BCCI: ಮುಖ್ಯ ಆಯ್ಕೆಗಾರ ಹುದ್ದೆಗೆ ಈ ಅನುಭವಿಯ ಹೆಸರು ಫೈನಲ್; ಆಯ್ಕೆ ಮಂಡಳಿಯ ಕರ್ತವ್ಯಗಳೇನು..?

BCCI: ಅಗರ್ಕರ್ ಜೊತೆ ಈ ಬಗ್ಗೆ ಯಾವುದೇ ಚರ್ಚೆ ನಡೆಯದಿದ್ದರೂ ಅಗರ್ಕರ್ ಅವರ ಹೆಸರು ನಿರ್ಧಾರವಾಗಲಿದೆ ಎಂದು ಮಾಹಿತಿ ಹೊರಬಿದ್ದಿದೆ.

BCCI: ಮುಖ್ಯ ಆಯ್ಕೆಗಾರ ಹುದ್ದೆಗೆ ಈ ಅನುಭವಿಯ ಹೆಸರು ಫೈನಲ್; ಆಯ್ಕೆ ಮಂಡಳಿಯ ಕರ್ತವ್ಯಗಳೇನು..?
ಅಜಿತ್ ಅಗರ್ಕರ್, ಸೆಹ್ವಾಗ್
Follow us
TV9 Web
| Updated By: ಪೃಥ್ವಿಶಂಕರ

Updated on:Nov 19, 2022 | 3:38 PM

ಐಸಿಸಿ ಟಿ20 ವಿಶ್ವಕಪ್ (T20 World Cup 2022) ಸೆಮಿ ಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡ ಬಳಿಕ ಭಾರತೀಯ ಕ್ರಿಕೆಟ್​ನಲ್ಲಿ (Team India) ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಇದರ ಅಂಗವಾಗಿ ಆಯ್ಕೆ ಸಮಿತಿಯ ತಲೆದಂಡವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ಬಿಸಿಸಿಐ (BCCI) ನಿನ್ನೆ ಆಯ್ಕೆ ಸಮಿತಿಯನ್ನು ವಜಾಗೊಳಿಸಿದ್ದು, ಹೊಸ ಸಮಿತಿಯ ಆಯ್ಕೆಗೆ ಅರ್ಜಿ ಕೂಡ ಆಹ್ವಾನಿಸಲಾಗಿದೆ. ಇದರೊಂದಿಗೆ ಬಿಸಿಸಿಐ ಇನ್ನಷ್ಟು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

ಚೇತನ್ ಶರ್ಮಾ ಅವರ ಆಯ್ಕೆ ಸಮಿತಿಯನ್ನು ನಿನ್ನೆ ವಜಾಗೊಳಿಸಿದ ನಂತರ ಆಯ್ಕೆ ಸಮಿತಿಯ ಮುಖ್ಯಸ್ಥರ ಹುದ್ದೆಗೆ ಅಜಿತ್ ಅಗರ್ಕರ್ ಅವರ ಹೆಸರು ಹೆಚ್ಚು ಚರ್ಚೆಯಾಗುತ್ತಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಅಜಿತ್ ಅಗರ್ಕರ್ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕಳೆದ ಬಾರಿ ಆಯ್ಕೆ ಸಮಿತಿಯ ಹುದ್ದೆ ಸಿಕ್ಕಿರಲಿಲ್ಲ. ಅಜಿತ್ ಅಗರ್ಕರ್ ಅವರಿಗೆ ಈ ಬಾರಿ ಹುದ್ದೆ ಸಿಗುವ ಸಾಧ್ಯತೆ ಹೆಚ್ಚಿದೆ.

ಬಹುತೇಕ ಅಂತಿಮಗೊಳಿಸಲಾಗಿದೆ

ಅಜಿತ್ ಅಗರ್ಕರ್ ಯುವ ಮಾಜಿ ಕ್ರಿಕೆಟಿಗನಾಗಿದ್ದು, ಅವರಿಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿದ ಅನುಭವ ಇದೆ. ಕಳೆದ ಬಾರಿಯೂ ಸಹ ಅವರ ಹೆಸರು ಈ ಹುದ್ದೆಗೆ ಬಹಳ ಹತ್ತಿರ ಬಂದಿತ್ತು. ಆದರೆ ಅಂತಿಮ ಹಂತದಲ್ಲಿ ಅವರ ಹೆಸರನ್ನು ಕೈಬಿಡಲಾಗಿತ್ತು. ಆದರೆ ಈ ವರ್ಷ ಅಜಿತ್ ಅಗರ್ಕರ್ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಅಗರ್ಕರ್ ಜೊತೆ ಈ ಬಗ್ಗೆ ಯಾವುದೇ ಚರ್ಚೆ ನಡೆಯದಿದ್ದರೂ ಅಗರ್ಕರ್ ಅವರ ಹೆಸರು ನಿರ್ಧಾರವಾಗಲಿದೆ ಎಂದು ಮಾಹಿತಿ ಹೊರಬಿದ್ದಿದೆ.

ಮುಖ್ಯ ಆಯ್ಕೆಗಾರನಾಗಲು ಬೇಕಾದ ಅರ್ಹತೆಗಳು

  1. ಏಳು ಟೆಸ್ಟ್ ಪಂದ್ಯಗಳನ್ನು ಆಡಿರುವ ಟೀಮ್ ಇಂಡಿಯಾದ ಯಾವುದೇ ಆಟಗಾರ ಈ ಹುದ್ದೆಗೆ ಅರ್ಜಿ ಹಾಕಬಹುದು
  2. 30 ಪ್ರಥಮ ದರ್ಜೆಯ ಪಂದ್ಯಗಳನ್ನು ಆಡಿರಬೇಕು
  3. 10 ಏಕದಿನ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರಬೇಕು
  4. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಐದು ವರ್ಷಗಳ ಹಿಂದೆ ನಿವೃತ್ತರಾಗಿರಬೇಕು
  5. ಬಿಸಿಸಿಐನ ಯಾವುದೇ ಸಮಿತಿಯ ಸದಸ್ಯರಾಗಿರಬಾರದು ಮತ್ತು ಐದು ವರ್ಷಗಳ ಕಾಲ ಸೇವೆ ಸಲ್ಲಿಸಲು ಸಿದ್ಧರಿರಬೇಕು.

ಆಯ್ಕೆ ಮಂಡಳಿಯ ಜವಾಬ್ದಾರಿಗಳು

  1. 1. ನ್ಯಾಯೋಚಿತ ಮತ್ತು ಪಾರದರ್ಶಕ ರೀತಿಯಲ್ಲಿ ಸಾಧ್ಯವಾದಷ್ಟು ಉತ್ತಮ ತಂಡವನ್ನು ಆಯ್ಕೆ ಮಾಡಬೇಕು.
  2. 2. ಹಿರಿಯ ಪುರುಷರ ರಾಷ್ಟ್ರೀಯ ತಂಡಕ್ಕೆ ಬಲವಾದ ಬೆಂಚ್ ಬಲವನ್ನು ಯೋಜಿಸಿ ಮತ್ತು ಸಿದ್ಧಪಡಿಸಬೇಕು.
  3. 3. ಅಗತ್ಯವಿದ್ದಾಗ ತಂಡದ ಸಭೆಗಳಿಗೆ ಹಾಜರಾಗಬೇಕು.
  4. 4. ದೇಶೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳನ್ನು ವೀಕ್ಷಿಸಲು ತಂಡದೊಂದಿಗೆ ಪ್ರಯಾಣ ಬೆಳೆಸಬೇಕು.
  5. 5. ಆಯಾ ತಂಡದ ಪ್ರದರ್ಶನಗಳ ಮೌಲ್ಯಮಾಪನ ವರದಿಗಳನ್ನು ತಯಾರಿಸಿ ಆಗಾಗ್ಗೆ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್‌ಗೆ ವರದಿ ನೀಡಬೇಕು.
  6. 6. ಬಿಸಿಸಿಐ ಸೂಚನೆಯಂತೆ ತಂಡದ ಆಯ್ಕೆಯ ಕುರಿತು ಮಾಧ್ಯಮವನ್ನು ಉದ್ದೇಶಿಸಿ ಹೇಳಿಕೆ ನೀಡಬೇಕು.
  7. 7. ಪ್ರತಿ ಸ್ವರೂಪದಲ್ಲಿ ತಂಡಕ್ಕೆ ನಾಯಕನನ್ನು ನೇಮಿಸಬೇಕು.
  8. 8. ಬಿಸಿಸಿಐನ ನಿಯಮಗಳು ಮತ್ತು ನಿಯಂತ್ರಣಕ್ಕೆ ಬದ್ಧರಾಗಿರಬೇಕು.

ಅಜಿತ್ ಅಗರ್ಕರ್ ಅವರ ವೃತ್ತಿಜೀವನ

ಟೀಂ ಇಂಡಿಯಾ ಪರ 26 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಜಿತ್ ಅಕರ್ಗರ್ 58 ವಿಕೆಟ್ ಪಡೆದಿದ್ದಾರೆ. ಹಾಗೆಯೇ 191 ಏಕದಿನ ಪಂದ್ಯಗಳಲ್ಲಿ 288 ವಿಕೆಟ್ ಕಬಳಿಸಿದರೆ. ಆಡಿರುವ 4 ಟಿ20 ಪಂದ್ಯಗಳಲ್ಲಿ 3 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಐಪಿಎಲ್​ನಲ್ಲಿ 32 ಪಂದ್ಯಗಳನ್ನಾಡಿರುವ ಅಜಿತ್ 29 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Published On - 3:38 pm, Sat, 19 November 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ