ICC World Cup 2023: ‘ಬೆಂಗಳೂರು, ಚೆನ್ನೈ ಪಂದ್ಯಗಳಲ್ಲಿ ಬದಲಾವಣೆ ಮಾಡಿ’; ಮತ್ತೆ ಕ್ಯಾತೆ ತೆಗೆದ ಪಾಕ್ ಮಂಡಳಿ

ICC World Cup 2023: ಕರಡು ವೇಳಾಪಟ್ಟಿಯ ಪ್ರಕಾರ, ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಬೇಕಾಗಿದ್ದು, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ (ಚೆಪಾಕ್) ಅಫ್ಘಾನಿಸ್ತಾನವನ್ನು ಎದುರಿಸಬೇಕಾಗಿದೆ.

ICC World Cup 2023: ‘ಬೆಂಗಳೂರು, ಚೆನ್ನೈ ಪಂದ್ಯಗಳಲ್ಲಿ ಬದಲಾವಣೆ ಮಾಡಿ’; ಮತ್ತೆ ಕ್ಯಾತೆ ತೆಗೆದ ಪಾಕ್ ಮಂಡಳಿ
ಏಕದಿನ ವಿಶ್ವಕಪ್
Follow us
ಪೃಥ್ವಿಶಂಕರ
|

Updated on:Jun 18, 2023 | 8:51 AM

ಇಷ್ಟು ದಿನ ಏಷ್ಯಾಕಪ್ (Asia Cup 2023) ಆಯೋಜನೆಯ ಬಗ್ಗೆ ಬಿಸಿಸಿಐ (BCCI) ಜೊತೆ ಶೀತಲ ಸಮರಕ್ಕಿಳಿದಿದ್ದ ಪಾಕಿಸ್ತಾನ ಇದೀಗ ವಿಶ್ವಕಪ್ ಆಯೋಜನೆಯ ಬಗ್ಗೆ ತಕರಾರು ತೆಗೆದಿದೆ. ಬಹಳ ಕಸರತ್ತುಗಳು ನಡೆದ ಬಳಿಕ ಏಷ್ಯಾಕಪ್ ಆಯೋಜನೆಗೆ ಅಂತಿಮ ಮುದ್ರೆ ಬಿದ್ದಿದೆ. ಆದರೀಗ ಹೊಸ ಕ್ಯಾತೆ ತೆಗೆದಿರುವ ಪಾಕ್ ಮಂಡಳಿ (PCB), ಬೆಂಗಳೂರು ಹಾಗೂ ಚೆನ್ನೈನಲ್ಲಿ ನಿಗದಿ ಮಾಡಿರುವ ಪಂದ್ಯಗಳಲ್ಲಿ ಬದಲಾವಣೆ ಮಾಡಬೇಕು ಎಂಬ ಮನವಿ ಇಟ್ಟಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಬಿಸಿಸಿಐ ಸಿದ್ಧಪಡಿಸಿರುವ ಕರಡು ವೇಳಾಪಟ್ಟಿಯ ಪ್ರಕಾರ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M Chinnaswamy Stadium) ಪಾಕಿಸ್ತಾನ, ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಬೇಕಾಗಿದ್ದು, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ (MA Chidambaram Stadium) (ಚೆಪಾಕ್) ಅಫ್ಘಾನಿಸ್ತಾನವನ್ನು ಎದುರಿಸಬೇಕಾಗಿದೆ. ಬಿಸಿಸಿಐನ ಈ ನಿರ್ಧಾರ ಪಾಕ್ ತಂಡಕ್ಕೆ ಆತಂಕ ತಂದೊಡ್ಡಿದೆ. ಹೀಗಾಗಿ ಪಾಕ್ ಮಂಡಳಿ ಈ ಎರಡೂ ಸ್ಥಳಗಳಲ್ಲಿ ನಡೆಯಲ್ಲಿರುವ ಪಂದ್ಯಗಳನ್ನು ಅದಲು ಬದಲು ಮಾಡುವಂತೆ ಕೇಳಿಕೊಂಡಿದೆ ಎಂದು ವರದಿಯಾಗಿದೆ.

ಅಕ್ಟೋಬರ್ 5 ರಂದು ಪ್ರಾರಂಭವಾಗಲಿರುವ ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸಲು ಪಾಕಿಸ್ತಾನವು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಆದರೆ ನೆರೆಯ ರಾಷ್ಟ್ರ ಮತ್ತು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗಿನ ಶೀತಲ ಸಮರದಿಂದಾಗಿ ಪಾಕ್ ಮಂಡಳಿ, ಬಿಸಿಸಿಐ ನಿಗದಿ ಮಾಡಿರುವ ಸ್ಥಳಗಳ ಬಗ್ಗೆ ಚಕಾರ ಎತ್ತಿದೆ. ಈ ಮೊದಲು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡಲ್ಲ ಎಂದಿದ್ದ ಪಾಕ್ ಹಲವಾರು ಟೀಕೆಗಳ ಬಳಿಕ ಮೋದಿ ಮೈದಾನದಲ್ಲಿ ಆಡಲು ಒಪ್ಪಿಕೊಂಡಿತ್ತು. ಇದೀಗ ಪಾಕ್ ಹೊಸ ಸಮಸ್ಯೆಯನ್ನು ಐಸಿಸಿ ಮುಂದಿಟ್ಟಿದೆ.

ICC World Cup Qualifier: ವಿಶ್ವಕಪ್ ಅರ್ಹತಾ ಸುತ್ತು ಯಾವಾಗ, ಎಲ್ಲಿ ಆರಂಭ? ಎಷ್ಟು ತಂಡಗಳ ನಡುವೆ ಫೈಟ್? ಇಲ್ಲಿದೆ ಪೂರ್ಣ ವಿವರ

ಚೆನ್ನೈ ಪಿಚ್ ಸ್ಪಿನ್ನರ್​ಗಳಿಗೆ ಸಹಕಾರಿ

ಕ್ರಿಕೆಟ್ ಪಾಕಿಸ್ತಾನದ ವರದಿಯ ಪ್ರಕಾರ, ಪಿಸಿಬಿ ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಿಗೆ ಸ್ಥಳವನ್ನು ಬದಲಾಯಿಸಲು ವಿನಂತಿಸುತ್ತಿದೆ ಎಂದು ವರದಿಯಾಗಿದೆ. ಸ್ಥಳ ಬದಲಾವಣೆಗೆ ಕಾರಣವನ್ನು ನೀಡಿರುವ ಪಾಕ್, ಚೆನ್ನೈನ ಪಿಚ್ ಹೆಚ್ಚು ಸ್ಪಿನ್ ಬೌಲರ್‌ಗಳಿಗೆ ನೆರವಾಗುತ್ತದೆ. ಅಫ್ಘಾನಿಸ್ತಾನ ತಂಡ ರಶೀದ್ ಖಾನ್, ನೂರ್ ಅಹ್ಮದ್ ಸೇರಿದಂತೆ ಕೆಲವು ಗುಣಮಟ್ಟದ ಸ್ಪಿನ್ನರ್​ಗಳನ್ನು ಹೊಂದಿದೆ. ಇದು ನಮ್ಮ ತಂಡ ನಾಕೌಟ್‌ಗೆ ತಲುಪುವ ಅವಕಾಶಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕದಲ್ಲಿ ಪಾಕಿಸ್ತಾನವಿದೆ. ಹೀಗಾಗಿ ಚೆನ್ನೈನಲ್ಲಿ ನಿಗದಿಪಡಿಸಿರುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಬೆಂಗಳೂರಿಗೆ ಶಿಫ್ಟ್ ಮಾಡುವಂತೆ ಪಾಕ್ ಮಂಡಳಿ ಒತ್ತಾಯಿಸಿದೆ ಎಂದು ವರದಿಯಾಗಿದೆ.

ಬೆಂಗಳೂರು ಪಿಚ್ ವೇಗಿಗಳಿಗೆ ಸಹಕಾರಿ

ಹಾಗೆಯೇ ಬಾಬರ್ ಅಜಮ್ ನೇತೃತ್ವದ ಪಾಕ್ ತಂಡ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಬೇಕಾಗಿದ್ದು, ಈ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸಲು ಕೇಳಿಕೊಂಡಿದೆ. ಎಲ್ಲರಿಗೂ ತಿಳಿದಿರುವಂತೆ ಬೆಂಗಳೂರು ಪಿಚ್ ಬ್ಯಾಟ್ಸ್​ಮನ್​ಗಳ ಸ್ವರ್ಗವಾಗಿದೆ. ಅಲ್ಲದೆ ಪಿಚ್ ಸ್ಪಿನ್ನರ್​ಗಳಿಗಿಂತ ಹೆಚ್ಚಾಗಿ ವೇಗದ ಬೌಲರ್​ಗಳಿಗೆ ನೆರವಾಗುತ್ತದೆ. ಆಸೀಸ್ ತಂಡ ಗುಣಮಟ್ಟದ ವೇಗದ ಬೌಲಿಂಗ್ ವಿಭಾಗವನ್ನು ಹೊಂದಿರುವುದರಿಂದ ಬೆಂಗಳೂರು ಪಿಚ್​ನಲ್ಲಿ ಆಸೀಸ್ ವೇಗಿಗಳಿಗೆ ಹೆಚ್ಚಿನ ಅನುಕೂಲವಾಗುವ ಸಾಧ್ಯತೆಯಿದೆ. ಆದ್ದರಿಂದ, ಆಡುವ ಪರಿಸ್ಥಿತಿಗಳಿಂದಾಗಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯಗಳಿಗೆ ಸ್ಥಳಗಳನ್ನು ಬದಲಾಯಿಸಲು ಪಿಸಿಬಿ ವಿನಂತಿಸಿದೆ ಎಂದು ವರದಿಯಾಗಿದೆ.

ಬಿಸಿಸಿಐ, ಐಸಿಸಿಗೆ ಸಲ್ಲಿಸಿದ ಕರಡು ವೇಳಾಪಟ್ಟಿ ಪ್ರಕಾರ ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯದಲ್ಲಿ ಆತಿಥೇಯ ಭಾರತವನ್ನು, ಪಾಕಿಸ್ತಾನ ಎದುರಿಸಲಿದೆ. ಪಾಕಿಸ್ತಾನವು ಮೊದಲು ಅಹಮದಾಬಾದ್‌ನಲ್ಲಿ ಯಾವುದೇ ಪಂದ್ಯಗಳನ್ನು ಆಡಲು ನಿರಾಕರಿಸಿತು ಆದರೆ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮತ್ತು ಸಿಇಒ ಜಿಯೋಫ್ ಅಲ್ಲಾರ್ಡಿಸ್ ಪಾಕಿಸ್ತಾನಕ್ಕೆ ಭೇಟಿ ನೀಡಿ ಪಾಕ್ ಮಂಡಳಿಯ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.

ವಿಶ್ವಕಪ್​ನಲ್ಲಿ ಪಾಕ್ ತಂಡದ ವೇಳಾಪಟ್ಟಿ ಹೀಗಿದೆ:

  1. ಪಾಕಿಸ್ತಾನ vs ಕ್ವಾಲಿಫೈಯರ್, ಅಕ್ಟೋಬರ್ 6, ಹೈದರಾಬಾದ್
  2. ಪಾಕಿಸ್ತಾನ vs ಕ್ವಾಲಿಫೈಯರ್, ಅಕ್ಟೋಬರ್ 12, ಹೈದರಾಬಾದ್
  3. ಪಾಕಿಸ್ತಾನ vs ಭಾರತ, ಅಕ್ಟೋಬರ್ 15, ಅಹಮದಾಬಾದ್
  4. ಪಾಕಿಸ್ತಾನ vs ಆಸ್ಟ್ರೇಲಿಯಾ, ಅಕ್ಟೋಬರ್ 20, ಬೆಂಗಳೂರು
  5. ಪಾಕಿಸ್ತಾನ vs ಅಫ್ಘಾನಿಸ್ತಾನ, ಅಕ್ಟೋಬರ್ 23, ಚೆನ್ನೈ
  6. ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಅಕ್ಟೋಬರ್ 27, ಚೆನ್ನೈ
  7. ಪಾಕಿಸ್ತಾನ vs ಬಾಂಗ್ಲಾದೇಶ, ಅಕ್ಟೋಬರ್ 31, ಕೋಲ್ಕತ್ತಾ
  8. ಪಾಕಿಸ್ತಾನ vs ನ್ಯೂಜಿಲೆಂಡ್, ನವೆಂಬರ್ 5, ಬೆಂಗಳೂರು
  9. ಪಾಕಿಸ್ತಾನ vs ಇಂಗ್ಲೆಂಡ್, ನವೆಂಬರ್ 12, ಕೋಲ್ಕತ್ತಾ

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:48 am, Sun, 18 June 23

Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!