ICC ಮಹಿಳಾ ಕ್ರಿಕೆಟ್ ವಿಶ್ವಕಪ್ 2022 ರಲ್ಲಿ ಮಂಗಳವಾರ ಎರಡು ಪಂದ್ಯಗಳು ನಡೆದಿದ್ದವು. ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಮತ್ತು ಭಾರತ-ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿತ್ತು. ಇವುಗಳಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಸುಲಭ ಜಯ ದಾಖಲಿಸಿದವು. ಈ ಫಲಿತಾಂಶಗಳ ನಂತರ , ಮಹಿಳಾ ವಿಶ್ವಕಪ್‌ನ ಪಾಯಿಂಟ್‌ಗಳ ಪಟ್ಟಿಯಲ್ಲಿ ಪುನರ್ರಚನೆಯಾಗಿದೆ . ಆಸ್ಟ್ರೇಲಿಯಾ ಮೊದಲಿನಂತೆಯೇ ಮೊದಲ ಸ್ಥಾನದಲ್ಲಿದ್ದು, ಸೆಮಿಫೈನಲ್‌ನಲ್ಲಿ ಆಡುವುದನ್ನು ಖಚಿತಪಡಿಸಿಕೊಂಡಿದೆ. ಇನ್ನು ಈ ಗೆಲುವಿನ ನಂತರ ಭಾರತ ಒಂದು ಸ್ಥಾನ ಜಿಗಿದು ಮೂರನೇ ಸ್ಥಾನಕ್ಕೇರಿತು. ಇದೀಗ ಮಿಥಾಲಿ ರಾಜ್ ನಾಯಕತ್ವದಲ್ಲಿ ಭಾರತ ಸೆಮಿಫೈನಲ್ ತಲುಪುವುದು ತುಂಬಾ ಸುಲಭವಾಗಿದೆ. ಆದರೆ, ಸೆಮಿಫೈನಲ್‌ನ ಮೂರು ತಂಡಗಳು ಇನ್ನೂ ನಿರ್ಧಾರವಾಗಿಲ್ಲ.
ಆರು ಪಂದ್ಯಗಳಲ್ಲಿ ಭಾರತಕ್ಕೆ ಇದು ಮೂರನೇ ಜಯವಾಗಿದ್ದು, ಆರು ಅಂಕಗಳಿಗೆ ತಲುಪಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಂತರ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಭಾರತ ತಂಡದ ನೆಟ್ ರನ್ ರೇಟ್ ಕೂಡ ಸುಧಾರಿಸಿದೆ. ರನ್ ರೇಟ್ +0.768 ಇದ್ದು, ಆಸ್ಟ್ರೇಲಿಯಾದ ನಂತರ ಉತ್ತಮ ನೆಟ್ ರನ್ ರೇಟ್ ಹೊಂದಿದೆ. ಭಾರತ ತನ್ನ ಕೊನೆಯ ಲೀಗ್ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಮಾರ್ಚ್ 27 ರಂದು ಆಡಲಿದೆ. ಸೆಮಿಫೈನಲ್‌ನ ಮೂರನೇ ಮತ್ತು ನಾಲ್ಕನೇ ತಂಡ ಯಾವುದು ಎಂಬುದನ್ನು ಈ ಪಂದ್ಯದ ಫಲಿತಾಂಶ ನಿರ್ಧರಿಸುತ್ತದೆ.
ಮಾರ್ಚ್ 24 ರಂದು ಭಾರತದ ಭವಿಷ್ಯ:
ದಕ್ಷಿಣ ಆಫ್ರಿಕಾ ಕೂಡ ಭಾರತಕ್ಕಿಂತ ಮೊದಲು ಮಾರ್ಚ್ 24 ರಂದು ವೆಸ್ಟ್ ಇಂಡೀಸ್ ವಿರುದ್ದ ಆಡಲಿದೆ. ಇದರಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ ಕೊನೆಯ-4ರ ಘಟ್ಟಕ್ಕೆ ಹೋಗಲಿದೆ. ಇದರೊಂದಿಗೆ ಭಾರತ ಹೊರಬೀಳಬಹುದು. ಆದರೆ ವೆಸ್ಟ್ ಇಂಡೀಸ್ ಪ್ರಸ್ತುತ ಆರು ಪಂದ್ಯಗಳಲ್ಲಿ ಮೂರು ಗೆಲುವಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಆದರೆ ವಿಂಡೀಸ್ ನೆಟ್ ರನ್ ರೇಟ್ ಮೈನಸ್‌ನಲ್ಲಿರುವುದರಿಂದ ಭಾರತಕ್ಕೆ ನೆಟ್ ರನ್ ರೇಟ್ ಮೂಲಕ ಸೆಮಿಫೈನಲ್ಗೇರುವ ಅವಕಾಶ ದೊರೆಯಲಿದೆ.
ಬಾಂಗ್ಲಾದೇಶ-ಪಾಕಿಸ್ತಾನ ಔಟ್:
ಐದು ಪಂದ್ಯಗಳಲ್ಲಿ ಬಾಂಗ್ಲಾದೇಶಕ್ಕೆ ಇದು ನಾಲ್ಕನೇ ಸೋಲು. ಇದರೊಂದಿಗೆ ಬಾಂಗ್ಲಾ ಸೆಮಿಫೈನಲ್‌ನ ರೇಸ್‌ನಿಂದ ಹೊರಬಿದ್ದಿದೆ. ಹಾಗೆಯೇ ಪಾಕಿಸ್ತಾನ ತಂಡ ಎಂಟನೇ ಸ್ಥಾನದಲ್ಲಿದ್ದು, ಪಾಯಿಂಟ್ ಟೇಬಲ್ನಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್ ರೇಸ್‌ನಿಂದ ಈಗಾಗಲೇ ಹೊರಬಿದ್ದಂತಾಗಿದೆ.
ಇದನ್ನೂ ಓದಿ: IPL 2022: ಐಪಿಎಲ್ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!
ಇದನ್ನೂ ಓದಿ: IPL 2022: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಇವರೇ..!
ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?
(Women’s World Cup 2022 Points Table India vs Bangladesh match indian team rises to 3rd Australia on top)