ಮಹಿಳಾ ಏಷ್ಯಾಕಪ್‌ನಲ್ಲಿ ಇಂದು ಭಾರತ- ಪಾಕಿಸ್ತಾನ ಮುಖಾಮುಖಿಯಾಗಿದ್ದು, ಟೀಂ ಇಂಡಿಯಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭಾರತ ವನಿತಾ ಪಡೆಗೆ 137 ರನ್ ಟಾರ್ಗೆಟ್ ನೀಡಿದೆ. ಆದರೆ ಈ ಪಂದ್ಯದಲ್ಲಿ ಹೈಲೇಟ್ ಆಗಿದ್ದು ಮಾತ್ರ ಪಾಕ್ ಆಟಗಾರ್ತಿ ನಿದಾ ದಾರ್. ಮಹಿಳಾ ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ 37 ಎಸೆತಗಳಲ್ಲಿ ಔಟಾಗದೆ 56 ರನ್ ಗಳಿಸಿದ್ದ ನಿದಾ ದಾರ್ ತಂಡವನ್ನು ಗೌರವಯುತ ಮೊತ್ತಕ್ಕೆ ಕೊಂಡೊಯ್ದರು. ಆದರೆ ಇಲ್ಲಿ ಎಲ್ಲರೂ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ಇದೆ ನಿದಾ ದಾರ್, ಕೆಲ ಗಂಟೆಗಳ ಹಿಂದೆ ಸೇಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗಿದ್ದರು. ಇದಕ್ಕೆ ಪ್ರಮುಖ ಕಾರಣ ಕಳೆದ ಪಂದ್ಯದಲ್ಲಿ ಈ ಆಟಗಾರ್ತಿ ಆಡಿದ ನಿಧಾನಗತಿಯ ಬ್ಯಾಟಿಂಗ್. ಆದರೆ ಈಗ ನಿದಾ ದಾರ್ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ದೊಡ್ಡ ದಾಖಲೆಯನ್ನು ಮುರಿದಿದ್ದಾರೆ.
ಭಾರತದ ವಿರುದ್ಧ ನಿದಾ ದಾರ್ 5 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅರ್ಧಶತಕ ಗಳಿಸಿದರು. ಈ ಸಂದರ್ಭದಲ್ಲಿ ಅವರ ಸ್ಟ್ರೈಕ್ ರೇಟ್ 150ಕ್ಕಿಂತ ಹೆಚ್ಚಿತ್ತು.ಕಳೆದ ಪಂದ್ಯದಲ್ಲಿ ನಿದಾ ದಾರ್ ಥಾಯ್ಲೆಂಡ್ ವಿರುದ್ಧ 22 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಜೊತೆಗೆ ಈ ಪಂದ್ಯದಲ್ಲಿ ಪಾಕಿಸ್ತಾನ ಸೋಲನುಭವಿಸಬೇಕಾಯಿತು. ಹೀಗಾಗಿ ಕ್ರಿಕೆಟ್ ಶಿಶು ಥಾಯ್ಲೆಂಡ್ ವಿರುದ್ಧ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ಸೋತಿದ್ದಕ್ಕೆ ದೇಶವಾಸಿಗಳು ಕೋಪಗೊಂಡಿದ್ದರು.
ದಾಖಲೆ ಮುರಿದ ನಿದಾ ದಾರ್
ನಿದಾ ದಾರ್ ಅವರು ಭಾರತದ ವಿರುದ್ಧ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಏಷ್ಯಾಕಪ್ ಇತಿಹಾಸದಲ್ಲಿ ಅತಿವೇಗವಾಗಿ ಅರ್ಧಶತಕ ಬಾರಿಸಿದ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆಯನ್ನು ಭಾರತದ ಜೆಮಿಮಾ ರಾಡ್ರಿಗಸ್ ಮಾಡಿದ್ದರು. ಯುಎಇ ವಿರುದ್ಧ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಜೆಮಿಮಾ ಇತಿಹಾಸ ಸೃಷ್ಟಿಸಿದ್ದರು. ಈಗ ಅರ್ಧಶತಕ ಸಿಡಿಸಿರುವ ನಿದಾ ದಾರ್ ಪಾಕಿಸ್ತಾನದ ಪರ ಅತಿವೇಗವಾಗಿ ಅರ್ಧಶತಕ ಗಳಿಸಿದ ಆಟಗಾರ್ತಿ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಮೂರು ವರ್ಷಗಳ ಹಿಂದೆ ನಿದಾ, 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.
Fastest half-centuries for Pakistan Women in T20Is:
20 balls – Nida Dar vs. ?? (2019)
?? ????? – ???? ??? ??. ?? (?????)#WomensAsiaCup2022 #INDvPAK pic.twitter.com/pGlcWblaLJ— Grassroots Cricket (@grassrootscric) October 7, 2022
ಇದುವರೆಗೆ ನಿದಾ ದಾರ್ ಪಾಕಿಸ್ತಾನದ ಪರವಾಗಿ 6 ಟಿ20 ಅರ್ಧಶತಕಗಳನ್ನು ಗಳಿಸಿದ್ದು, ಈ ಅರ್ಧಶತಕದ ವಿಚಾರದಲ್ಲಿ ನಿದಾ, ಬಿಸ್ಮಹ್ ಮೆಹರೂಫ್ ಮತ್ತು ಜವೇರಿಯಾ ಖಾನ್ಗಿಂತ ಹಿಂದೆ ಇದ್ದಾರೆ. ಬಿಸ್ಮಾ ಪಾಕಿಸ್ತಾನದ ಪರ ಅತಿ ಹೆಚ್ಚು 11 T20 ಅರ್ಧಶತಕಗಳನ್ನು ಹೊಂದಿದ್ದರೆ, ಜಾವೇರಿಯಾ 9 T20 ಅರ್ಧ ಶತಕಗಳನ್ನು ಗಳಿಸಿದ್ದಾರೆ.
ಕಳಪೆ ಆರಂಭದ ಹೊರತಾಗಿಯೂ ಉತ್ತಮ ಸ್ಕೋರ್ ಕಲೆಹಾಕಿದ ಪಾಕಿಸ್ತಾನ
ಭಾರತದ ವಿರುದ್ಧ ಪಾಕಿಸ್ತಾನದ ಆರಂಭ ಉತ್ತಮವಾಗಿರಲಿಲ್ಲ. ಪವರ್‌ಪ್ಲೇಯಲ್ಲಿ 33 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಆದರೆ ಇದರ ನಂತರ ನಿದಾ ದಾರ್ ಪ್ರಚಂಡ ಬ್ಯಾಟಿಂಗ್ ಮಾ, ನಾಯಕಿ ಬಿಸ್ಮಹ್ ಮಹ್ರೂಫ್ ಅವರೊಂದಿಗೆ ಅರ್ಧಶತಕದ ಜೊತೆಯಾಟ ನಡೆಸಿದರು. ಅಂತಿಮವಾಗಿ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 137 ರನ್ ಗಳಿಸಲಷ್ಟೇ ಶಕ್ತವಾಯಿತು.