WPL 2024: ಟಾಸ್ ಗೆದ್ದ ಯುಪಿ ವಾರಿಯರ್ಸ್​; ಗುಜರಾತ್ ಮೊದಲು ಬ್ಯಾಟಿಂಗ್

|

Updated on: Mar 01, 2024 | 7:36 PM

WPL 2024: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂನಿ ನೇತೃತ್ವದ ಗುಜರಾತ್ ಜೈಂಟ್ಸ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಹೀಲಿ ನಾಯಕತ್ವದ ಯುಪಿ ವಾರಿಯರ್ಸ್ ವಿರುದ್ಧ ಸೆಣಸುತ್ತಿದೆ. ಈ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.

WPL 2024: ಟಾಸ್ ಗೆದ್ದ ಯುಪಿ ವಾರಿಯರ್ಸ್​; ಗುಜರಾತ್ ಮೊದಲು ಬ್ಯಾಟಿಂಗ್
ಯುಪಿ ವಾರಿಯರ್ಸ್​- ಗುಜರಾತ್ ಜೈಂಟ್ಸ್
Follow us on

ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) ಎರಡನೇ ಸೀಸನ್‌ನ ಎಂಟನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಇಬ್ಬರು ದಿಗ್ಗಜ ಆಟಗಾರ್ತಿಯರಾದ ಬೆತ್ ಮೂನಿ ಮತ್ತು ಅಲಿಸ್ಸಾ ಹೀಲಿ ಮುಖಾಮುಖಿಯಾಗಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂನಿ ನೇತೃತ್ವದ ಗುಜರಾತ್ ಜೈಂಟ್ಸ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಹೀಲಿ ನಾಯಕತ್ವದ ಯುಪಿ ವಾರಿಯರ್ಸ್ (UP Warriorz vs Gujarat Giants) ವಿರುದ್ಧ ಸೆಣಸುತ್ತಿದೆ. ಈ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಪ್ರಸ್ತುತ ಲೀಗ್​ನಲ್ಲಿ ಉಭಯ ತಂಡಗಳು ಸಿಹಿ ಕಹಿ ಅನುಭವ ಪಡೆದಿವೆ. ಲೀಗ್​ನ ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸೋತಿದ್ದ ಯುಪಿ ವಾರಿಯರ್ಸ್ ತಂಡ ತನ್ನ ಎರಡನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಜಯ ಸಾಧಿಸಿತ್ತು. ಇತ್ತ ಗುಜರಾತ್ ಜೈಂಟ್ಸ್ ಲೀಗ್​ನಲ್ಲಿ ತನ್ನ ಮೊದಲ ಗೆಲುವಿಗಾಗಿ ಇನ್ನು ಕಾಯುತ್ತಿದೆ.

ಮುಖಾಮುಖಿ ವರದಿ

ಮಹಿಳಾ ಪ್ರೀಮಿಯರ್ ಲೀಗ್‌ ಇತಿಹಾಸದಲ್ಲಿ ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ಎರಡು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಯುಪಿ ವಾರಿಯರ್ಸ್ ಎರಡೂ ಪಂದ್ಯಗಳನ್ನು ಗೆದ್ದಿದೆ. ಗುಜರಾತ್ ಜೈಂಟ್ಸ್ ಈ ಸೀಸನ್​ನ ಮೊದಲ ಗೆಲುವಿಗಾಗಿ ಮತ್ತು ಯುಪಿ ವಾರಿಯರ್ಸ್ ವಿರುದ್ಧದ ಮೊದಲ ಗೆಲುವಿಗಾಗಿ ಕಾಯುತ್ತಿದೆ. ಗುಜರಾತ್ ಜೈಂಟ್ಸ್ ಈ ಲೀಗ್‌ನಲ್ಲಿ ಉಳಿಯ ಬೇಕೆಂದರೆ, ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲುವುದು ಅವರಿಗೆ ಅಗತ್ಯವಾಗಿದೆ. ಇಂದಿನ ಪಂದ್ಯದಲ್ಲಿ, ನಾಯಕಿ ಬೆತ್ ಮೂನಿ ಅವರು ಬ್ಯಾಟ್‌ನೊಂದಿಗೆ ನಾಯಕತ್ವದ ಇನ್ನಿಂಗ್ಸ್ ಅನ್ನು ಆಡಬೇಕಾಗುತ್ತದೆ. ಈ ಮೂಲಕ ಅವರು ತಮ್ಮ ತಂಡಕ್ಕೆ ಈ ಸೀಸನ್​ನ ಮೊದಲ ಜಯವನ್ನು ನೀಡಬೇಕಾಗಿದೆ.

WPL 2024: ಆರ್​ಸಿಬಿ ಕ್ವೀನ್ ಶ್ರೇಯಾಂಕ ಪಾಟೀಲ್​ಗೆ ಬಂತು ಮದುವೆ ಪ್ರಪೋಸಲ್

ಉಭಯ ತಂಡಗಳು

ಗುಜರಾತ್ ಜೈಂಟ್ಸ್: ಹರ್ಲೀನ್ ಡಿಯೋಲ್, ಬೆತ್ ಮೂನಿ (ನಾಯಕಿ/ವಿಕೆಟ್ ಕೀಪರ್), ಫೋಬೆ ಲಿಚ್‌ಫೀಲ್ಡ್, ಲಾರಾ ವೋಲ್ವರ್ಡ್, ಆಶ್ಲೇ ಗಾರ್ಡ್ನರ್, ದಯಾಲನ್ ಹೇಮಲತಾ, ಕ್ಯಾಥರೀನ್ ಬ್ರೈಸ್, ಸ್ನೇಹ ರಾಣಾ, ತನುಜಾ ಕನ್ವರ್, ಮನ್ನತ್ ಕಶ್ಯಪ್, ಮೇಘನಾ ಸಿಂಗ್.

ಯುಪಿ ವಾರಿಯರ್ಸ್: ಅಲಿಸಾ ಹೀಲಿ (ವಿಕೆಟ್ ಕೀಪರ್/ನಾಯಕಿ), ಕಿರಣ್ ನವಗಿರೆ, ಚಾಮರಿ ಅಥಾಪತು, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಸೈಮಾ ಠಾಕೋರ್, ಶ್ವೇತಾ ಸೆಹ್ರಾವತ್, ಪೂನಂ ಖೇಮ್ನಾರ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಕ್ವಾಡ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:21 pm, Fri, 1 March 24