ಮೊದಲ ಸೀಸನ್ನ ಯಶಸ್ಸಿನ ನಂತರ ಮಹಿಳಾ ಪ್ರೀಮಿಯರ್ ಲೀಗ್ (WPL 2024) ಎರಡನೇ ಸೀಸನ್ ಬಗ್ಗೆ ಕುತೂಹಲ ಹೆಚ್ಚಿದೆ. ಲೀಗ್‌ನ ಎರಡನೇ ಋತು ಫೆಬ್ರವರಿ-ಮಾರ್ಚ್‌ನಲ್ಲಿ ಆಯೋಜಿಸುವ ನಿರೀಕ್ಷೆಯಿದೆ. ಪಂದ್ಯಾವಳಿಗೆ ಇನ್ನೂ ಸಾಕಷ್ಟು ಸಮಯ ಉಳಿದಿದೆ, ಆದರೆ ಅದಕ್ಕೂ ಮೊದಲು ಇಂದು ಡಿಸೆಂಬರ್ 9 ರ ಶನಿವಾರದಂದು ಹರಾಜು ಆಯೋಜಿಸಲಾಗುತ್ತಿದೆ. 5 ತಂಡಗಳಿರುವ ಈ ಟೂರ್ನಿಯ ಎರಡನೇ ಹರಾಜು ಇದಾಗಿದೆ. ಈ ಹರಾಜಿನ ವಿಶೇಷತೆಗಳೇನು, ಎಷ್ಟು ಆಟಗಾರರನ್ನು ಬಿಡ್ ಮಾಡಲಾಗುತ್ತದೆ, ತಂಡಗಳ ಬಳಿ ಎಷ್ಟು ಹಣವಿದೆ? ಈ ಎಲ್ಲಾ ಮಾಹಿತಿಯನ್ನು ನೋಡೋಣ.
ಕಳೆದ ಸೀಸನ್‌ನಂತೆ ಈ ಬಾರಿ ಕೂಡ ಡಬ್ಲ್ಯುಪಿಎಲ್ 2024 ಹರಾಜು ಮುಂಬೈನಲ್ಲಿ ನಡೆಯಲಿದೆ. ಈ ಬಾರಿಯೂ ಕೇವಲ ಒಂದು ದಿನದ ಕಾರ್ಯಕ್ರಮವಾಗಿದ್ದು, ಮಧ್ಯಾಹ್ನ 2ರಿಂದ ಆರಂಭವಾಗಲಿದೆ. ಐದು ಫ್ರಾಂಚೈಸಿಗಳಾದ – ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ದೊಡ್ಡ ಆಟಗಾರರನ್ನು ಪಡೆಯುವತ್ತ ಚಿತ್ತ ನೆಟ್ಟಿದೆ.
IND vs SA: ಟೀಮ್ ಇಂಡಿಯಾ ಆಟಗಾರರ ಜೊತೆ ಫ್ಲೈಟ್ನಲ್ಲಿದ್ದ ಈ ಹುಡುಗಿ ಯಾರು ಗೊತ್ತೇ?
WPL ನಿಯಮಗಳ ಅಡಿಯಲ್ಲಿ, ಪ್ರತಿ ಫ್ರಾಂಚೈಸಿಯು ತನ್ನ ತಂಡದಲ್ಲಿ ಗರಿಷ್ಠ 18 ಮತ್ತು ಕನಿಷ್ಠ 15 ಆಟಗಾರರನ್ನು ಹೊಂದಿರಬೇಕು. ಇದರಲ್ಲಿ 6ಕ್ಕಿಂತ ಹೆಚ್ಚು ವಿದೇಶಿ ಆಟಗಾರರು ಇರುವಂತಿಲ್ಲ. ಅಕ್ಟೋಬರ್‌ನಲ್ಲಿ, WPL ಫ್ರಾಂಚೈಸ್ ತನ್ನ ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಪ್ರಕಟಿಸಿತ್ತು. ಸದ್ಯ, ಹರಾಜಿನಲ್ಲಿ ಒಟ್ಟು 30 ಆಟಗಾರರ (9 ವಿದೇಶಿಯರು) ಸ್ಲಾಟ್‌ಗಳು ಖಾಲಿಯಾಗಿವೆ. ಅಂದರೆ ಗರಿಷ್ಠ 30 ಆಟಗಾರರನ್ನು ಮಾತ್ರ ಖರೀದಿಸಬಹುದು. ಈ 30 ಸ್ಲಾಟ್‌ಗಳಿಗೆ ಒಟ್ಟು 165 ಆಟಗಾರರು ಬಿಡ್ ಮಾಡುತ್ತಾರೆ. ಗುಜರಾತ್‌ನಲ್ಲಿ ಗರಿಷ್ಠ 10 ಸ್ಲಾಟ್‌ಗಳು ಖಾಲಿ ಇವೆ.
ಈ ಬಾರಿಯ ಐಪಿಎಲ್‌ನಲ್ಲಿ ಹರಾಜು ಪರ್ಸ್ 100 ಕೋಟಿ ರೂ. ಗಳಾಗಿದ್ದರೆ, ಡಬ್ಲ್ಯುಪಿಎಲ್‌ನಲ್ಲಿ ಫ್ರಾಂಚೈಸಿಗಳ ಹರಾಜು ಪರ್ಸ್ ಕೇವಲ 13.5 ಕೋಟಿ ರೂ. ಅಂದರೆ ಆಟಗಾರರನ್ನು ಖರೀದಿಸಲು ಇಷ್ಟು ಮೊತ್ತವನ್ನು ಮಾತ್ರ ವ್ಯಯಿಸಬಹುದು. ಉಳಿಸಿಕೊಂಡಿರುವ ಆಟಗಾರರ ಮೊತ್ತವನ್ನು ಈಗಾಗಲೇ ಕಡಿತಗೊಳಿಸಲಾಗಿದ್ದು, ಉಳಿದ ಮೊತ್ತವನ್ನು ಹರಾಜಿನಲ್ಲಿ ಇಡಲಾಗುವುದು. ಇದರ ಪ್ರಕಾರ, ಗುಜರಾತ್ ಅತ್ಯಧಿಕ 5.95 ಕೋಟಿ ರೂ. ಗಳೊಂದಿಗೆ ಹರಾಜಿಗೆ ಪ್ರವೇಶಿಸಲಿದೆ. ಮುಂಬೈ ಕನಿಷ್ಠ 2.1 ಕೋಟಿ ರೂ., ಯುಪಿ 4 ಕೋಟಿ, ಆರ್ಸಿಬಿ ಬಳಿ 3.35 ಕೋಟಿ ಮತ್ತು ದೆಹಲಿ ಬಳಿ 2.25 ಕೋಟಿ ರೂ. ಇದೆ.
WPL ನಲ್ಲಿ ಅತ್ಯಧಿಕ ಮೂಲ ಬೆಲೆ 50 ಲಕ್ಷ ರೂ. ಈ ಬಾರಿ ಇಬ್ಬರು ಆಟಗಾರ್ತಿಯರು ಮಾತ್ರ ಈ ಮೂಲ ಬೆಲೆ ಹೊಂದಿದ್ದಾರೆ. ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಡಿಯಾಂಡ್ರಾ ಡಾಟಿನ್ ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಕಿಮ್ ಗಾರ್ತ್ ಈ ಮೂಲ ಬೆಲೆಯನ್ನು ಕಾಯ್ದುಕೊಂಡಿದ್ದಾರೆ.
ಡಿಯಾಂಡ್ರಾ ಡಾಟಿನ್ ಮತ್ತು ಕಿಮ್ ಗಾರ್ತ್ ಹೊರತುಪಡಿಸಿ, ಕೆಲವು ವಿದೇಶಿ ಆಟಗಾರ್ತಿಯರ ಮೇಲೆ ಕಣ್ಣಿದೆ. ಇದರಲ್ಲಿ ಇಂಗ್ಲೆಂಡ್‌ನ ಸ್ಫೋಟಕ ಆರಂಭಿಕ ಬ್ಯಾಟರ್ ಡ್ಯಾನಿ ವ್ಯಾಟ್ (ಮೂಲ ಬೆಲೆ 30 ಲಕ್ಷ), ಶ್ರೀಲಂಕಾದ ಅನುಭವಿ ನಾಯಕಿ ಚಾಮ್ರಿ ಅಟಪಟ್ಟು (ಮೂಲ ಬೆಲೆ 30 ಲಕ್ಷ) ಮತ್ತು ಆಸ್ಟ್ರೇಲಿಯಾದ ಅನಾಬೆಲ್ ಸದರ್ಲ್ಯಾಂಡ್ (ಮೂಲ ಬೆಲೆ 30 ಲಕ್ಷ) ಪ್ರಮುಖ ಹೆಸರುಗಳು. ಇವರಲ್ಲದೆ, ಡಬ್ಲ್ಯುಬಿಬಿಎಲ್ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಸ್ಟ್ರೇಲಿಯಾದ ಸ್ಪಿನ್ನರ್ ಅಮಂಡಾ ಜೇಡ್ ವೆಲ್ಲಿಂಗ್ಟನ್ (ಮೂಲ ಬೆಲೆ 30 ಲಕ್ಷ ರೂ.) ಕೂಡ ದೊಡ್ಡ ಸ್ಪರ್ಧಿಯಾಗಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ