WPL 2024: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಸೋತ ಯುಪಿ ವಾರಿಯರ್ಸ್
WPL 2024: ಎರಡನೇ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ 2024 ರ 18 ನೇ ಪಂದ್ಯವು ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
ಎರಡನೇ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ 2024 (WPL 2024) ರ 18 ನೇ ಪಂದ್ಯವು ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ (Gujarat Giants vs UP Warriorz) ನಡುವೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಗುಜರಾತ್ ತಂಡಕ್ಕೆ ಈ ಪಂದ್ಯ ಕೇವಲ ಔಪಚಾರಿಕವಾಗಿದೆ. ಏಕೆಂದರೆ ಈಗಾಗಲೇ ಟೂರ್ನಿಯಲ್ಲಿ ಗೆಲುವಿಗಿಂತ ಹೆಚ್ಚು ಸೋಲು ಕಂಡಿರುವ ಗುಜರಾತ್ಗೆ ಪ್ಲೇಆಫ್ ತಲುಪುವ ಆಸೆ ಕೊನೆಗೊಂಡಿದೆ. ಆದರೆ ಯುಪಿ ವಾರಿಯರ್ಸ್ ಗುಜರಾತ್ ತಂಡವನ್ನು ದೊಡ್ಡ ಅಂತರದಿಂದ ಸೋಲಿಸುವ ಮೂಲಕ ಪ್ಲೇ ಆಫ್ ತಲುಪಲು ಸುವರ್ಣಾವಕಾಶವನ್ನು ಹೊಂದಿದೆ. ಆದಾಗ್ಯೂ, ಯುಪಿ ತಂಡ ಇಂದಿನ ಪಂದ್ಯದ ಜಯದ ಜೊತೆಗೆ ನಾಳೆ ನಡೆಯುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗಾಗಿ ಪ್ರಾರ್ಥಿಸಬೇಕಿದೆ. ಹೀಗಾದರೆ ಮಾತ್ರ ಯುಪಿ ತಂಡ ಪ್ಲೇ ಆಫ್‌ನಲ್ಲಿ ತನ್ನ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತದೆ.
ಮುಖಾಮುಖಿ ವರದಿ
ಒಂದೆಡೆ ಗುಜರಾತ್ ಜೈಂಟ್ಸ್‌ನ ಪ್ಲೇಆಫ್‌ನ ಕನಸು ಈ ಬಾರಿಯೂ ನನಸಾಗದಿದ್ದರೆ, ಮತ್ತೊಂದೆಡೆ ಯುಪಿ ವಾರಿಯರ್ಸ್‌ನ ಪ್ಲೇಆಫ್‌ನ ಆಸೆ ಇನ್ನೂ ಜೀವಂತವಾಗಿದೆ. ಎರಡೂ ತಂಡಗಳ ಮುಖಾಮುಖಿ ದಾಖಲೆಯ ಬಗ್ಗೆ ಹೇಳುವುದಾದರೆ, ಇದುವರೆಗೆ 3 ಬಾರಿ ಮುಖಾಮುಖಿಯಾಗಿವೆ. ವಿಶೇಷವೆಂದರೆ ಈ ಮೂರೂ ಪಂದ್ಯಗಳನ್ನು ಯುಪಿ ವಾರಿಯರ್ಸ್ ಗೆದ್ದುಕೊಂಡಿದೆ. ಆದರೆ ಯುಪಿ ವಾರಿಯರ್ಸ್ ಗುಜರಾತ್ ವಿರುದ್ಧದ ಎಲ್ಲಾ ಪಂದ್ಯಗಳನ್ನು ಚೇಸಿಂಗ್ ಮೂಲಕ ಗೆದ್ದಿದೆ. ಇದು ಕೂಡ ಇಂದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.
🚨 Toss 🚨@Giant_Cricket win the toss and elect to bat against @UPWarriorz
Live 📱💻 https://t.co/WHTYqs2Bd5#TATAWPL | #GGvUPW pic.twitter.com/jmymfcfiJr
— Women’s Premier League (WPL) (@wplt20) March 11, 2024
The Lineups are here 🙌
What do you make of the two teams that will take the field tonight? 🤔
Live 💻📱 https://t.co/WHTYqs2Bd5#TATAWPL | #GGvUPW pic.twitter.com/zUG9NhUNa9
— Women’s Premier League (WPL) (@wplt20) March 11, 2024
ಇಂದಿನ ಪಂದ್ಯಕ್ಕೆ 2 ತಂಡಗಳು
ಗುಜರಾತ್ ಜೈಂಟ್ಸ್: ಲಾರಾ ವೋಲ್ವರ್ಡ್, ಬೆತ್ ಮೂನಿ (ನಾಯಕಿ/ವಿಕೆಟ್ ಕೀಪರ್), ಫೋಬೆ ಲಿಚ್‌ಫೀಲ್ಡ್, ದಯಾಲನ್ ಹೇಮಾಲತಾ, ಆಶ್ಲೇ ಗಾರ್ಡ್ನರ್, ಭಾರತಿ ಫುಲ್ಮಾಲಿ, ಕ್ಯಾಥರೀನ್ ಬ್ರೈಸ್, ಮನ್ನತ್ ಕಶ್ಯಪ್, ತನುಜಾ ಕನ್ವರ್, ಮೇಘನಾ ಸಿಂಗ್, ಶಬ್ನಮ್ ಶಕೀಲ್.
ಯುಪಿ ವಾರಿಯರ್ಸ್: ಅಲಿಸಾ ಹೀಲಿ (ನಾಯಕಿ/ವಿಕೆಟ್ ಕೀಪರ್), ಕಿರಣ್ ನವಗಿರೆ, ಚಾಮರಿ ಅಥಾಪತು, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್, ಪೂನಂ ಖೇಮ್ನಾರ್, ಸೋಫಿ ಎಕ್ಲೆಸ್ಟೋನ್, ಸೈಮಾ ಠಾಕೋರ್, ರಾಜೇಶ್ವರಿ ಗಾಯಕ್ವಾಡ್, ಅಂಜಲಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Mon, 11 March 24