WPL 2024: ಯುಪಿ ವಾರಿಯರ್ಸ್​ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು

| Updated By: ಝಾಹಿರ್ ಯೂಸುಫ್

Updated on: Feb 26, 2024 | 9:02 AM

UP Warriorz vs Delhi Capitals: ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಮೂರನೇ ಬಾರಿ. ಕಳೆದ ಸೀಸನ್​ನಲ್ಲಿ ಆಡಿದ್ದ 2 ಪಂದ್ಯಗಳಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಜಯ ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯದ ಮೂಲಕ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ ಯುಪಿ ವಾರಿಯರ್ಸ್​.

WPL 2024: ಯುಪಿ ವಾರಿಯರ್ಸ್​ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು
Delhi Capitals vs UP Warriorz
Follow us on

ವುಮೆನ್ಸ್ ಪ್ರೀಮಿಯರ್ ಲೀಗ್​ನ (WPL 2024) 4ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಉಭಯ ತಂಡಗಳು ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದು, ಹೀಗಾಗಿ ಈ ಪಂದ್ಯದ ಗೆಲ್ಲುವ ತಂಡ ಗೆಲುವಿನ ಖಾತೆ ತೆರೆಯಲಿದೆ. ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್​ಗಳಿಂದ ಸೋಲನುಭವಿಸಿತ್ತು. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮೊದಲ ಪಂದ್ಯವಾಡಿದ್ದ ಯುಪಿ ವಾರಿಯರ್ಸ್ ತಂಡವು 2 ರನ್​ಗಳಿಂದ ಪರಾಜಯಗೊಂಡಿತ್ತು.

ಇದೀಗ ಉಭಯ ತಂಡಗಳು ತಮ್ಮ 2ನೇ ಪಂದ್ಯದ ಮೂಲಕ ಗೆಲುವಿನ ಖಾತೆ ತೆರೆಯುವ ಇರಾದೆಯಲ್ಲಿದೆ. ವಿಶೇಷ ಎಂದರೆ ಈ ಎರಡೂ ತಂಡಗಳನ್ನು ಮುನ್ನಡೆಸುತ್ತಿರುವುದು ಆಸ್ಟ್ರೇಲಿಯಾ ಆಟಗಾರ್ತಿಯರು. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಂದಾಳತ್ವವನ್ನು ವಹಿಸಿಕೊಂಡಿದ್ದರೆ, ಆಸೀಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಅಲಿಸ್ಸಾ ಹೀಲಿ ನಾಯಕತ್ವದಲ್ಲಿ ಯುಪಿ ವಾರಿಯರ್ಸ್ ಕಣಕ್ಕಿಳಿಯಲಿದೆ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

ಉಭಯ ತಂಡಗಳ ಮುಖಾಮುಖಿ:

ಯುಪಿ ವಾರಿಯರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇದುವರೆಗೆ 2 ಬಾರಿ ಮುಖಾಮುಖಿಯಾಗಿದೆ. ಈ ಎರಡೂ ಪಂದ್ಯಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವೇ ಗೆದ್ದುಕೊಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಜಯ ಸಾಧಿಸಿದರೆ ಅದು ಡೆಲ್ಲಿ ವಿರುದ್ದದ ಮೊದಲ ಗೆಲುವಾಗಿರಲಿದೆ.

ಯುಪಿ ವಾರಿಯರ್ಸ್​ (UPW) ತಂಡ: ಅಲಿಸ್ಸಾ ಹೀಲಿ*, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್*, ಕಿರಣ್ ನವಗಿರೆ, ಚಾಮರಿ ಅಥಾಪತ್ತು*, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್‌ವಾಡ್, ಎಸ್. ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್*, ತಹ್ಲಿಯಾ, ಡ್ಯಾನಿ ವ್ಯಾಟ್*, ವೃಂದಾ ದಿನೇಶ್, ಪೂನಮ್ ಖೇಮ್ನಾರ್, ಸೈಮಾ ಠಾಕೋರ್, ಗೌಹರ್ ಸುಲ್ತಾನಾ.

ಇದನ್ನೂ ಓದಿ: IPL 2024: ಇಬ್ಬರು ಭಾರತೀಯರು: 10 ತಂಡಗಳ ಕೋಚ್​ ಫೈನಲ್​

ಡೆಲ್ಲಿ ಕ್ಯಾಪಿಟಲ್ಸ್ (DC) ತಂಡ: ಆಲಿಸ್ ಕ್ಯಾಪ್ಸೆ*, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ಜೆಸ್ ಜೊನಾಸೆನ್*, ಲಾರಾ ಹ್ಯಾರಿಸ್*, ಮರಿಜಾನ್ನೆ ಕಪ್*, ಮೆಗ್ ಲ್ಯಾನಿಂಗ್ (ನಾಯಕಿ), ಮಿನ್ನು ಮಣಿ, ಪೂನಂ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತಾನಿಯಾ, ಟಿಟಾಸ್ ಸಾಧು, ಅನ್ನಾಬೆಲ್ ಸದರ್ಲ್ಯಾಂಡ್*, ಅಪರ್ಣಾ ಮೊಂಡಲ್, , ಅಶ್ವನಿ ಕುಮಾರಿ.