WPL 2024: 10 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡ ಆಟಗಾರ್ತಿಗೆ 2 ಕೋಟಿ ರೂ..!
WPL 2024 Auction: ವುಮೆನ್ಸ್ ಪ್ರೀಮಿಯರ್ ಲೀಗ್ ನಿಯಮಗಳ ಅಡಿಯಲ್ಲಿ, ಪ್ರತಿ ಫ್ರಾಂಚೈಸಿಯು ತನ್ನ ತಂಡದಲ್ಲಿ ಕನಿಷ್ಠ 15 ಮತ್ತು ಗರಿಷ್ಠ 18 ಆಟಗಾರರ್ತಿಯರನ್ನು ಹೊಂದಿರಬೇಕು. ಇದರಲ್ಲಿ 6 ವಿದೇಶಿ ಆಟಗಾರ್ತಿಯರಿಗೆ ಮಾತ್ರ ಅವಕಾಶ.
ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ (WPL 2024) ಅನ್ಕ್ಯಾಪ್ಡ್ ಪ್ಲೇಯರ್ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಯುವ ಆಟಗಾರ್ತಿ ಕಾಶ್ವೀ ಗೌತಮ್ ಬರೋಬ್ಬರಿ 2 ಕೋಟಿ ರೂ.ಗೆ ಹರಾಜಾಗಿದ್ದಾರೆ. ಕೇವಲ 10 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಕಾಶ್ವೀ ಅವರ ಖರೀದಿಗೆ ಮುಂಬೈ ಇಂಡಿಯನ್ಸ್, ಗುಜರಾತ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಸಕ್ತಿವಹಿಸಿತ್ತು.
ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಜೊತೆ ಆರ್ಸಿಬಿ ಪೈಪೋಟಿಗೆ ಇಳಿಯಿತು. ಆದರೆ ಯುವ ಆಟಗಾರ್ತಿಯ ಬಿಡ್ಡಿಂಗ್ ಮೊತ್ತ 50 ಲಕ್ಷ ರೂ. ದಾಟುತ್ತಿದ್ದಂತೆ ಆರ್ಸಿಬಿ ಹಿಂದೆ ಸರಿಯಿತು. ಆದರೆ ಮತ್ತೊಂದೆಡೆ ಗುಜರಾತ್ ಜೈಂಟ್ಸ್ ತಂಡವು ಕಾಶ್ವೀ ಗೌತಮ್ ಖರೀದಿಗೆ ಹೆಚ್ಚಿನ ಆಸಕ್ತಿವಹಿಸಿತು. ಪರಿಣಾಮ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು.
ಪರಿಣಾಮ ಕಾಶ್ವೀ ಅವರ ಬಿಡ್ಡಿಂಗ್ ಮೊತ್ತ ಒಂದೂವರೆ ಕೋಟಿ ದಾಟಿತು. ಈ ಹಂತದಲ್ಲೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಿಂದೆ ಸರಿಯಲು ಮುಂದಾಗಿರಲಿಲ್ಲ. ಅದರಂತೆ 1.90 ಕೋಟಿ ರೂ.ವರೆಗೆ ಮುಂಬೈ ಪೈಪೋಟಿ ನಡೆಸಿತು.
ಆದರೆ ಅಂತಿಮವಾಗಿ 2 ಕೋಟಿ ರೂ.ಗೆ ಬಿಡ್ಡಿಂಗ್ ಮಾಡುವ ಮೂಲಕ ಗುಜರಾತ್ ಜೈಂಟ್ಸ್ ತಂಡವು ಕಾಶ್ವೀ ಗೌತಮ್ ಅವರನ್ನು ತಮ್ಮದಾಗಿಸಿಕೊಂಡಿತು. ಅಂದರೆ ಮೂಲ ಬೆಲೆಗಿಂತ 20 ಪಟ್ಟು ಅಧಿಕ ಮೊತ್ತಕ್ಕೆ 20 ವರ್ಷದ ವೇಗಿ ಕಾಶ್ವೀ ಗೌತಮ್ ಹರಾಜಾಗಿದ್ದಾರೆ.
𝐆𝐢𝐚𝐧𝐭 bid 🤝🏻 𝐆𝐢𝐚𝐧𝐭 player! 💪🏻
Kashvee Gautam joins our team for a day-record bid of ₹ 2Cr. 🔥#TATAWPLAuction #Cricket #BringItOn #Adani pic.twitter.com/Z4kr613yRo
— Gujarat Giants (@Giant_Cricket) December 9, 2023
ಗುಜರಾತ್ ಜೈಂಟ್ಸ್ ತಂಡವು ಉಳಿಸಿಕೊಂಡಿರುವ ಆಟಗಾರ್ತಿಯರು: ಆಶ್ಲೀಗ್ ಗಾರ್ಡ್ನರ್*, ಬೆತ್ ಮೂನಿ*, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್*, ಶಬ್ನಮ್ ಶಕಿಲ್, ಸ್ನೇಹ ರಾಣಾ, ತನುಜಾ ಕನ್ವರ್.
Hat-trick ✅ 10 wickets in a one-day game ✅ 49 runs with the bat ✅ Leading from the front ✅
4.5-1-12-10! 👌👌
Kashvee Gautam stars as Chandigarh beat Arunachal Pradesh in the @paytm Women’s Under 19 One Day Trophy. 👏👏 #U19Oneday
Scorecard 👉👉 https://t.co/X8jDMMh5PS pic.twitter.com/GWUW9uUgtF
— BCCI Women (@BCCIWomen) February 25, 2020
ಕನಿಷ್ಠ 15 ಆಟಗಾರ್ತಿಯರು:
ವುಮೆನ್ಸ್ ಪ್ರೀಮಿಯರ್ ಲೀಗ್ ನಿಯಮಗಳ ಅಡಿಯಲ್ಲಿ, ಪ್ರತಿ ಫ್ರಾಂಚೈಸಿಯು ತನ್ನ ತಂಡದಲ್ಲಿ ಕನಿಷ್ಠ 15 ಮತ್ತು ಗರಿಷ್ಠ 18 ಆಟಗಾರರ್ತಿಯರನ್ನು ಹೊಂದಿರಬೇಕು. ಇದರಲ್ಲಿ 6 ವಿದೇಶಿ ಆಟಗಾರ್ತಿಯರಿಗೆ ಮಾತ್ರ ಅವಕಾಶ.
Published On - 4:58 pm, Sat, 9 December 23