Women’s Asia Cup 2024: 4 ಗಂಟೆ ಮುಂಚಿತವಾಗಿ ಆರಂಭವಾಗಲಿದೆ ಏಷ್ಯಾಕಪ್ ಫೈನಲ್ ಪಂದ್ಯ! ಕಾರಣವೇನು?

|

Updated on: Jul 25, 2024 | 10:02 PM

Women's Asia Cup 2024: ಹಳೆಯ ವೇಳಾಪಟ್ಟಿಯ ಪ್ರಕಾರ, ಮಹಿಳಾ ಏಷ್ಯಾಕಪ್ 2024 ರ ಫೈನಲ್ ಪಂದ್ಯ ಜುಲೈ 28 ರಂದು ಸಂಜೆ 7 ಗಂಟೆಗೆ ನಡೆಯಬೇಕಿತ್ತು. ಈಗ ಈ ಪಂದ್ಯ ನಾಲ್ಕು ಗಂಟೆ ಮುಂಚಿತವಾಗಿ ನಡೆಯಲಿದೆ. ಅಂದರೆ ಮಧ್ಯಾಹ್ನ 3 ಗಂಟೆಯಿಂದ ಈ ಪಂದ್ಯ ನಡೆಯಲಿದೆ. ಅದೇ ದಿನ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯವೂ ನಡೆಯಲಿದ್ದು, ಈ ಪಂದ್ಯವೂ ಸಂಜೆ ನಡೆಯಲಿದೆ. ಹೀಗಾಗಿ ಎರಡೂ ಪಂದ್ಯಗಳು ಒಂದೇ ಸಮಯಕ್ಕೆ ಆರಂಭವಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

Womens Asia Cup 2024: 4 ಗಂಟೆ ಮುಂಚಿತವಾಗಿ ಆರಂಭವಾಗಲಿದೆ ಏಷ್ಯಾಕಪ್ ಫೈನಲ್ ಪಂದ್ಯ! ಕಾರಣವೇನು?
ಭಾರತ ಮಹಿಳಾ ತಂಡ
Follow us on

ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್​ನ ಸೆಮಿಫೈನಲ್‌ ಪಂದ್ಯಗಳು ನಾಳೆ ಅಂದರೆ ಜುಲೈ 26 ರಂದು ನಡೆಯಲ್ಲಿವೆ. ಎರಡೂ ಸೆಮಿಫೈನಲ್‌ ಪಂದ್ಯಗಳು ಒಂದೇ ದಿನ ನಡೆಯಲ್ಲಿದ್ದು, ದಿನದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾದರೆ, ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಆತಿಥೇಯ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಈ ಎರಡೂ ಸೆಮಿಫೈನಲ್‌ ಪಂದ್ಯಗಳಲ್ಲಿ ಗೆದ್ದ ತಂಡಗಳು ಜುಲೈ 28 ರಂದು ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಆದರೆ ಅದಕ್ಕೂ ಮುನ್ನ ಫೈನಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಬಿಗ್ ಅಪ್​ಡೇಟ್​ ಒಂದು ಹೊರಬಿದ್ದಿದೆ. ಅದರ ಪ್ರಕಾರ, ಫೈನಲ್ ಪಂದ್ಯ ಆರಂಭವಾಗುವ ಸಮಯದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ.

4 ಗಂಟೆಗೆ ಮುಂಚಿತವಾಗಿ ಆರಂಭ

ಹಳೆಯ ವೇಳಾಪಟ್ಟಿಯ ಪ್ರಕಾರ, ಮಹಿಳಾ ಏಷ್ಯಾಕಪ್ 2024 ರ ಫೈನಲ್ ಪಂದ್ಯ ಜುಲೈ 28 ರಂದು ಸಂಜೆ 7 ಗಂಟೆಗೆ ನಡೆಯಬೇಕಿತ್ತು. ಈಗ ಈ ಪಂದ್ಯ ನಾಲ್ಕು ಗಂಟೆ ಮುಂಚಿತವಾಗಿ ನಡೆಯಲಿದೆ. ಅಂದರೆ ಮಧ್ಯಾಹ್ನ 3 ಗಂಟೆಯಿಂದ ಈ ಪಂದ್ಯ ನಡೆಯಲಿದೆ. ಅದೇ ದಿನ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯವೂ ನಡೆಯಲಿದ್ದು, ಈ ಪಂದ್ಯವೂ ಸಂಜೆ ನಡೆಯಲಿದೆ. ಹೀಗಾಗಿ ಎರಡೂ ಪಂದ್ಯಗಳು ಒಂದೇ ಸಮಯಕ್ಕೆ ಆರಂಭವಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಸೆಮೀಸ್​ಗೆ 4 ತಂಡಗಳು

ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶವು 2024 ರ ಮಹಿಳಾ ಏಷ್ಯಾಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಿವೆ. ಉಳಿದ ನಾಲ್ಕು ತಂಡಗಳ ಪಯಣ ಮೊದಲ ಸುತ್ತಿನಲ್ಲೇ ಕೊನೆಗೊಂಡಿದೆ. ಮೊದಲ ಸೆಮಿಫೈನಲ್ ಪಂದ್ಯ ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿದೆ. ಈ ಪಂದ್ಯ 2 ಗಂಟೆಯಿಂದ ಆರಂಭವಾಗಲಿದೆ.

ಎರಡನೇ ಸೆಮಿಫೈನಲ್ ಪಂದ್ಯ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಈ ಪಂದ್ಯ ಸಂಜೆ 7 ಗಂಟೆಯಿಂದ ನಡೆಯಲಿದೆ. ಸೆಮಿಫೈನಲ್‌ನಲ್ಲಿ ಗೆದ್ದ ಎರಡು ತಂಡಗಳು ಫೈನಲ್‌ಗೆ ತಮ್ಮ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಜುಲೈ 28 ರ ಭಾನುವಾರದಂದು ಫೈನಲ್ ಪಂದ್ಯ ನಡೆಯಲಿದೆ. ಮೊದಲು ಈ ಪಂದ್ಯ ಏಳು ಗಂಟೆಗೆ ನಡೆಯಬೇಕಿತ್ತು, ಆದರೆ ಈಗ ಈ ಪಂದ್ಯ ಮಧ್ಯಾಹ್ನ ಮೂರು ಗಂಟೆಯಿಂದ ನಡೆಯಲಿದೆ.

ವೇಳಾಪಟ್ಟಿ ಇಲ್ಲಿದೆ

ಜುಲೈ 26 (ಸೆಮಿಫೈನಲ್)

  • ಸೆಮಿಫೈನಲ್ 1- ಭಾರತ vs ಬಾಂಗ್ಲಾದೇಶ; ಮಧ್ಯಾಹ್ನ 2 ಗಂಟೆಗೆ ಆರಂಭ
  • ಸೆಮಿಫೈನಲ್ 2- ಶ್ರೀಲಂಕಾ vs ಪಾಕಿಸ್ತಾನ; ಸಂಜೆ 7 ಗಂಟೆಗೆ ಆರಂಭ

ಜುಲೈ 28 (ಫೈನಲ್)

  • ಸೆಮಿಫೈನಲ್ 1 ರ ವಿಜೇತ ತಂಡ vs ಸೆಮಿಫೈನಲ್ 2ರ ವಿಜೇತ ತಂಡ; ಮಧ್ಯಾಹ್ನ 3 ಗಂಟೆಗೆ ಆರಂಭ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:57 pm, Thu, 25 July 24