ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ

ಐರ್ಲೆಂಡ್, ಇಂಗ್ಲೆಂಡ್ ಮತ್ತು ಝಿಂಬಾಬ್ವೆ ಸರಣಿಗಳ ಬಳಿಕ ಟೀಮ್ ಇಂಡಿಯಾ ಇದೀಗ ಭಾರತಕ್ಕೆ ಮರಳುತ್ತಿದೆ. ಭಾರತದಿಂದ ಟೀಮ್ ಇಂಡಿಯಾ ಶ್ರೀಲಂಕಾಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಭಾಗವಾಗಿರುವ ಈ ಸರಣಿಯು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು.

ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ
Team India
Image Credit source: BCCI

Updated on: Jul 27, 2026 | 9:34 AM

ಭಾರತ ಮತ್ತು ಝಿಂಬಾಬ್ವೆ ನಡುವಣ ಸರಣಿ ಮುಕ್ತಾಯಗೊಂಡಿದೆ. ಮೂರು ಮ್ಯಾಚ್​ಗಳ ಈ ಸರಣಿಯನ್ನು ಟೀಮ್ ಇಂಡಿಯಾ 3-0 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿ ಗೆಲುವಿನೊಂದಿಗೆ ಟೀಮ್ ಇಂಡಿಯಾ ಭಾರತಕ್ಕೆ ಮರಳಲಿದ್ದು, ಮುಂದಿನ ತಿಂಗಳಲ್ಲಿ ಟೆಸ್ಟ್ ಸರಣಿ ಆಡಲಿದೆ. ಇದರ ಬೆನ್ನಲ್ಲೇ ಏಷ್ಯನ್ ಗೇಮ್ಸ್​ನಲ್ಲೂ ಕಣಕ್ಕಿಳಿಯಲಿದೆ. ಹಾಗಿದ್ರೆ ಭಾರತ ತಂಡದ ಮುಂದಿರುವ ಸರಣಿಗಳಾವುವು ಎಂದು ನೋಡುವುದಾದರೆ…

ಭಾರತ ತಂಡದ ಶ್ರೀಲಂಕಾ ಪ್ರವಾಸ (ಆಗಸ್ಟ್ 2026):

ಭಾರತ ತಂಡವು ಆಗಸ್ಟ್‌ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ದೃಷ್ಟಿಯಿಂದ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ.

  • ಆಗಸ್ಟ್ 15–19: 1ನೇ ಟೆಸ್ಟ್ ಪಂದ್ಯ (ಗಾಲ್ ಇಂಟರ್ನ್ಯಾಷನಲ್ ಸ್ಟೇಡಿಯಂ)
  • ಆಗಸ್ಟ್ 23–27: 2ನೇ ಟೆಸ್ಟ್ ಪಂದ್ಯ (ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್, ಕೊಲಂಬೊ)

ಏಷ್ಯನ್ ಗೇಮ್ಸ್ 2026 (ಸೆಪ್ಟೆಂಬರ್ – ಅಕ್ಟೋಬರ್ 2026):

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಹಾಲಿ ಚಾಂಪಿಯನ್ ಆಗಿ ಭಾರತ ಕಣಕ್ಕಿಳಿಯಲಿದ್ದು, ನೇರವಾಗಿ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದೆ.

  • ಸೆಪ್ಟೆಂಬರ್ 24 – ಅಕ್ಟೋಬರ್ 1: ಪುರುಷರ ಕ್ರಿಕೆಟ್ ಟೂರ್ನಮೆಂಟ್
  • ಸೆಪ್ಟೆಂಬರ್ 28: ಭಾರತ ತಂಡದ ಕ್ವಾರ್ಟರ್ ಫೈನಲ್ ಪಂದ್ಯ

ವೆಸ್ಟ್ ಇಂಡೀಸ್ ತಂಡದ ಭಾರತ ಪ್ರವಾಸ (ಸೆಪ್ಟೆಂಬರ್ – ಅಕ್ಟೋಬರ್ 2026):

ವೆಸ್ಟ್ ಇಂಡೀಸ್ ತಂಡವು ಭಾರತಕ್ಕೆ ಆಗಮಿಸಲಿದ್ದು, ಇಲ್ಲಿ 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ.

  • ಏಕದಿನ ಸರಣಿ ವೇಳಾಪಟ್ಟಿ:
  • ಮೊದಲ ಏಕದಿನ ಪಂದ್ಯ: ಸೆಪ್ಟೆಂಬರ್ 27 (ತಿರುವನಂತಪುರಂ)
  • ಎರಡನೇ ಏಕದಿನ ಪಂದ್ಯ: ಸೆಪ್ಟೆಂಬರ್ 30 (ಗುವಾಹಟಿ)
  • ಮೂರನೇ ಏಕದಿನ ಪಂದ್ಯ: ಅಕ್ಟೋಬರ್ 3 (ಮೊಹಾಲಿ).
  • ಟಿ20 ಸರಣಿ ವೇಳಾಪಟ್ಟಿ:
  • ಮೊದಲ ಟಿ20 ಪಂದ್ಯ: ಅಕ್ಟೋಬರ್ 6 (ಲಕ್ನೋ)
  • ಎರಡನೇ ಟಿ20 ಪಂದ್ಯ: ಅಕ್ಟೋಬರ್ 9 (ರಾಂಚಿ)
  • ಮೂರನೇ ಟಿ20 ಪಂದ್ಯ: ಅಕ್ಟೋಬರ್ 11 (ಇಂದೋರ್)
  • ನಾಲ್ಕನೇ ಟಿ20 ಪಂದ್ಯ: ಅಕ್ಟೋಬರ್ 14 (ಹೈದರಾಬಾದ್)
  • ಐಡನೇ ಟಿ20 ಪಂದ್ಯ: ಅಕ್ಟೋಬರ್ 17 (ಬೆಂಗಳೂರು).

ಇದನ್ನೂ ಓದಿ: ಎಚ್ಚರಿಕೆ… ವೈಭವ್‌ಗೆ ಕೋಚ್ ಲಕ್ಷ್ಮಣ್ ಕಟ್ಟುನಿಟ್ಟಿನ ಸೂಚನೆ!

ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಬಳಿಕ ಟೀಮ್ ಇಂಡಿಯಾ ನ್ಯೂಝಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಭಾರತ ತಂಡವು 5 ಟಿ20, 5 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳ ದೀರ್ಘ ಸರಣಿಯನ್ನು ಆಡಲಿದೆ.

 

Follow Us