Women’s Asia Cup 2024 Final: ಹರ್ಮನ್ ಪಡೆಗೆ ಮುಳುವಾದ ಅತಿ ಆತ್ಮವಿಶ್ವಾಸ; ಶ್ರೀಲಂಕಾಗೆ ಏಷ್ಯನ್ ಕಿರೀಟ
Women's Asia Cup 2024 Final: ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ ರೋಚಕ ಜಯ ಸಾಧಿಸುವುದರೊಂದಿಗೆ ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತೀವ್ರ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಅತಿಯಾದ ಆತ್ಮವಿಶ್ವಾಸ, ಕಳಪೆ ನಾಯಕತ್ವ, ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿದ್ದು ಹಾಗೂ ಕಳಪೆ ಬೌಲಿಂಗ್ ಟೀಂ ಇಂಡಿಯಾದ ಸೋಲಿಗೆ ಪ್ರಮುಖ ಕಾರಣವಾಯಿತು.
ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ ರೋಚಕ ಜಯ ಸಾಧಿಸುವುದರೊಂದಿಗೆ ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತೀವ್ರ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಅತಿಯಾದ ಆತ್ಮವಿಶ್ವಾಸ, ಕಳಪೆ ನಾಯಕತ್ವ, ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿದ್ದು ಹಾಗೂ ಕಳಪೆ ಬೌಲಿಂಗ್ ಟೀಂ ಇಂಡಿಯಾದ ಸೋಲಿಗೆ ಪ್ರಮುಖ ಕಾರಣವಾಯಿತು. ಇಡೀ ಪಂದ್ಯದುದ್ದಕ್ಕೂ ಗೆಲುವಿಗಾಗಿ ಹೋರಾಡಿದ ಶ್ರೀಲಂಕಾ ತಂಡ, ಭಾರತ ಮತ್ತು ಬಾಂಗ್ಲಾದೇಶದ ನಂತರ ಏಷ್ಯಾಕಪ್ ಗೆದ್ದ ಮೂರನೇ ಮಹಿಳಾ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 6 ವಿಕೆಟ್ ಕಳೆದುಕೊಂಡು 165 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಲಂಕಾ 19ನೇ ಓವರ್ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.
165 ರನ್‌ಗಳ ಟಾರ್ಗೆಟ್
ಈ ಪಂದ್ಯದಲ್ಲಿ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಕೇವಲ 16 ರನ್ ಗಳಿಸಲಷ್ಟೇ ಶಕ್ತರಾದರು. ಆದರೂ ಸ್ಮೃತಿ ಮಂಧಾನ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ, 47 ಎಸೆತಗಳಲ್ಲಿ 60 ರನ್‌ಗಳ ಕಾಣಿಕೆ ನೀಡಿದರು. ಅವರ ಈ ಇನ್ನಿಂಗ್ಸ್ನಲ್ಲಿ 10 ಬೌಂಡರಿಗಳು ಸೇರಿದ್ದವು. ಕೊನೆಯಲ್ಲಿ ರಿಚಾ ಘೋಷ್ ಕೂಡ ಕೇವಲ 14 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 30 ರನ್‌ಗಳ ಕಾಣಿಕೆ ನೀಡಿದರು. ಉಳಿದಂತೆ ಜೆಮಿಮಾ ರೋಡ್ರಿಗಸ್ 16 ಎಸೆತಗಳಲ್ಲಿ 29 ರನ್‌ಗಳ ಕೊಡುಗೆ ನೀಡಿದರು. ಈ ಮೂಲಕ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.
ಗೆಲುವಿನ ಹೋರಾಟ ನೀಡಿದ ಲಂಕಾ
166 ರನ್‌ಗಳಿಗೆ ಉತ್ತರವಾಗಿ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೇವಲ 7 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ಇದಾದ ನಂತರ ಎರಡನೇ ವಿಕೆಟ್ಗೆ ಅರ್ಧಶತಕಕ್ಕೂ ಹೆಚ್ಚಿನ ಜೊತೆಯಾಟ ಬಂತು. ಶ್ರೀಲಂಕಾ ಪರ ನಾಯಕಿ ಚಾಮರಿ ಅಟಪಟ್ಟು 43 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಾಯದಿಂದ 61 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಇವರಲ್ಲದೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಹರ್ಷಿತಾ ಕೂಡ 51 ಎಸೆತಗಳಲ್ಲಿ 69 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
𝗖𝗛𝗔𝗠𝗣𝗜𝗢𝗡𝗦 🇱🇰🏆#WomensAsiaCup2024 #ACC #HerStory #SLWvINDW #GrandFinale pic.twitter.com/4knbEkIz5H
— AsianCricketCouncil (@ACCMedia1) July 28, 2024
ಎರಡನೇ ಬಾರಿ ಫೈನಲ್ ಸೋಲು
ಇದು ಮಹಿಳೆಯರ ಏಷ್ಯಾಕಪ್‌ನ 9 ನೇ ಆವೃತ್ತಿಯಾಗಿದ್ದು, ಈ ಟೂರ್ನಿಯ ಪ್ರತಿ ಫೈನಲ್ ಆಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಇದಕ್ಕೂ ಮುನ್ನ ಆಡಿದ 8 ಏಷ್ಯಾಕಪ್ ಫೈನಲ್ ಪಂದ್ಯಗಳಲ್ಲಿ 7 ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದಿದ್ದ ಭಾರತ ಒಮ್ಮೆ ಮಾತ್ರ ಸೋಲನ್ನು ಎದುರಿಸಬೇಕಾಯಿತು. 2018ರಲ್ಲಿ ಬಾಂಗ್ಲಾದೇಶ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿತ್ತು. ಇದಾದ ನಂತರ ಟೀಂ ಇಂಡಿಯಾ ಏಷ್ಯಾಕಪ್ ಪ್ರಶಸ್ತಿ ಗೆಲ್ಲುವುದನ್ನು ತಪ್ಪಿಸಿಕೊಂಡಿರುವುದು ಇದು ಎರಡನೇ ಬಾರಿ. ಈ ಪಂದ್ಯವನ್ನೂ ಸುಲಭವಾಗಿ ಗೆಲ್ಲಬಹುದಾಗಿದ್ದ ಟೀಂ ಇಂಡಿಯಾ ತಾನು ಮಾಡಿಕೊಂಡ ತಪ್ಪುಗಳಿಂದಲೇ ಸೋಲಿನ ಬೆಲೆ ತೆರಬೇಕಾಯಿತು.
Published On - 6:26 pm, Sun, 28 July 24