IND vs SA: ನಾಲ್ವರ ನಡುವೆ ಪೈಪೋಟಿ: ಟೀಮ್ ಇಂಡಿಯಾ ಆರಂಭಿಕರು ಯಾರು?
India vs South Africa: ಭಾರತ ತಂಡದಲ್ಲಿ ಒಟ್ಟು ನಾಲ್ವರು ಆರಂಭಿಕರಿದ್ದಾರೆ. ಇವರಲ್ಲಿ ಇಬ್ಬರು ಕಣಕ್ಕಿಳಿಸಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ. ವಿಶೇಷ ಎಂದರೆ ಈ ನಾಲ್ವರಲ್ಲಿ ಇಬ್ಬರು ಬಲಗೈ ದಾಂಡಿಗರಾದರೆ ಮತ್ತಿಬ್ಬರು ಎಡಗೈ ಬ್ಯಾಟ್ಸ್ಮನ್ಗಳು.
ಭಾರತ ಮತ್ತು ಸೌತ್ ಆಫ್ರಿಕಾ (India vs South Africa) ನಡುವಣ ಮೂರು ಪಂದ್ಯಗಳ ಟಿ20 ಸರಣಿ ಇಂದಿನಿಂದ (ಡಿ.10) ಶುರುವಾಗಲಿದೆ. ಈ ಸರಣಿಯಿಂದ ರೋಹಿತ್ ಶರ್ಮಾ ಹೊರಗುಳಿದಿದ್ದು, ಹೀಗಾಗಿ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಇತ್ತ ಹಿಟ್ಮ್ಯಾನ್ ಅನುಪಸ್ಥಿತಿಯಲ್ಲಿ ಭಾರತ ತಂಡದ ಆರಂಭಿಕರಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆಯೊಂದು ಮೂಡಿದೆ.
ಏಕೆಂದರೆ ಭಾರತ ತಂಡದಲ್ಲಿ ಒಟ್ಟು ನಾಲ್ವರು ಆರಂಭಿಕರಿದ್ದಾರೆ. ಇವರಲ್ಲಿ ಇಬ್ಬರು ಕಣಕ್ಕಿಳಿಸಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ. ವಿಶೇಷ ಎಂದರೆ ಈ ನಾಲ್ವರಲ್ಲಿ ಇಬ್ಬರು ಬಲಗೈ ದಾಂಡಿಗರಾದರೆ ಮತ್ತಿಬ್ಬರು ಎಡಗೈ ಬ್ಯಾಟ್ಸ್ಮನ್ಗಳು. ಹೀಗಾಗಿ ರೈಟ್-ಲೆಫ್ಟ್ ಕಾಂಬೊದಲ್ಲಿ ಓಪನರ್ಗಳ ಆಯ್ಕೆ ನಡೆಯಲಿದೆ.
ಇಲ್ಲಿ ಎಡಗೈ ದಾಂಡಿಗರಾಗಿ ಇಶಾನ್ ಕಿಶನ್ ಹಾಗೂ ಯಶಸ್ವಿ ಜೈಸ್ವಾಲ್ ಇದ್ದಾರೆ. ಹಾಗೆಯೇ ಬಲಗೈ ಬ್ಯಾಟರ್ಗಳಾಗಿ ಶುಭ್ಮನ್ ಗಿಲ್ ಹಾಗೂ ರುತುರಾಜ್ ಗಾಯಕ್ವಾಡ್ ಆರಂಭಿಕನ ಆಕಾಂಕ್ಷಿಗಳು.
ಈ ನಾಲ್ವರಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿರುವ ಇಶಾನ್ ಕಿಶನ್ಗೆ ಅದೃಷ್ಟ ಖುಲಾಯಿಸುವ ಸಾಧ್ಯತೆಯಿದೆ. ಏಕೆಂದರೆ ಕಿಶನ್ ಅವರನ್ನು ಕಣಕ್ಕಿಳಿಸಿದರೆ ಮತ್ತೋರ್ವ ವಿಕೆಟ್ ಕೀಪರ್ ಅನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆಯಿಲ್ಲ. ಹೀಗಾಗಿ ಇಶಾನ್ ಕಿಶನ್ಗೆ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚು.
ಇನ್ನೊಂದೆಡೆ ಟೀಮ್ ಇಂಡಿಯಾದ ಖಾಯಂ ಆರಂಭಿಕನಾಗಿರುವ ಶುಭ್ಮನ್ಗೆ ಮಣೆಹಾಕುವ ಸಾಧ್ಯತೆಯಿದೆ. ಇದರಿಂದ ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಬೆಂಚ್ ಕಾಯಬೇಕಾಗಿ ಬರಬಹುದು.
ಇಲ್ಲ, ಇಶಾನ್ ಕಿಶನ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಲು ನಿರ್ಧರಿಸಿದರೆ, ಯಶಸ್ವಿ ಜೈಸ್ವಾಲ್ – ಶುಭ್ಮನ್ ಗಿಲ್ ಆರಂಭಿಕರಾಗಿ ಆಡಬಹುದು. ಒಟ್ಟಿನಲ್ಲಿ ಡರ್ಬನ್ನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಯಾವ ಆರಂಭಿಕ ಜೋಡಿಗೆ ಮಣೆಹಾಕಲಿದೆ ಎಂಬುದೇ ಈಗ ಕುತೂಹಲವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: T10 League 2023: ಟಿ10 ಲೀಗ್ ಟ್ರೋಫಿ ಎತ್ತಿ ಹಿಡಿದ ಪೊಲಾರ್ಡ್ ಪಡೆ
ಭಾರತ-ಸೌತ್ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ:
- ಡಿಸೆಂಬರ್ 10- ಮೊದಲ ಟಿ20 ಪಂದ್ಯ (ಡರ್ಬನ್)
- ಡಿಸೆಂಬರ್ 12- ಎರಡನೇ ಟಿ20 ಪಂದ್ಯ (ಗೆಬರ್ಹ)
- ಡಿಸೆಂಬರ್ 14- ಮೂರನೇ ಟಿ20 ಪಂದ್ಯ (ಜೋಹಾನ್ಸ್ಬರ್ಗ್)
ಭಾರತ ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್ ಸುಂದರ್ , ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹರ್.