ಮದ್ಯಪಾನ ಮಾಡಿ ಮಹಿಳಾ ಕ್ರಿಕೆಟರ್ಸ್​​ ಜೊತೆಗೆ ಅನುಚಿತ ವರ್ತನೆ; ಮುಖ್ಯ ಕೋಚ್ ಅಮಾನತು..!

Hyderabad: ಮಹಿಳಾ ಕ್ರಿಕೆಟರ್​ಗಳು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಮದ್ಯ ಸೇವಿಸಿದ್ದಕ್ಕಾಗಿ ಕ್ರಿಕೆಟ್ ತಂಡದ ಕೋಚ್ ಅವರನ್ನು ಅಮಾನತುಗೊಳಿಸಲಾಗಿದೆ. ಮಹಿಳಾ ತಂಡದ ಬಸ್‌ನಲ್ಲಿ ಮದ್ಯ ಸೇವಿಸಿ ಆಟಗಾರ್ತಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಮುಖ್ಯ ಕೋಚ್ ವಿದ್ಯುತ್ ಜೈಸಿಂಹ ಅವರನ್ನು ಅಮಾನತುಗೊಳಿಸಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಕ್ರಮ ಕೈಗೊಂಡಿದೆ.

ಮದ್ಯಪಾನ ಮಾಡಿ ಮಹಿಳಾ ಕ್ರಿಕೆಟರ್ಸ್​​ ಜೊತೆಗೆ ಅನುಚಿತ ವರ್ತನೆ; ಮುಖ್ಯ ಕೋಚ್ ಅಮಾನತು..!
ಮುಖ್ಯ ಕೋಚ್ ಜೈಸಿಂಹ
Follow us
|

Updated on: Feb 16, 2024 | 10:08 PM

ಆಟದ ಜತೆಗೆ ಆಟಗಾರರಿಗೆ ಶಿಸ್ತು ಕಲಿಸುವ ತರಬೇತುದಾರರೇ ನಿಯಮ, ಮಿತಿಗಳನ್ನು ದಾಟಿದರೆ ಅದು ಬೇಲಿನೇ ಎದ್ದು ಹೊಲ ಮೇಯ್ದಂತೆ. ಇದೀಗ ಇಂತಹದೊಂದು ಪ್ರಕರಣ ಹೈದರಾಬಾದ್‌ನಲ್ಲಿ ನಡೆದಿದ್ದು, ಮಹಿಳಾ ಕ್ರಿಕೆಟರ್​ಗಳು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಮದ್ಯ ಸೇವಿಸಿದ್ದಕ್ಕಾಗಿ ಕ್ರಿಕೆಟ್ ತಂಡದ ಕೋಚ್ ಅವರನ್ನು ಅಮಾನತುಗೊಳಿಸಲಾಗಿದೆ. ಅಪರಿಚಿತ ಇಮೇಲ್‌ನಿಂದ ದೂರು ಸ್ವೀಕರಿಸಿದ ನಂತರ ಮಹಿಳಾ ತಂಡದ ಬಸ್‌ನಲ್ಲಿ ಮದ್ಯ ಸೇವಿಸಿ ಆಟಗಾರ್ತಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಮುಖ್ಯ ಕೋಚ್ ವಿದ್ಯುತ್ ಜೈಸಿಂಹ (Head Coach Jaisimha) ಅವರನ್ನು ಅಮಾನತುಗೊಳಿಸಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ (Hyderabad Cricket Association) ಕ್ರಮ ಕೈಗೊಂಡಿದೆ.

ವಿಡಿಯೋ ವೈರಲ್

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಹೈದರಾಬಾದ್ ಕ್ರಿಕೆಟ್ ಸಂಸ್ಥೆ, ‘ಅಪರಿಚಿತ ಇಮೇಲ್‌ನಲ್ಲಿ ಕೋಚ್ ವಿರುದ್ಧ ದೂರು ಸ್ವೀಕರಿಸಲಾಗಿದೆ. ಇಮೇಲ್​ನಲ್ಲಿ ಕೋಚ್ ವಿರುದ್ಧ ಗಂಭೀರ ಆರೋಪ ಮಾಡಲಾಗಿತ್ತು. ದೂರಿನ ಜೊತೆಗೆ ಈ ಇಮೇಲ್‌ನಲ್ಲಿ ವೀಡಿಯೋಗಳನ್ನೂ ಕಳುಹಿಸಲಾಗಿದ್ದು, ಆ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿವೆ. ಇದರಲ್ಲಿ ಕೋಚ್ ಜೈಸಿಂಹ ಅವರು ಮಹಿಳಾ ಆಟಗಾರ್ತಿಯರು ಪ್ರಯಾಣಿಸುತ್ತಿರುವ ಬಸ್​ನಲ್ಲಿ ಬಾಟಲಿಯಲ್ಲಿ ಏನನ್ನೋ ಕುಡಿಯುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ದೂರುದಾರರು, ಕೋಚ್ ಮದ್ಯ ಸೇವಿಸುತ್ತಿದ್ದರು ಎಂಬ ಆರೋಪ ಹೊರಿಸಿದ್ದಾರೆ.

ತರಬೇತುದಾರರ ಅಮಾನತು

ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ‘ಫೆಬ್ರವರಿ 15 ರಂದು ನಮಗೆ ಈ ಇಮೇಲ್ ಬಂದಿದ್ದು, ಆ ನಂತರ HCA ಆಪಾದಿತ ಕೋಚ್ ಜೈಸಿಂಹ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಅಮಾನತುಗೊಳಿಸಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಅವರು ಎಚ್‌ಸಿಎಯಲ್ಲಿ ಯಾವುದೇ ಕ್ರಿಕೆಟ್ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಎಚ್‌ಸಿಎ ಸ್ಪಷ್ಟಪಡಿಸಿದೆ.

ಬಿಸಿಸಿಐ-ಸುಪ್ರೀಂ ಕೋರ್ಟ್‌ಗೆ ದೂರು

ಇದೆಲ್ಲದರ ಹೊರತಾಗಿ, ಎಚ್‌ಸಿಎಗೆ ಸಂಬಂಧಿಸಿದ ಮಹಿಳಾ ಕ್ರಿಕೆಟಿಗರ ಕುಟುಂಬವು ಬಿಸಿಸಿಐ ಮತ್ತು ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಿದೆ. ಅದರಲ್ಲಿ ಅವರು ಮುಖ್ಯ ಕೋಚ್‌ನ ವರ್ತನೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಮುಖ್ಯ ಕೋಚ್ ಯಾವಾಗಲೂ ಹುಡುಗಿಯರ ಮುಂದೆ ಕುಡಿದು ಬಂದು ಅನುಚಿತವಾಗಿ ವರ್ತಿಸುತ್ತಾರೆ, ಇದರಿಂದ ಹುಡುಗಿಯರ ಸುರಕ್ಷತೆ ಮತ್ತು ಎಚ್‌ಸಿಎ ಗೌರವವೂ ಅಪಾಯದಲ್ಲಿದೆ ಎಂದು ಈ ಪತ್ರದಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ