂಶ ಹೊರಹೊಮ್ಮಿದ್ದು, ಅದರಲ್ಲಿ ನಾಲ್ಕು ಬಾರಿ ಮೊದಲ ಬಾರಿ ಬ್ಯಾಟಿಂಗ್ ಮಾಡಿದ ತಂಡ ಜಯಗಳಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್​ಗೆ ಸಮಾನವಾಗಿ ನೆರವು ನೀಡುವ ಈ ಪಿಚ್​​ನಿಂದ ಉಭಯ ತಂಡಗಳಿಂದ ಸರಿಸಮಾನ ಪೈಪೋಟಿಯನ್ನು ಅಭಿಮಾನಿಗಳು ನಿರೀಕ್ಷಿಸಬಹುದು.

ಇದನ್ನೂ ಓದಿ:

India vs England 3rd Test: 51 ವರ್ಷಗಳಿಂದ ಈ ಪಿಚ್​ನಲ್ಲಿ ಭಾರತ ಸೋಲಿಲ್ಲದ ಸರದಾರ

India vs England: ಬರೋಬ್ಬರಿ 19 ವರ್ಷಗಳ ಬಳಿಕ ಲೀಡ್ಸ್​ನಲ್ಲಿ ಕಣಕ್ಕಿಳಿಯಲಿರುವ ಕೊಹ್ಲಿ ಪಡೆ: ಅಂಕಿ ಅಂಶ ಹೇಗಿದೆ?

(Weather repot and pitch repot of Headingley ground on India vs England 3rd test)