ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯ 5ನೇ ಪಂದ್ಯದಲ್ಲಿ ಭಾರತ ಮತ್ತು ಯುಎಇ ತಂಡಗಳು ಮುಖಾಮುಖಿಯಾಗಲಿದೆ. ದಂಬುಲ್ಲಾದ ರಂಗಿರಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡವು ಗೆದ್ದರೆ ಸೆಮಿಫೈನಲ್ಗೆ ಎಂಟ್ರಿ ಕೊಡಲಿದೆ. ಏಕೆಂದರೆ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಮಹಿಳಾ ತಂಡದ ವಿರುದ್ಧ ಭಾರತೀಯ ಮಹಿಳೆಯರು ಭರ್ಜರಿ ಜಯ ಸಾಧಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.2 ಓವರ್ಗಳಲ್ಲಿ 108 ರನ್ ಬಾರಿಸಿ ಆಲೌಟ್ ಆಗಿದ್ದರು. ಈ ಗುರಿಯನ್ನು ಬೆನ್ನತ್ತಿದ ಭಾರತ 14.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 109 ರನ್ ಬಾರಿಸಿ ಅಮೋಘ ಗೆಲುವು ದಾಖಲಿಸಿತು.
ಈ ಗೆಲುವಿನೊಂದಿಗೆ ಭಾರತ ತಂಡವು ಗ್ರೂಪ್-ಎ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಅಲ್ಲದೆ +2.294 ನೆಟ್ ರನ್ ರೇಟ್ ಹೊಂದಿರುವ ಭಾರತ ತಂಡವು ಯುಎಇ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದರೆ ಸೆಮಿಫೈನಲ್ ಹಂತಕ್ಕೇರುವುದು ಖಚಿತ. ಈ ಪಂದ್ಯದ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ಎಷ್ಟು ಗಂಟೆಗೆ ಪಂದ್ಯ ಶುರು?
ಭಾರತ ಮತ್ತು ಯುಎಇ ನಡುವಣ ಪಂದ್ಯದ ಟಾಸ್ ಪ್ರಕ್ರಿಯೆಯು ಮಧ್ಯಾಹ್ನ 1.30 ಕ್ಕೆ ನಡೆಯಲಿದ್ದು, ಪಂದ್ಯವು 2 PM ಗಂಟೆಯಿಂದ ಶುರುವಾಗಲಿದೆ.
ಯಾವ ಚಾನೆಲ್ನಲ್ಲಿ ವೀಕ್ಷಿಸಬಹುದು?
ಈ ಪಂದ್ಯದ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನ ಚಾನೆಲ್ಗಳಲ್ಲಿ ಇರಲಿದೆ. ಹಾಗೆಯೇ ಡಿಸ್ನಿ ಹಾಟ್ ಸ್ಟಾರ್ ಆ್ಯಪ್ ಮೂಲಕ ಕೂಡ ಈ ಪಂದ್ಯವನ್ನು ಲೈವ್ ವೀಕ್ಷಿಸಬಹುದು.
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಸಜನಾ ಸಜೀವನ್.
ಇದನ್ನೂ ಓದಿ: Asia Cup 2024: ಮಹಿಳಾ ಏಷ್ಯಾಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಯುಎಇ ತಂಡ: ಇಶಾ ರೋಹಿತ್ ಓಜಾ (ನಾಯಕಿ), ಕವಿಶಾ ಕುಮಾರಿ, ರಿತಿಕಾ ರಜಿತ್, ಸಮೈರಾ ಧರ್ಣಿಧರ್ಕಾ, ಲಾವಣ್ಯ ಕೇನಿ, ಎಮಿಲಿ ಥಾಮಸ್, ಹೀನಾ ಹರೀಶ್ ಹೊಚ್ಚಂದಾನಿ, ಮೆಹಕ್ ಠಾಕೂರ್, ಇಂಧುಜಾ ನಂದಕುಮಾರ್, ರಿನಿತಾ ರಜಿತ್, ಖುಷಿ ಮೋಹನ್ ಶರ್ಮಾ, ರಿಷಿತಾ ರಜಿತ್, ಸುರಕ್ಷಾ ಕೊಟ್ಟೆ ಸತೀಶ್, ವೈಷ್ಣವೆ ಮಹೇಶ್.