WPL 2024: ವುಮೆನ್ಸ್ ಪ್ರೀಮಿಯರ್ ಲೀಗ್ ಕುರಿತಾದ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
Women's Premier League 2024: ವುಮೆನ್ಸ್ ಪ್ರೀಮಿಯರ್ ಲೀಗ್ನ 2ನೇ ಆವೃತ್ತಿ ನಾಳೆಯಿಂದ (ಫೆ.23) ಆರಂಭವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ.
ರಂಗು ರಂಗಿನ ಕ್ರಿಕೆಟ್ ಟೂರ್ನಿ ವುಮೆನ್ಸ್ ಪ್ರೀಮಿಯರ್ ಲೀಗ್ (WPL 2024) ಆರಂಭಕ್ಕೆ ವೇದಿಕೆ ಸಿದ್ಧವಾಗಿದೆ. ಫೆಬ್ರವರಿ 23 ರಿಂದ ಶುರುವಾಗಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ 17 ರಂದು ನಡೆಯಲಿದೆ. ಮೊದಲ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಫೈನಲ್ ಪಂದ್ಯಕ್ಕೆ ಅರುಣ್ ಜೇಟ್ಲಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇನ್ನು ಈ ಟೂರ್ನಿಯ ಕುರಿತಾದ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…
1- ಎಷ್ಟು ತಂಡಗಳ ನಡುವಣ ಟೂರ್ನಿ?
ಈ ಟೂರ್ನಿಯಲ್ಲಿ ಒಟ್ಟು ಐದು ತಂಡಗಳು ಕಣಕ್ಕಿಳಿಯಲಿದೆ.
2- ಐದು ತಂಡಗಳಾವುವು?
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಮುಂಬೈ ಇಂಡಿಯನ್ಸ್
ಗುಜರಾತ್ ಜೈಂಟ್ಸ್
ಯುಪಿ ವಾರ್ಯರ್ಸ್
ಡೆಲ್ಲಿ ಕ್ಯಾಪಿಟಲ್ಸ್
3- ಈ ತಂಡಗಳ ನಾಯಕಿಯರು ಯಾರು?
ಹರ್ಮನ್‌ಪ್ರೀತ್ ಕೌರ್ (ಮುಂಬೈ ಇಂಡಿಯನ್ಸ್)
ಮೆಗ್ ಲ್ಯಾನಿಂಗ್ (ಡೆಲ್ಲಿ ಕ್ಯಾಪಿಟಲ್ಸ್)
ಸ್ಮೃತಿ ಮಂಧಾನ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಅಲಿಸ್ಸಾ ಹೀಲಿ (ಯುಪಿ ವಾರಿಯರ್ಸ್)
ಬೆತ್ ಮೂನಿ (ಗುಜರಾತ್ ಜೈಂಟ್ಸ್)
4- ಒಟ್ಟು ಎಷ್ಟು ಪಂದ್ಯಗಳು ನಡೆಯಲಿದೆ?
ಈ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳನ್ನು ಆಡಲಾಗುತ್ತದೆ. ಪ್ರತಿ ತಂಡಗಳು ಇತರ ನಾಲ್ಕು ತಂಡಗಳನ್ನು 2 ಬಾರಿ ಎದುರಿಸಲಿದೆ.
5- ಯಾವ ತಂಡಗಳ ನಡುವೆ ಮೊದಲ ಪಂದ್ಯ?
ವುಮೆನ್ಸ್ ಪ್ರೀಮಿಯರ್ ಲೀಗ್ 2024 ರ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ.
6- ಟೂರ್ನಿಯ ಫಾರ್ಮಾಟ್ ಯಾವುದು?
ಲೀಗ್ ಹಂತದಲ್ಲಿ ಎಲ್ಲಾ ತಂಡಗಳು ಪರಸ್ಪರ 4 ಪಂದ್ಯಗಳನ್ನಾಡಲಿದೆ. ಇಲ್ಲಿ ಪಾಯಿಂಟ್ ಟೇಬಲ್ ಲೆಕ್ಕಾಚಾರ ಇರಲಿದ್ದು, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡವು ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ. ಇನ್ನು 2ನೇ ಮತ್ತು 3ನೇ ಸ್ಥಾನಗಳನ್ನು ಪಡೆಯುವ ತಂಡ ಎಲಿಮಿನೇಟರ್ ಪಂದ್ಯವನ್ನು ಆಡಲಿದ್ದು, ಇದರಲ್ಲಿ ಗೆಲ್ಲುವ ತಂಡ ಫೈನಲ್ಗೆ ಅರ್ಹತೆ ಪಡೆಯಲಿದೆ.
7- ಎಷ್ಟು ಗಂಟೆಗೆ ಪಂದ್ಯ ಶುರು?
ಈ ಬಾರಿಯ ಟೂರ್ನಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7.30 ರಿಂದ ಶುರುವಾಗಲಿದೆ.
8- ಪಂದ್ಯ ನಡೆಯುವುದು ಎಲ್ಲಿ?
ಈ ಸಲ ವುಮೆನ್ಸ್ ಪ್ರೀಮಿಯರ್ ಲೀಗ್ ಎರಡು ನಗರಗಳಲ್ಲಿ ನಡೆಯಲಿರುವುದು ವಿಶೇಷ. ಅದರಂತೆ ಮೊದಲ ಹಂತದ ಪಂದ್ಯಗಳಿಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಹಾಗೆಯೇ ಫೈನಲ್ ಸೇರಿದಂತೆ ದ್ವಿತೀಯ ಹಂತದ ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ.
9- ಹಾಲಿ ಚಾಂಪಿಯನ್ ಯಾರು?
2023 ರಲ್ಲಿ ನಡೆದ ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಇದೇ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
10- ಆರ್ಸಿಬಿ ತಂಡದ ಮೊದಲ ಪಂಧ್ಯ ಯಾವಾಗ?
ಫೆಬ್ರವರಿ 24 ರಂದು ಯುಪಿ ವಾರಿಯರ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ ಅಭಿಯಾನ ಆರಂಭಿಸಲಿದೆ.