ಐಪಿಎಲ್ ಅಂಗಳಕ್ಕೆ ಮತ್ತೋರ್ವ ಯುವ ಆಟಗಾರ ಎಂಟ್ರಿ ಕೊಟ್ಟಿದ್ದಾರೆ. ಹೆಸರು ಯಶ್ ದಯಾಳ್ (Yash Dayal). ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಯಶ್ ದಯಾಳ್ ಗುಜರಾತ್ ಟೈಟನ್ಸ್ ಪರ ಪಾದರ್ಪಣೆ ಮಾಡಲಿದ್ದಾರೆ. 24 ವರ್ಷದ ಯಶ್ ದಯಾಳ್ ಉತ್ತರ ಪ್ರದೇಶದ ಕ್ರಿಕೆಟಿಗ. ಇದೀಗ ಗುಜರಾತ್ ತಂಡದ ಮೂಲಕ ಐಪಿಎಲ್ಗೆ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಎಂದರೆ ಗುಜರಾತ್ ಟೈಟನ್ಸ್ ತಂಡಕ್ಕೆ ಆಯ್ಕೆಯಾದ ವೇಳೆ ನೀಡಿದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಿಕೆಟ್ ಪಡೆಯುವುದು ನನ್ನ ಗುರಿ ಎಂದಿದ್ದರು. ಇದೀಗ ಐಪಿಎಲ್ ಮೂಲಕ ಆ ಕನಸನ್ನು ನನಸು ಮಾಡಿಕೊಳ್ಳುವ ವಿಶ್ವಾಸದಲ್ಲಿದ್ದಾರೆ ಯುವ ವೇಗಿ.
140ರ ಅಸುಪಾಸಿನ ವೇಗದಲ್ಲಿ ಬೌಲಿಂಗ್ ಮಾಡುವ ಯಶ್ ದಯಾಳ್ 2018 ರಲ್ಲಿ ಉತ್ತರ ಪ್ರದೇಶದ U-23 ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದುವರೆಗೆ 14 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 50 ವಿಕೆಟ್ ಪಡೆದಿದ್ದಾರೆ. 48 ರನ್‌ಗಳಿಗೆ 5 ವಿಕೆಟ್ ಕಬಳಿಸಿರುವುದು ಯಶ್ ದಯಾಳ್ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಅಲ್ಲದೆ ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಪರಿಣಾಮ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟನ್ಸ್ ತಂಡವು ಯುವ ವೇಗಿಯನ್ನು 3 ಕೋಟಿ 20 ಲಕ್ಷಕ್ಕೆ ಖರೀದಿಸಿತ್ತು.
ಇನ್ನು ಯಶ್ ದಯಾಳ್ ಲಿಸ್ಟ್-ಎ ಕ್ರಿಕೆಟ್ನಲ್ಲಿ 14 ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದಾರೆ. 31 ರನ್‌ಗಳಿಗೆ 5 ವಿಕೆಟ್ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. 15 ಟಿ20 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದಾರೆ. 3 ಕೋಟಿಗೂ ಅಧಿಕ ಮೊತ್ತಕ್ಕೆ ಖರೀದಿಸಿರುವ ಯುವ ವೇಗಿ ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ದ ಐಪಿಎಲ್ನಲ್ಲಿ ಮೊದಲ ಓವರ್ ಎಸೆಯಲಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ಯಶ್ ದಯಾಳ್ ಕಮಾಲ್ ಮಾಡಲಿದ್ದಾರಾ ಕಾದು ನೋಡಬೇಕಿದೆ.
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ಜೋಸ್ ಬಟ್ಲರ್ , ದೇವದತ್ ಪಡಿಕ್ಕಲ್ , ಸಂಜು ಸ್ಯಾಮ್ಸನ್ (ನಾಯಕ) , ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ , ಶಿಮ್ರಾನ್ ಹೆಟ್ಮೆಯರ್ , ರವಿಚಂದ್ರನ್ ಅಶ್ವಿನ್ , ರಿಯಾನ್ ಪರಾಗ್ , ಜೇಮ್ಸ್ ನೀಶಮ್ , ಕುಲದೀಪ್ ಸೇನ್ , ಪ್ರಸಿದ್ಧ್ ಕೃಷ್ಣ , ಯುಜ್ವೇಂದ್ರ ಚಾಹಲ್
ಗುಜರಾತ್ ಟೈಟನ್ಸ್ ಪ್ಲೇಯಿಂಗ್ 11: ಮ್ಯಾಥ್ಯೂ ವೇಡ್ , ಶುಭಮನ್ ಗಿಲ್ , ವಿಜಯ್ ಶಂಕರ್ , ಹಾರ್ದಿಕ್ ಪಾಂಡ್ಯ (ನಾಯಕ) , ಡೇವಿಡ್ ಮಿಲ್ಲರ್ , ಅಭಿನವ್ ಮನೋಹರ್ , ರಾಹುಲ್ ತೆವಾಟಿಯಾ , ರಶೀದ್ ಖಾನ್ , ಲಾಕಿ ಫರ್ಗುಸನ್ , ಮೊಹಮ್ಮದ್ ಶಮಿ , ಯಶ್ ದಯಾಳ್
ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?