SRH vs KKR, IPL 2022: ಗೆಲುವಿನ ಓಟ ಮುಂದುವರೆಸುತ್ತಾ ಹೈದರಾಬಾದ್?: ಕೆಕೆಆರ್​ಗಿಂದು ಮತ್ತೊಂದು ಸವಾಲು

ಐಪಿಎಲ್​​ನಲ್ಲಿಂದು ಕೇನ್ ವಿಲಿಯಮ್ಸನ್ ನಾಯಕತ್ವದ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಶ್ರೇಯಸ್ ಅಯ್ಯರ್ (Shreyas Iyer) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ (SRH vs KKR) ತಂಡ ಮುಖಾಮುಖಿ ಆಗಲಿದೆ.

SRH vs KKR, IPL 2022: ಗೆಲುವಿನ ಓಟ ಮುಂದುವರೆಸುತ್ತಾ ಹೈದರಾಬಾದ್?: ಕೆಕೆಆರ್​ಗಿಂದು ಮತ್ತೊಂದು ಸವಾಲು
SRH vs KKR IPL 2022
Follow us
TV9 Web
| Updated By: Vinay Bhat

Updated on: Apr 15, 2022 | 8:26 AM

ಐಪಿಎಲ್ 2022 ರಲ್ಲಿಂದು (IPL 2022) ನಡೆಯಲಿರುವ 25ನೇ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಶ್ರೇಯಸ್ ಅಯ್ಯರ್ (Shreyas Iyer) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್​ (SRH vs KKR) ತಂಡ ಮುಖಾಮುಖಿ ಆಗಲಿದೆ. ಕೆಕೆಆರ್ ಈ ಬಾರಿಯ​​ ಆರಂಭದಲ್ಲಿ ತೋರಿದ ಬಿಗಿ ಹಿಡಿತವನ್ನು ಪಂದ್ಯದಿಂದ ಪಂದ್ಯಕ್ಕೆ ಕಳೆದುಕೊಳ್ಳುತ್ತಿದೆ. ಆಡಿದ ಐದು ಪಂದ್ಯಗಳಲ್ಲಿ ಕೆಕೆಆರ್​​​ 3ನ್ನು ಗೆದ್ದು ಎರಡನ್ನು ಸೋತಿದೆ. ಸನ್​​ ರೈಸರ್ಸ್​ ಈ ಪಂದ್ಯವನ್ನು ಗೆದ್ದರೆ ಪಾಯಿಂಟ್​​ ಟೇಬಲ್​​ನಲ್ಲಿ 6 ಅಂಕಿಗಳ ಮ್ಯಾಜಿಕ್​​ ಗ್ರೂಪ್​​ ಸೇರಲಿದೆ. ಅಷ್ಟೇ ಅಲ್ಲ ಪ್ಲೇ-ಆಫ್​​​ ಫೈಟ್​​ನಲ್ಲಿ ಕಾಣಿಸಿಕೊಳ್ಳಲಿದೆ. ಎಸ್​​ಆರ್​​​ಹೆಚ್​​ ಆಡಿರುವ 4 ಪಂದ್ಯಗಳಲ್ಲಿ 2 ಅನ್ನು ಸೋತು 2 ಅನ್ನು ಗೆದ್ದಿದೆ. ಉಭಯ ತಂಡಗಳಿಗೆ ಈ ಪಂದ್ಯ ಬಹುಮುಖ್ಯ ಆಗಿರುವ ಕಾರಣ ಬ್ರಬೌರ್ನ್ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಮ್ಯಾಚ್ ನಿರೀಕ್ಷಿಸಲಾಗಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆಯಷ್ಟೆ. ಆದರೆ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಅನುಭವಿಸಿದ್ದು ಮತ್ತೆ ಗೆಲುವಿನ ಹಾದಿಗೆ ಮರಳುವ ಪ್ರಯತ್ನ ನಡೆಸಲಿದೆ. ತಂಡದಲ್ಲಿ ಹೇಳಿಕೊಳ್ಳುವ ಸಮಸ್ಯೆ ಇಲ್ಲದೇ ಇದ್ದರೂ ಅಸ್ಥಿರತೆ ಕಾಡುತ್ತಿದೆ. ವೆಂಕಟೇಶ್​​ ಅಯ್ಯರ್​​ ಮತ್ತು ಅಜಿಂಕ್ಯಾ ರಹಾನೆ ಒಟ್ಟಾಗಿ ಮಿಂಚಿಲ್ಲ. ಹೀಗಾಗಿ ರಹಾನೆ ಬದಲು ಶೆಲ್ಡನ್​​ ಜಾಕ್ಸನ್​​​​ ಆಡಬಹದು. ಅಯ್ಯರ್​​ ಜೊತೆ ಸ್ಯಾಮ್​​ ಬಿಲ್ಲಿಂಗ್ಸ್​​ ಅಥವಾ ಸುನೀಲ್​​ ನರೈನ್​​ ಇನ್ನಿಂಗ್ಸ್​​ ಆರಂಭಿಸಿದರೂ ಅಚ್ಚರಿ ಇಲ್ಲ. ಜಾಕ್ಸನ್​​ 5ನೇ ಕ್ರಮಾಂಕದಲ್ಲಿ ಆಡುವ ತಾಕತ್ತು ಹೊಂದಿದ್ದಾರೆ.

ನಾಯಕ ಶ್ರೇಯಸ್​​ ಅಯ್ಯರ್​​​ ಕೂಡ ಫಾರ್ಮ್​​ನಲ್ಲಿಲ್ಲ. ನಿತೀಶ್​​ ರಾಣಾ ಈ ಬಾರಿ ಮಿಂಚದೇ ಇರುವುದು ಟೆನ್ಷನ್​​ ಮೂಡಿಸಿದೆ. ರಸೆಲ್​​ ಮತ್ತು ಪ್ಯಾಟ್​​ ಕಮಿನ್ಸ್​​ ಸ್ಪೋಟಕ ಫಿನಿಷ್​​ ತಂದುಕೊಡಬಲ್ಲರು. ಬಿಲ್ಲಿಂಗ್ಸ್​, ಜಾಕ್ಸನ್​​ ಮತ್ತು ನರೈನ್​​​ ಬ್ಯಾಟಿಂಗ್​​ ಬಲವನ್ನು ಎಲ್ಲಿ ಬೇಕಾದರೂ ಬಳಸಿಕೊಳ್ಳಬಹುದು. ಉಮೇಶ್​​ ಯಾದವ್​​ ವೇಗದ ಬೌಲಿಂಗ್​​ ವಿಭಾಗಕ್ಕೆ ನಾಯಕ. ವರುಣ್​ ಚಕ್ರವರ್ತಿ ಸ್ಪಿನ್ನರ್​​. ಯುವ ಆಟಗಾರ ರಸಿಕ್​​ ಸಲಾಂ ಮತ್ತೊಬ್ಬ ವೇಗಿಯಾಗಿದ್ದಾರೆ.

ಇತ್ತ ಸನ್‌ರೈಸರ್ಸ್‌ ತಂಡದಲ್ಲಿರುವ ಸ್ವಿಂಗ್ ಪ್ರತಿಭೆ ಭುವನೇಶ್ವರ್ ಕುಮಾರ್, ಯಾರ್ಕರ್ ಪರಿಣತ ಟಿ. ನಟರಾಜನ್ ಮತ್ತು ಸ್ಪಿನ್ನರ್- ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮುಂದೆ ಕೋಲ್ಕತ್ತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲಿದೆ. ನಾಯಕ ಕೇನ್ ವಿಲಿಯಮ್ಸನ್ ಲಯಕ್ಕೆ ಮರಳಿರುವುದು ತಂಡದ ಬ್ಯಾಟಿಂಗ್ ವಿಭಾಗದಲ್ಲಿ ವಿಶ್ವಾಸ ಮೂಡಿಸಿದೆ. ಯುವಪ್ರತಿಭೆ ಅಭಿಷೇಕ್ ಶರ್ಮಾ ಮತ್ತು ಕೇನ್ ಕಳೆದ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದರು. ರಾಹುಲ್ ತ್ರಿಪಾಠಿ, ನಿಕೊಲಸ್ ಪೂರನ್ ಮತ್ತು ಮರ್ಕರಮ್ ತಮ್ಮ ಲಯ ಕಂಡುಕೊಂಡರೆ ತಂಡದ ಬ್ಯಾಟಿಂಗ್ ವಿಭಾಗದ ಶಕ್ತಿ ವೃದ್ಧಿಸುವುದು ಖಚಿತ. ತಂಡದಲ್ಲಿರುವ ಕನ್ನಡಿಗ ಲೆಗ್‌ಸ್ಪಿನ್‌-ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರಿಗೆ ಈ ಪಂದ್ಯದಲ್ಲಿಯೂ ಅವಕಾಶ ಸಿಗುವುದು ಖಚಿತವಿಲ್ಲ.

ಉಭಯ ತಂಡಗಳ ನಡುವೆ 21 ಪಂದ್ಯಗಳು ನಡೆದಿವೆ. ಈ 21 ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 14 ಪಂದ್ಯಗಳನ್ನು ಗೆದ್ದಿದ್ದರೆ, ಕೆಕೆಆರ್ ಪಾಲು ಏಳರಲ್ಲಿ ಮಾತ್ರ ಗೆದ್ದಿದೆ. ಬ್ರಬೌರ್ನ್ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟರ್ ಹಾಗೂ ಬೌಲರ್‌ ಇಬ್ಬರಿಗೂ ಸಮಾನಾಗಿ ಬೆಂಬಲ ನೀಡುವ ಪಿಚ್ ಆಗಿದೆ. ಪಂದ್ಯ ಮುಂದುವರಿಯುತ್ತಿದ್ದಂತೆ ಇಬ್ಬನಿ ಬೀಳುವ ಕಾರಣ ಎರಡನೇ ಸರದಿಯಲ್ಲಿ ಬೌಲಿಂಗ್ ತಡೆಸುವ ತಂಡಗಳು ಸವಾಲನ್ನು ಎದುರಿಸುತ್ತದೆ. ಈ ಅಂಗಳದಲ್ಲಿನ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 180 ಆಗಿದೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI:

ಕೆಕೆಆರ್: ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ಆಂಡ್ರೆ ರಸೆಲ್, ಸ್ಯಾಮ್ ಆರೋನ್ ಫಿಂಚ್, ಪ್ಯಾಟ್ ಕಮಿನ್ಸ್, ಸುನಿಲ್ ನರೈನ್, ಉಮೇಶ್ ಯಾದವ್, ರಸಿಖ್ ಸಲಾಮ್, ವರುಣ್ ಚಕ್ರವರ್ತಿ.

ಎಸ್​​ಆರ್​​ಹೆಚ್​: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಏಡನ್ ಮಾರ್ಕ್ರಾಮ್, ಶಶಾಂಕ್ ಸಿಂಗ್, ಭುವನೇಶ್ವರ್ ಕುಮಾರ್, ಮಾರ್ಕೊ ಯಾನ್ಸನ್, ಉಮ್ರಾನ್ ಮಲಿಕ್, ಟಿ ನಟರಾಜನ್, ಶ್ರೇಯಸ್ ಗೋಪಾಲ್.

RR vs GT, IPL 2022: ಅಗ್ರಸ್ಥಾನಕ್ಕೇರಿದ ಗುಜರಾತ್: ಚೊಚ್ಚಲ ಆವೃತ್ತಿಯಲ್ಲೇ ಹಾರ್ದಿಕ್ ಟೀಮ್ ಬೊಂಬಾಟ್ ಆಟ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ