Rcb ತಂಡದಲ್ಲಿದ್ದ ಸ್ಪೋಟಕ ಬ್ಯಾಟ್ಸ್ಮನ್ಗೆ ಕೊರೋನಾ..!
Finn Allen: ಫಿನ್‌ಗೆ ಕೊರೊನಾ ಸೋಂಕು ತಗುಲಿರುವುದು ದುರದೃಷ್ಟಕರ. ಅವರು ಶೀಘ್ರದಲ್ಲೇ ಗುಣಮುಖರಾಗುವ ನಿರೀಕ್ಷೆಯಿದೆ.
ಬಾಂಗ್ಲಾದೇಶದ ವಿರುದ್ಧ ಟಿ 20 ಸರಣಿ ಆರಂಭಕ್ಕೂ ಮುನ್ನವೇ (Bangladesh vs New Zealand T20) ನ್ಯೂಜಿಲೆಂಡ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಬ್ಯಾಟ್ಸ್‌ಮನ್ ಫಿನ್ ಅಲೆನ್ (Finn Allen) ಕೊರೋನಾ ಪಾಸಿಟಿವ್ ಆಗಿದ್ದು, ಈ ಹಿನ್ನೆಲೆಯಲ್ಲಿ ತಂಡದಿಂದ ಹೊರಗುಳಿದಿದ್ದಾರೆ. ಹಂಡ್ರೆಡ್ ಲೀಗ್ (The Hundred) ಮುಗಿಸಿ ಇಂಗ್ಲೆಂಡ್ನಿಂದ ಹೊರಡಲುವ ಮುನ್ನ ನಡೆಸಿದ ಕೊರೋನಾ ಟೆಸ್ಟ್ ವರದಿಯು ನೆಗೆಟಿವ್ ಆಗಿತ್ತು. ಆದರೆ ಢಾಕಾ ಬಂದಿಳಿಯುತ್ತಿದ್ದಂತೆ ಫಿನ್ ಅಲೆನ್ ಫಿನ್ ಕೋವಿಡ್ -19 ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಇದೀಗ ಅಲೆನ್ ಪ್ರತ್ಯೇಕವಾಗಿ ಉಳಿದುಕೊಂಡಿದ್ದು, ನೆಗೆಟಿವ್ ವರದಿ ಬಂದ ಬಳಿಕವಷ್ಟೇ ತಂಡವನ್ನು ಸೇರಲಿದ್ದಾರೆ.
‘ಫಿಲ್ ಅಲೆನ್ ಪ್ರಸ್ತುತ ಕ್ವಾರಂಟೈನ್‌ನಲ್ಲಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ವೈದ್ಯಕೀಯ ಅಧಿಕಾರಿಗಳು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಾಗೆಯೇ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಮುಖ್ಯ ವೈದ್ಯಕೀಯ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ವೈದ್ಯರು ಪ್ಯಾಟ್ ಮೆಕ್‌ಹಗ್ ಕ್ವಾರಂಟೈನ್‌ನಲ್ಲಿ ಅವರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅಲೆನ್ ಗುಣಮುಖವಾಗುವ ವಿಶ್ವಾಸವಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ನ್ಯೂಜಿಲ್ಯಾಂಡ್‌ನ ಕ್ರಿಕೆಟ್ ವ್ಯವಸ್ಥಾಪಕ ಮೈಕೆಲ್ ಸ್ಯಾಂಡಲ್, ‘ಫಿನ್‌ಗೆ ಕೊರೊನಾ ಸೋಂಕು ತಗುಲಿರುವುದು ದುರದೃಷ್ಟಕರ. ಅವರು ಶೀಘ್ರದಲ್ಲೇ ಗುಣಮುಖರಾಗುವ ನಿರೀಕ್ಷೆಯಿದೆ. ಈ ಮೊದಲು ಅವರ ಕೋವಿಡ್ -19 ಟೆಸ್ಟ್ ಅವರ ರಿಪೋರ್ಟ್ ನೆಗೆಟಿವ್ ಆಗಿತ್ತು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಅತ್ಯಂತ ವೃತ್ತಿಪರವಾಗಿದೆ. ಅವರು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಇತರ ನ್ಯೂಜಿಲೆಂಡ್ ಆಟಗಾರರು ಸೋಮವಾರ ಆಕ್ಲೆಂಡ್‌ನಿಂದ ಹೊರಟು ಢಾಕಾ ತಲುಪಿದ್ದಾರೆ. ಅಲ್ಲಿ ಆಟಗಾರರಿಗೆ ಮೂರು ದಿನಗಳ ಕಾಲ ಪ್ರತ್ಯೇಕ ಕ್ವಾರಂಟೈನ್ ಇರಲಿದೆ. ಇದಾಗ್ಯೂ ನ್ಯೂಜಿಲೆಂಡ್ನ ಯಾವುದೇ ಆಟಗಾರರು ಫಿನ್ ಅಲೆನ್ ಜೊತೆ ನೇರ ಸಂಪರ್ಕ ಹೊಂದಿಲ್ಲ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದು, ಬಾಂಗ್ಲಾದೇಶದ ವಿರುದ್ಧ ಸರಣಿಯಲ್ಲಿ ಆಡುತ್ತಾರೆಯೇ ಎಂಬುದನ್ನು ಆ ಬಳಿಕವಷ್ಟೇ ನಿರ್ಧರಿಸಲಾಗುವುದು ಎಂದು ಸ್ಯಾಂಡಲ್ ತಿಳಿಸಿದರು.
ಇತ್ತ ಫಿನ್ ಅಲೆನ್ ಐಪಿಎಲ್ ದ್ವಿತಿಯಾರ್ಧದಿಂದ ಹೊರಗುಳಿದಿದ್ದಾರೆ. ಕಳೆದ ಬಾರಿ ಜೋಶ್ ಫಿಲಿಪೆ ಸ್ಥಾನದಲ್ಲಿ ಅವಕಾಶ ಪಡೆದಿದ್ದ ಅಲೆನ್ ಈ ಬಾರಿ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದಾಗ್ಯೂ ಮುಂದಿನ ಐಪಿಎಲ್ಗೆ ಹೆಸರು ನೋಂದಾಯಿಸಿಕೊಳ್ಳಲಿದ್ದಾರೆ. ಕಿವೀಸ್ ತಂಡದ ಯುವ ಸ್ಪೋಟಕ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಫಿನ್ ಅಲೆನ್ ಪ್ರಸ್ತುತ ಔಟ್ ಆಫ್ ಫಾರ್ಮ್ನಲ್ಲಿದ್ದಾರೆ. ಇದೇ ಕಾರಣದಿಂದ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಬಾಂಗ್ಲಾದೇಶದ ವಿರುದ್ದದ ಸರಣಿಯಿಂದ ಕೆಲ ಸ್ಟಾರ್ ಆಟಗಾರರು ಹೊರಗುಳಿದಿದ್ದು, ಹೀಗಾಗಿ ಅಲೆನ್ಗೆ ಅವಕಾಶ ನೀಡಲಾಗಿತ್ತು. ಇದೀಗ ಕೊರೋನಾ ಕಾರಣದಿಂದ ಸಿಕ್ಕ ಅವಕಾಶ ಕಳೆದುಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಹಾಕಬೇಕಿಲ್ಲ, ಚಾರ್ಜ್ ಕೂಡ ಮಾಡಬೇಕಿಲ್ಲ: ಇದು ಮಾರುತಿ ಸುಜುಕಿ ಹೊಸ ಕಾರು
ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!
ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!