AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2023: ಲೀಗ್​ನಲ್ಲಿರುವ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು? ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

WPL 2023: ಭಾರತದಲ್ಲಿ ಮಹಿಳಾ ಪ್ರೀಮಿಯರ್​ ಲೀಗ್​ ಅನ್ನು ಲೈವ್-ಸ್ಟ್ರೀಮಿಂಗ್ ಮಾಡುವ ಹಕ್ಕನ್ನು ಜಿಯೋ ಸಿನಿಮಾ ಪಡೆದುಕೊಂಡಿದೆ. ಈ ಪ್ಲಾಟ್‌ಫಾರ್ಮ್ ಎಲ್ಲಾ ಪಂದ್ಯಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡುತ್ತದೆ.

WPL 2023: ಲೀಗ್​ನಲ್ಲಿರುವ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು? ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?
ಮಹಿಳಾ ಪ್ರೀಮಿಯರ್ ಲೀಗ್‌
ಪೃಥ್ವಿಶಂಕರ
|

Updated on:Mar 04, 2023 | 2:08 PM

Share

ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) ಮೊದಲ ಆವೃತ್ತಿಗಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮೆಗಾ ಕ್ರಿಕೆಟ್ ಲೀಗ್ ಶನಿವಾರ (ಮಾರ್ಚ್ 4) ಆರಂಭವಾಗಲಿದೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ (Gujarat Giants and Mumbai Indians) ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಪಂದ್ಯಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಂಬೈ ಮತ್ತು ನವಿ ಮುಂಬೈ ಮೈದಾನಗಳಲ್ಲಿ ಬಿಸಿಸಿಐ (BCCI) ಈ ಟೂರ್ನಿಯನ್ನು ಆಯೋಜಿಸಿದೆ. ಲೀಗ್ ಸುತ್ತಿನಲ್ಲಿ ಐದು ತಂಡಗಳು ಎರಡು ಬಾರಿ ಮುಖಾಮುಖಿಯಾಗಲಿವೆ. ಲೀಗ್ ಸುತ್ತಿನಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿವೆ. ವಾಸ್ತವವಾಗಿ ಐಪಿಎಲ್ (IPL)​ನಲ್ಲಿರುವ ನಿಯಮಗಳಿಗೂ ಹಾಗೂ ಡಬ್ಲ್ಯುಪಿಲ್​ನಲ್ಲಿರುವ ನಿಯಮಗಳಿಗೂ ಅಷ್ಟಾಗಿ ವ್ಯತ್ಯಾಸಗಳಿಲ್ಲದಿದ್ದರು ಕೆಲವೊಂದು ಬದಲಾವಣೆ ಮಾಡಲಾಗಿದೆ. ಅದರ ಪೂರ್ಣ ವಿವರ ಇಲ್ಲಿದೆ.

ಡಬ್ಲ್ಯುಪಿಲ್​ನಲ್ಲಿನ ನಿಯಮಗಳು

ಇಡೀ ಟೂರ್ನಿಯಲ್ಲಿ ಫೈನಲ್ ತಲುಪಲು ಐದು ತಂಡಗಳು ಪೈಪೋಟಿ ನಡೆಸಲಿವೆ. ಒಂದು ವೇಳೆ 20 ಪಂದ್ಯಗಳ ನಂತರ ಮೂರು ತಂಡಗಳು ಒಂದೇ ಅಂಕಗಳನ್ನು ಹೊಂದಿದ್ದರೆ, ಆ ಬಳಿಕ ರನ್ ರೇಟ್ ಮೇಲೆ ಗಮನಹರಿಸಲಾಗುತ್ತದೆ. ಇಲ್ಲಿ ಉತ್ತಮ ರನ್ ರೇಟ್ ಹೊಂದಿರುವ ತಂಡ ನೇರವಾಗಿ ಫೈನಲ್‌ಗೆ ಹೋಗುತ್ತದೆ. ಉಳಿದ ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ತಂಡಗಳು ಫೈನಲ್‌ಗೆ ತಲುಪಲು ಪರಸ್ಪರ ಮುಖಾಮುಖಿಯಾಗಲಿವೆ. ಬಳಿಕ ಫೈನಲ್‌ನಲ್ಲಿ ಪಂದ್ಯ ಡ್ರಾ ಆದಲ್ಲಿ ಸೂಪರ್‌ ಓವರ್‌ ಆಡಲಾಗುತ್ತದೆ. ಆದರೆ ಸೂಪರ್ ಓವರ್‌ನಲ್ಲಿಯೂ ಪಂದ್ಯ ಮತ್ತೆ ಟೈ ಆದರೆ, ಒಂದು ನಿರ್ದಿಷ್ಟ ಫಲಿತಾಂಶ ಹೊರಬರುವವರೆಗೂ ಸೂಪರ್ ಓವರ್ ಆಡಿಸಲಾಗುತ್ತದೆ.

WPL 2023: ಟೂರ್ನಿ ಆರಂಭಕ್ಕೂ ಮುನ್ನ ಆರ್​ಸಿಬಿ ಸೇರಿಕೊಂಡ ಸಾನಿಯಾ ಮಿರ್ಜಾ; ಹೇಳಿದ್ದೇನು ಗೊತ್ತಾ?

ಆಟಗಾರ್ತಿಗೆ ದಂಡ ವಿಧಿಸಲಾಗುತ್ತದೆ

ಐಪಿಎಲ್​ನಂತೆಯೇ ಡಬ್ಲ್ಯುಪಿಲ್​ನಲ್ಲಿಯೂ ನಾಲ್ಕು ಸ್ಟ್ರಾಟೆಜಿಕ್ ಟೈಮ್ ಔಟ್‌ಗಳನ್ನು ತೆಗೆದುಕೊಳ್ಳಬಹುದಾಗಿದೆ. ಫೀಲ್ಡಿಂಗ್ ತಂಡವು ಇದನ್ನು 6 ರಿಂದ 9 ನೇ ಓವರ್ ಒಳಗೆ ತೆಗೆದುಕೊಳ್ಳಬಹುದಾಗಿದೆ. ಇತ್ತ ಬ್ಯಾಟಿಂಗ್ ಮಾಡುವ ತಂಡ ಇದನ್ನು 13 ರಿಂದ 16 ನೇ ಓವರ್​ ಒಳಗೆ ಬಳಸಬಹುದಾಗಿದೆ. ಒಂದು ವಿಕೆಟ್ ಪತನವಾದರೆ, ಅಂಪೈರ್‌ನ ನಿರ್ಧಾರವನ್ನು ಪ್ರಶ್ನಿಸಲು ಪ್ರತಿ ತಂಡವು 2 ಡಿಆರ್‌ಎಸ್ ತೆಗೆದುಕೊಳ್ಳುವ ಅವಕಾಶ ಹೊಂದಿದೆ. ವಿಕೆಟ್ ಪತನವಾದ 90 ಸೆಕೆಂಡುಗಳ ನಂತರ ಹೊಸ ಬ್ಯಾಟರ್ ಮೈದಾನಕ್ಕೆ ಪ್ರವೇಶಿಸದಿದ್ದರೆ, ಆ ಆಟಗಾರ್ತಿಗೆ ದಂಡ ವಿಧಿಸಲಾಗುತ್ತದೆ.

ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರ ಪ್ರಸಾರ

ಈ ಟೂರ್ನಿಯಲ್ಲಿ ಒಟ್ಟು 5 ತಂಡಗಳಿದ್ದು, ಒಟ್ಟು 22 ಪಂದ್ಯಗಳು ನಡೆಯಲಿವೆ. ಅಂತಿಮ ಪಂದ್ಯವು 26 ಮಾರ್ಚ್ 2023 ರಂದು ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಸಮಾರಂಭ ಮಾರ್ಚ್ 4 ರಂದು ಸಂಜೆ 4.30 ಕ್ಕೆ ಪ್ರಾರಂಭವಾಗಲಿದ್ದು, ನಂತರ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವು 7 ಗಂಟೆಗೆ ಪ್ರಾರಂಭವಾಗಲಿದೆ. ಎಲ್ಲಾ ಐಪಿಎಲ್ ಪಂದ್ಯಗಳನ್ನು ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಲೈವ್ ಪಂದ್ಯಗಳನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.

ಜಿಯೋ ಸಿನಿಮಾ ಅಪ್ಲಿಕೇಶನ್​ನಲ್ಲಿ ಉಚಿತ ವೀಕ್ಷಣೆ

ಭಾರತದಲ್ಲಿ ಮಹಿಳಾ ಪ್ರೀಮಿಯರ್​ ಲೀಗ್​ ಅನ್ನು ಲೈವ್-ಸ್ಟ್ರೀಮಿಂಗ್ ಮಾಡುವ ಹಕ್ಕನ್ನು ಜಿಯೋ ಸಿನಿಮಾ ಪಡೆದುಕೊಂಡಿದೆ. ಈ ಪ್ಲಾಟ್‌ಫಾರ್ಮ್ ಎಲ್ಲಾ ಪಂದ್ಯಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡುತ್ತದೆ. ಈ ಜಿಯೋ ಸಿನಿಮಾ ಅಪ್ಲಿಕೇಶನ್ ಎಲ್ಲಾ ಬಳಕೆದಾರರಿಗೆ ಲಭ್ಯವಿದ್ದು, ಏರ್‌ಟೆಲ್, ಜಿಯೋ, ವಿ, ಅಥವಾ ಬಿಎಸ್‌ಎನ್‌ಎಲ್ ಗ್ರಾಹಕರು ಈ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡುವುದರೊಂದಿಗೆ ಇಡೀ ಟೂರ್ನಿಯನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:03 pm, Sat, 4 March 23

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ