AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

40 ವಿಕೆಟ್​​ಗಳು… ಹೊಸ ದಾಖಲೆಗೆ ಸಾಕ್ಷಿಯಾದ ಪಾಕಿಸ್ತಾನ್ vs ವೆಸ್ಟ್ ಇಂಡೀಸ್ ಪಂದ್ಯ

West Indies vs Pakistan, 1st Test: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಹೀನಾಯ ಸೋಲನುಭವಿಸಿದೆ. ಟ್ರಿನಿಡಾಡ್‌ನ ತಾರೂಬಾದಲ್ಲಿ ನಡೆದ ಈ ಪಂದ್ಯದ ಕೊನೆಯ ಇನಿಂಗ್ಸ್‌ನಲ್ಲಿ 211 ರನ್‌ಗಳ ಸುಲಭ ಗೆಲುವಿನ ಗುರಿ ಪಡೆದಿದ್ದ ಪಾಕಿಸ್ತಾನ್ ತಂಡವು ಕೆರಿಬಿಯನ್ ವೇಗಿಗಳ ದರ್ಬಾರ್‌ಗೆ ತತ್ತರಿಸಿ ಕೇವಲ 120 ರನ್‌ಗಳಿಗೆ ಧೂಳೀಪಟವಾಯಿತು. ಈ ಮೂಲಕ ವೆಸ್ಟ್ ಇಂಡೀಸ್ ತಂಡ 90 ರನ್​ಗಳ ಜಯ ಸಾಧಿಸಿದೆ.

40 ವಿಕೆಟ್​​ಗಳು… ಹೊಸ ದಾಖಲೆಗೆ ಸಾಕ್ಷಿಯಾದ ಪಾಕಿಸ್ತಾನ್ vs ವೆಸ್ಟ್ ಇಂಡೀಸ್ ಪಂದ್ಯ
Wi Vs PakImage Credit source: Espn
ಝಾಹಿರ್ ಯೂಸುಫ್
|

Updated on: Jul 30, 2026 | 12:34 PM

Share

ವೆಸ್ಟ್ ಇಂಡೀಸ್‌ನಲ್ಲಿ ಈವರೆಗೆ ಒಟ್ಟು 273 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ. ಆದರೆ, ಈ ಹಿಂದಿನ ಯಾವುದೇ ಪಂದ್ಯದಲ್ಲೂ ದಾಖಲಾಗದಂತಹ ಅಪರೂಪದ ದಾಖಲೆಗೆ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ್ ನಡುವಣ ಮೊದಲ ಟೆಸ್ಟ್ ಪಂದ್ಯ ಸಾಕ್ಷಿಯಾಗಿದೆ. ಅದು ಕೂಡ 40 ವಿಕೆಟ್​ಗಳ ಕಬಳಿಕೆಯೊಂದಿಗೆ..!

ಟ್ರಿನಿಡಾಡ್​​ನ ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಒಟ್ಟು 40 ವಿಕೆಟ್​ಗಳು ಉರುಳಿದ್ದವು. ಈ 40 ವಿಕೆಟ್​ಗಳನ್ನು ಕಬಳಿಸಿರುವುದು ವೇಗಿಗಳು ಎಂಬುದು ವಿಶೇಷ.

ಅಂದರೆ ಪಾಕಿಸ್ತಾನ್ ಪರ ಎರಡು ಇನಿಂಗ್ಸ್​ಗಳಲ್ಲಿ 20 ವಿಕೆಟ್​ಗಳನ್ನು ವೇಗದ ಬೌಲರ್​ಗಳು ಮಾತ್ರ ಕಬಳಿಸಿದ್ದರು. ಇತ್ತ ವೆಸ್ಟ್ ಇಂಡೀಸ್ ವೇಗಿಗಳು ಕೂಡ ಎರಡು ಇನಿಂಗ್ಸ್​ಗಳಿಂದ 20 ವಿಕೆಟ್ ಉರುಳಿಸಿದ್ದರು. ಈ ಮೂಲಕ ಕೆರಿಬಿಯನ್ ದ್ವೀಪದ ಟೆಸ್ಟ್ ಪಂದ್ಯದಲ್ಲಿ ವೇಗಿಗಳು ಪರಾಕ್ರಮ ಮೆರೆದಿದ್ದಾರೆ.

ಹಳೆಯ ದಾಖಲೆ ಉಡೀಸ್:

2025 ರಲ್ಲಿ ಕಿಂಗ್‌ಸ್ಟನ್‌ನ ಸಬೀನಾ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ವೇಗಿಗಳು 39 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದರು. ಆದರೆ ಇದೀಗ ಪಾಕಿಸ್ತಾನ್ ಮತ್ತು ವೆಸ್ಟ್ ಇಂಡೀಸ್ ವೇಗಿಗಳು ಒಟ್ಟು ಸೇರಿ 40 ವಿಕೆಟ್​ ಉರುಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ವೇಗಿಗಳ ಮಿಂಚಿಂಗ್:

ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್​ನ ಇಬ್ಬರು ವೇಗಿಗಳು ಐದು ವಿಕೆಟ್ ಕಬಳಿಸಿ ಮಿಂಚಿದ್ದರು. ಅತ್ತ ಪಾಕಿಸ್ತಾನ್ ಪರ ಕೂಡ ಓರ್ವ ವೇಗಿ ಐದು ವಿಕೆಟ್​ಗಳನ್ನು ಪಡೆದಿದ್ದರು.

  • ಜಸ್ಟಿನ್ ಗ್ರೀವ್ಸ್ (ವೆಸ್ಟ್ ಇಂಡೀಸ್): ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಇವರು ಸತತ 5 ಮೇಡನ್ ಓವರ್‌ಗಳ ಜೊತೆಗೆ ಒಟ್ಟು 7 ವಿಕೆಟ್ ಕಿತ್ತು ಮಿಂಚಿದರು.
  • ಜೇಡನ್ ಸೀಲ್ಸ್ (ವೆಸ್ಟ್ ಇಂಡೀಸ್): ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 20 ರನ್ ನೀಡಿ 5 ವಿಕೆಟ್ ಕಡಿಯುವ ಮೂಲಕ ವಿಂಡೀಸ್ ಗೆಲುವನ್ನು ಖಚಿತಪಡಿಸಿದರು.
  • ಮೊಹಮ್ಮದ್ ಅಬ್ಬಾಸ್ (ಪಾಕಿಸ್ತಾನ್): ಪಾಕಿಸ್ತಾನ ಪರ ಅಮೋಘ ಬೌಲಿಂಗ್ ಮಾಡಿದ ಇವರು ಪಂದ್ಯದಲ್ಲಿ ಒಟ್ಟು 8 ವಿಕೆಟ್ (ದ್ವಿತೀಯ ಇನ್ನಿಂಗ್ಸ್‌ನಲ್ಲಿ 5 ವಿಕೆಟ್) ಕಸಿದುಕೊಂಡರು.
  • ಮೊಹಮ್ಮದ್ ಅಲಿ (ಪಾಕಿಸ್ತಾನ್):  ಪಾಕ್ ವೇಗಿ ಮೊಹಮ್ಮದ್ ಅಲಿ ಒಟ್ಟು 6 ವಿಕೆಟ್ ಪಡೆಯುವ ಮೂಲಕ ತಮ್ಮ ಬೌಲಿಂಗ್ ಶಕ್ತಿಯನ್ನು ಪ್ರದರ್ಶಿಸಿದ್ದರು.

ಸಂಕ್ಷಿಪ್ತ ಸ್ಕೋರ್ ವಿವರಗಳು:

ಇನಿಂಗ್ಸ್ / ತಂಡ ಒಟ್ಟು ರನ್ (ವಿಕೆಟ್) ಬ್ಯಾಟರ್‌ಗಳ ಸ್ಕೋರ್ ಬೌಲರ್‌ಗಳ ವಿಕೆಟ್​
ವೆಸ್ಟ್ ಇಂಡೀಸ್ (1ನೇ ಇನಿಂಗ್ಸ್) 311/10 ಶೈ ಹೋಪ್ (92), ಕವೆಮ್ ಹಾಡ್ಜ್ (84) ಮೊಹಮ್ಮದ್ ಅಲಿ (4/50), ಆಮಿರ್ ಜಮಾಲ್ (3/62)
ಪಾಕಿಸ್ತಾನ್ (1ನೇ ಇನಿಂಗ್ಸ್) 282/10 ಶಾನ್ ಮಸೂದ್ (109), ಸೌದ್ ಶಕೀಲ್ (60) ಜಸ್ಟಿನ್ ಗ್ರೀವ್ಸ್ (5/27), ಅಲ್ಜಾರಿ ಜೋಸೆಫ್ (2/65)
ವೆಸ್ಟ್ ಇಂಡೀಸ್ (2ನೇ ಇನಿಂಗ್ಸ್) 181/10 ಶಮರ್ ಜೋಸೆಫ್ (38), ಜೋಶುವಾ ಡಾ ಸಿಲ್ವಾ (27) ಮೊಹಮ್ಮದ್ ಅಬ್ಬಾಸ್ (5/22), ಮೊಹಮ್ಮದ್ ಅಲಿ (3/45)
ಪಾಕಿಸ್ತಾನ್ (2ನೇ ಇನಿಂಗ್ಸ್) 120/10 ಬಾಬರ್ ಆಝಂ (58*), ಅಬ್ದುಲ್ಲಾ ಶಫೀಕ್ (15) ಜೇಡನ್ ಸೀಲ್ಸ್ (5/20), ಜಸ್ಟಿನ್ ಗ್ರೀವ್ಸ್ (2/35)

ಇದನ್ನೂ ಓದಿ: ರಾಹುಲ್ ದ್ರಾವಿಡ್ ಔಟ್, ಇಂಗ್ಲೆಂಡ್​ ತಂಡಕ್ಕೆ ಹೊಸ ಕೋಚ್ ಬಹುತೇಕ ಫಿಕ್ಸ್​!

ಒಟ್ಟಾರೆಯಾಗಿ ಹೇಳುವುದಾದರೆ, ಈ ಪಂದ್ಯವು ಕೇವಲ ಒಂದು ಗೆಲುವು ಅಥವಾ ಸೋಲಿಗೆ ಸೀಮಿತವಾಗದೆ, ಟೆಸ್ಟ್ ಕ್ರಿಕೆಟ್‌ನ ಅಸಲಿ ರೋಮಾಂಚನವನ್ನು ಜಗತ್ತಿಗೆ ಪರಿಚಯಿಸಿದೆ. ಆಧುನಿಕ ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳ ಪಾತ್ರ ದೊಡ್ಡದಾಗಿದ್ದರೂ, ಕೆರಿಬಿಯನ್ ಮಣ್ಣಿನ ಅಸಲಿ ಶಕ್ತಿ ಇರುವುದೇ ವೇಗದ ಬೌಲಿಂಗ್‌ನಲ್ಲಿ ಎಂಬುದನ್ನು ಈ ಪಂದ್ಯ ಮತ್ತೊಮ್ಮೆ ಸಾಬೀತುಪಡಿಸಿದೆ. ಟ್ರಿನಿಡಾಡ್‌ನ ಈ ಐತಿಹಾಸಿಕ ಪೇಸ್ ಪಂದ್ಯವು ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಎಂದೆಂದಿಗೂ ಹಸಿರಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

Follow Us
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ