Legends Cricket Trophy 2024: ಪಂದ್ಯ ಯಾವಾಗ ಆರಂಭ?, ಲೈವ್ ಸ್ಟ್ರೀಮಿಂಗ್ ಯಾವುದರಲ್ಲಿ?
Legends Cricket Trophy 2024 Live: ಈ ವರ್ಷದ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ ಸ್ಪರ್ಧೆಯ ಸ್ವರೂಪವು ಟಿ20 ಮಾದರಿಯಲ್ಲಿ ನಡೆಯುವುದಿಲ್ಲ. ದಿ ಹಂಡ್ರೆಡ್‌ನಂತೆ ಇದನ್ನು 90-ಬಾಲ್ ಮಾದರಿಯಲ್ಲಿ ಆಡಲಾಗುತ್ತದೆ. ಪ್ರತಿ ತಂಡವು ತಮ್ಮ ಇನ್ನಿಂಗ್ಸ್‌ನಲ್ಲಿ 90 ಎಸೆತಗಳನ್ನು ಆಡುತ್ತದೆ.

ಮಾರ್ಚ್ 8 ರಿಂದ ಪ್ರಾರಂಭವಾಗಲಿರುವ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ (LCT) ಯ ಎರಡನೇ ಆವೃತ್ತಿಯಲ್ಲಿ ನಿವೃತ್ತ ಅಂತರಾಷ್ಟ್ರೀಯ ಆಟಗಾರರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಲೆಜೆಂಡ್ ಆಟಗಾರರ ಆಟವನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾದುಕುಳಿತಿದ್ದಾರೆ. ಏಳು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಮಾರ್ಚ್ 19 ರವರೆಗೆ ಶ್ರೀಲಂಕಾದ ಕ್ಯಾಂಡಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ನ್ಯೂಯಾರ್ಕ್ ಸೂಪರ್ ಸ್ಟ್ರೈಕರ್ಸ್, ದುಬೈ ಜೈಂಟ್ಸ್, ಡೆಲ್ಲಿ ಡೆವಿಲ್ಸ್, ರಾಜಸ್ಥಾನ ಕಿಂಗ್ಸ್, ಕೊಲಂಬೊ ಲಯನ್ಸ್, ಕ್ಯಾಂಡಿ ಸ್ಯಾಂಪ್ ಆರ್ಮಿ ಮತ್ತು ಪಂಜಾಬ್ ರಾಯಲ್ಸ್ ಭಾಗವಹಿಸುವ ತಂಡಗಳು.
ಈ ವರ್ಷದ ಸ್ಪರ್ಧೆಯ ಸ್ವರೂಪವು ಟಿ20 ಮಾದರಿಯಲ್ಲಿ ನಡೆಯುವುದಿಲ್ಲ. ದಿ ಹಂಡ್ರೆಡ್‌ನಂತೆ ಇದನ್ನು 90-ಬಾಲ್ ಮಾದರಿಯಲ್ಲಿ ಆಡಲಾಗುತ್ತದೆ. ಪ್ರತಿ ತಂಡವು ತಮ್ಮ ಇನ್ನಿಂಗ್ಸ್‌ನಲ್ಲಿ 90 ಎಸೆತಗಳನ್ನು ಆಡುತ್ತದೆ. ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿಯ ಎರಡನೇ ಆವೃತ್ತಿಯು ದುಬೈ ಜೈಂಟ್ಸ್ ಮತ್ತು ನ್ಯೂಯಾರ್ಕ್ ಸೂಪರ್ ಸ್ಟ್ರೈಕರ್ಸ್ ನಡುವಿನ ಪಂದ್ಯದೊಂದಿಗೆ ಮಾರ್ಚ್ 8 ರಂದು (ಶುಕ್ರವಾರ) 7 PM IST ಕ್ಕೆ ಶುರುವಾಗಲಿದೆ.
ರೋಹಿತ್ ಶರ್ಮಾ-ಗಿಲ್ ಆಕರ್ಷಕ ಶತಕ: 2ನೇ ದಿನ ಭಾರತ ಭರ್ಜರಿ ಆರಂಭ
ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಸುರೇಶ್ ರೈನಾ ಹರ್ಭಜನ್ ಸಿಂಗ್ ಮತ್ತು ರಾಬಿನ್ ಉತ್ತಪ್ಪ ವಿವಿಧ ತಂಡಗಳ ನಾಯಕರಾಗಿ ನೇಮಕಗೊಂಡಿದ್ದಾರೆ. ಕ್ರಿಸ್ ಗೇಲ್ ಮತ್ತು ಆರೋನ್ ಫಿಂಚ್ ಅವರಂತಹ ಇತರ ಆಟಗಾರರು ಸಹ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಭಾರತದಲ್ಲಿ ಟಿವಿ ಮತ್ತು ಓಟಿಟಿಯಲ್ಲಿ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ 2024 ಅನ್ನು ಯಾವಾಗ ಮತ್ತು ಎಲ್ಲಿ ವೀಕ್ಷಿಸಬಹುದು?
ಪಂದ್ಯಾವಳಿಯ ಎಲ್ಲಾ 22 ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ 1 ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಹಿಂದಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸದ್ಯಕ್ಕೆ ಭಾರತದಲ್ಲಿ ಲೈವ್ ಸ್ಟ್ರೀಮಿಂಗ್ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ತಂಡಗಳು
ಕೊಲಂಬೊ ಲಯನ್ಸ್: ಕ್ರಿಸ್ ಗೇಲ್ (ನಾಯಕ), ರಾಸ್ ಟೇಲರ್, ಬೆನ್ ಡಂಕ್ (ವಿಕೆಟ್ ಕೀಪರ್), ಡ್ಯಾರೆನ್ ಬ್ರಾವೋ, ಜೆಸ್ಸಿ ರೈಡರ್, ಅಸ್ಗರ್ ಅಫ್ಘಾನ್, ನೌರುಜ್ ಮಂಗಲ್, ಯಾಸಿರ್ ಶಾ , ಜುಲ್ಫಿಕರ್ ಬಾಬರ್, ದವ್ಲತ್ ಜದ್ರಾನ್, ರಾಬರ್ಟ್ ಫ್ರಿಲಿಂಕ್, ಮುಹಮ್ಮದ್ ಇರ್ಫಾನ್, ಖಲೀದ್ ಉಲಿಸ್ಮಾನ್.
ಡೆಲ್ಲಿ ಡೆವಿಲ್ಸ್: ಸುರೇಶ್ ರೈನಾ (ನಾಯಕ), ಶಾಹಿದ್ ಅಫ್ರಿದಿ, ಜೇಕಬ್ ಓರಮ್, ಅಂಬಟಿ ರಾಯುಡು , ಸೊಹೈಲ್ ತನ್ವಿರ್, ಮ್ಯಾಟ್ ಪ್ರಯರ್ (ವಿಕೆಟ್ ಕೀಪರ್), ಅನುರೀತ್ ಸಿಂಗ್, ಪ್ರವೀಣ್ ಗುಪ್ತಾ, ಸಮನ್ ಜಯಂತ, ಇಶಾನ್ ಮಲ್ಹೋತ್ರಾ, ಪ್ರವೀಣ್ ತಾಂಬೆ, ಇಕ್ಬಾಲ್ ಅಬ್ದುಲ್ಲಾ, ನಾಗೇಂದ್ರ.
ಕುಲ್ದೀಪ್ ಯಾದವ್ಗೆ ಬಂಪರ್ ಗಿಫ್ಟ್: 1 ವಿಕೆಟ್ಗೆ 1 ಲಕ್ಷ ನೀಡಲಿದೆ ಬಿಸಿಸಿಐ
ದುಬೈ ಜೈಂಟ್ಸ್: ಹರ್ಭಜನ್ ಸಿಂಗ್ (ನಾಯಕ), ಶಾನ್ ಮಾರ್ಷ್ , ರಿಚರ್ಡ್ ಲೆವಿ, ಸೊಲೊಮನ್ ಮಿರೆ, ತಿಸಾರಾ ಪೆರೆರಾ , ಜೊನಾಥನ್ ಕಾರ್ಟರ್, ಸ್ಯಾಮ್ಯುಯೆಲ್ ಬದ್ರಿ , ಸುರಂಗ ಲಕ್ಮಲ್, ಸಚಿತ್ ಪತಿರಾನ, ದಿನೇಶ್ ರಾಮ್ದಿನ್ (ವಿಕೆಟ್ ಕೀಪರ್), ಫಿಡೆಲ್ ಎಡ್ವರ್ಡ್ಸ್, ಗುರುಕೀರತ್ ಮಾನ್, ವೆರ್ನಾನ್ ಫಿಲಾಂಡರ್, ಬೆನ್ ಲಾಫ್ಲಿನ್.
ಕ್ಯಾಂಡಿ ಸ್ಯಾಂಪ್ ಆರ್ಮಿ: ಆರನ್ ಫಿಂಚ್ (ನಾಯಕ), ಸ್ಟುವರ್ಟ್ ಬಿನ್ನಿ, ಜೋ ಬರ್ನ್ಸ್, ಉಪುಲ್ ತರಂಗ (ವಿಕೆಟ್ ಕೀಪರ್), ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಸೀಕ್ಕುಗೆ ಪ್ರಸನ್ನ, ನುವಾನ್ ಕುಲಶೇಖರ, ಜೊನಾಥನ್ ವೆಲ್ಸ್, ಕೆವಿನ್ ಒ’ಬ್ರೇನ್, ಟಿನೋ ಬೆಸ್ಟ್, ಕ್ರಿಸ್ಟೋಫರ್ ಪಿಲುಂಕಟ್, ಲಿಯಾಮ್.
ನ್ಯೂಯಾರ್ಕ್ ಸೂಪರ್‌ಸ್ಟಾರ್ ಸ್ಟ್ರೈಕರ್ಸ್: ಯುವರಾಜ್ ಸಿಂಗ್ (ನಾಯಕ), ಡಾನ್ ಕ್ರಿಶ್ಚಿಯನ್, ಇಸುರು ಉದಾನ, ಚಾಡ್ವಿಕ್ ವಾಲ್ಟನ್ (ವಿಕೆಟ್ ಕೀಪರ್), ಜೆರೋಮ್ ಟೇಲರ್, ರಿಕಾರ್ಡೊ ಪೊವೆಲ್, ಅಲ್ವಿರೋ ಪೀಟರ್‌ಸನ್, ನುವಾನ್ ಪ್ರದೀಪ್, ಅಸೆಲಾ ಗುಣರತ್ನೆ, ಚಾಮರ ಕಪುಗೆದರ, ರಾಹುಲ್ ಶರ್ಮಾ , ಲಹಿರು ತಿರಿಮನ್ನೆ.
ಪಂಜಾಬ್ ರಾಯಲ್ಸ್: ತಿಲಕರತ್ನೆ ದಿಲ್ಶನ್ (ನಾಯಕ), ಮಾರ್ಟಿನ್ ಗಪ್ಟಿಲ್ , ನಮನ್ ಓಜಾ (ವಿಕೆಟ್ ಕೀಪರ್), ಮಿಗುಯೆಲ್ ಕಮ್ಮಿನ್ಸ್, ದಿಲ್ಶನ್ ಮುನವೀರ, ಅಬ್ದುಲ್ ರಜಾಕ್, ಮಾಂಟಿ ಪನೇಸರ್, ಅಸದ್ ಶಫೀಕ್, ಜಾವೋನ್ ಸಿಯರ್ಲ್ಸ್, ಫಿಲ್ ಮಸ್ಟರ್ಡ್, ನೀಲ್ ಬ್ರೂಮ್, ಸಿದ್ಧಾರ್ಥ ಇಂದ್ರ ತ್ರಿವೇದಿ.
ರಾಜಸ್ಥಾನ್ ಕಿಂಗ್ಸ್: ರಾಬಿನ್ ಉತ್ತಪ್ಪ (ನಾಯಕ/ವಿಕೆಟ್ ಕೀಪರ್), ಲೆಂಡ್ಲ್ ಸಿಮನ್ಸ್, ಇಮ್ರಾನ್ ತಾಹಿರ್ , ಏಂಜೆಲೊ ಪೆರೆರಾ, ಶ್ರೀಶಾಂತ್, ಆಶ್ಲೇ ನರ್ಸ್ , ಹ್ಯಾಮಿಲ್ಟನ್ ಮಸಕಡ್ಜಾ, ಚತುರಂಗ ಡಿ ಸಿಲ್ವಾ, ಪರ್ವಿಂದರ್ ಅವಾನಾ, ಪೀಟರ್ ಟ್ರೆಗೊ, ಪವನ್ ನೇಗಿ, ಹಮೀದ್ ಬಿಪುಲಿಶ್ ಶರ್ನೋ, ರಾಜೇಶ್ ಬಿಪುಲಿಶ್ ಶರ್ನೋ, ಬಿಪುಲಿಶ್ ಶರ್ನೋ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
