AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾ. 8 ರಿಂದ 90 ಎಸೆತಗಳ ಲೀಗ್ ಆರಂಭ; ಯುವಿ, ರೈನಾ, ಗೇಲ್ ಸೇರಿದಂತೆ ಸೂಪರ್ ಸ್ಟಾರ್ಸ್​ಗಳ ಸಮಾಗಮ..!

Legends Cricket Trophy 2024: ಎರಡನೇ ಆವೃತ್ತಿಯ ಲೆಜೆಂಡ್ಸ್ ಕ್ರಿಕೆಟ್ ಟೂರ್ನಮೆಂಟ್ ಶ್ರೀಲಂಕಾದಲ್ಲಿ ನಡೆಯಲಿದೆ. ಮಾರ್ಚ್ 8 ರಿಂದ ಟೂರ್ನಿ ಆರಂಭವಾಗಲಿದೆ. ಈ ಲೀಗ್‌ನ ಅಂತಿಮ ಪಂದ್ಯ ಮಾರ್ಚ್ 19 ರಂದು ನಡೆಯಲಿದೆ.

ಮಾ. 8 ರಿಂದ 90 ಎಸೆತಗಳ ಲೀಗ್ ಆರಂಭ; ಯುವಿ, ರೈನಾ, ಗೇಲ್ ಸೇರಿದಂತೆ ಸೂಪರ್ ಸ್ಟಾರ್ಸ್​ಗಳ ಸಮಾಗಮ..!
ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ
ಪೃಥ್ವಿಶಂಕರ
|

Updated on:Mar 01, 2024 | 4:06 PM

Share

ಮಾರ್ಚ್ 22 ರಿಂದ ಆರಂಭವಾಗಲಿರುವ ಐಪಿಎಲ್​ಗಾಗಿ (IPL 2024) ಇಡೀ ಕ್ರಿಕೆಟ್ ಲೋಕವೇ ಕಾದು ಕುಳಿತಿದೆ. ಅತ್ಯಂತ ಶ್ರೀಮಂತ ಲೀಗ್​ಗಳಲ್ಲಿ ಒಂದಾಗಿರುವ ಐಪಿಎಲ್​ನಲ್ಲಿ ಬೌಂಡರಿ ಸಿಕ್ಸರ್​ಗಳ ಸುರಿಮಳೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಈ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಇದ್ದು, ಐಪಿಎಲ್‌ಗೂ ಮುನ್ನವೇ ಅಭಿಮಾನಿಗಳು ಲೆಜೆಂಡ್​ಗಳ ಕ್ರಿಕೆಟ್​ ಲೀಗ್ (Legends Cricket Trophy 2024) ಅನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಅಂದರೆ ಐಪಿಎಲ್‌ನಂತೆಯೇ ಮತ್ತೊಂದು ಲೀಗ್‌ ಘೋಷಣೆಯಾಗಿದ್ದು, ಈ ಲೀಗ್​ನಲ್ಲಿ ಮಾಜಿ ಕ್ರಿಕೆಟಿಗರು ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಈ ಲೀಗ್ ಕೇವಲ 90 ಎಸೆತಗಳ ಅಂದರೆ 15 ಓವರ್​ಗಳದ್ದಾಗಿದೆ. ಈ 90 ಎಸೆತಗಳ ಲೀಗ್‌ನಲ್ಲಿ ಭಾರತ ಮತ್ತು ಇತರ ಹಲವು ದೇಶಗಳ ಶ್ರೇಷ್ಠ ಆಟಗಾರರು ಆಡುವುದನ್ನು ಕಾಣಬಹುದು. ಈ ಲೀಗ್ ಬಗ್ಗೆ ಹೆಚ್ಚಿನ ವಿವರ ಈ ಕೆಳಗಿನಂತಿದೆ

ಕೇವಲ 15 ಓವರ್‌ಗಳ ಪಂದ್ಯ

ವಾಸ್ತವವಾಗಿ ಐಪಿಎಲ್ ಬಗ್ಗೆ ಅಭಿಮಾನಿಗಳಲ್ಲಿರುವ ಕ್ರೇಜ್ ಅನ್ನು ಗಮನದಲ್ಲಿಟ್ಟುಕೊಂಡು ಪ್ರಪಂಚದಾದ್ಯಂತ ಹತ್ತಾರು ಲೀಗ್‌ಗಳನ್ನು ಪ್ರಾರಂಭಿಸಲಾಗಿದೆ . ಇದಕ್ಕೂ ಮೊದಲು, ಇಂಗ್ಲೆಂಡ್‌ನಲ್ಲಿ ಹಂಡ್ರೆಡ್ ಲೀಗ್ ಪ್ರಾರಂಭವಾಯಿತು, ಇದರಲ್ಲಿ ತಂಡವು ತನ್ನ ಇನ್ನಿಂಗ್ಸ್‌ನಲ್ಲಿ ಕೇವಲ 100 ಎಸೆತಗಳನ್ನು ಮಾತ್ರ ಆಡುತ್ತಿತ್ತು. ಈಗ ಅದಕ್ಕಿಂತ ಕಡಿಮೆ 90 ಎಸೆತಗಳ ಲೀಗ್ ನಡೆಯಲಿದೆ. ತಲಾ 15 ಓವರ್‌ಗಳ ಈ ಲೀಗ್ ಅತ್ಯಂತ ರೋಚಕವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವೆಂದರೆ ಈ ಲೀಗ್‌ನಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ಮಾಜಿ ಅನುಭವಿ ಆಟಗಾರರು ಆಡಲಿದ್ದಾರೆ.

ಲೀಗ್​ನ ಪೂರ್ಣ ವಿವರ ಇಲ್ಲಿದೆ

ಈ ಕ್ರಿಕೆಟ್ ಲೀಗ್‌ನ ಹೆಸರು ಲೆಜೆಂಡ್ಸ್ ಕ್ರಿಕೆಟ್ ಟೂರ್ನಮೆಂಟ್, ಇದು ಶ್ರೀಲಂಕಾದಲ್ಲಿ ನಡೆಯಲಿದೆ. ಮಾರ್ಚ್ 8 ರಿಂದ ಟೂರ್ನಿ ಆರಂಭವಾಗಲಿದೆ. ಈ ಲೀಗ್‌ನ ಅಂತಿಮ ಪಂದ್ಯ ಮಾರ್ಚ್ 19 ರಂದು ನಡೆಯಲಿದೆ. ಪ್ರತಿ ತಂಡದಿಂದ ಯಾವುದೇ ಒಬ್ಬ ಬೌಲರ್ ಗರಿಷ್ಠ 3 ಓವರ್ ಬೌಲ್ ಮಾಡಲು ಸಾಧ್ಯವಾಗುತ್ತದೆ. ಭಾರತದ ಆಲ್‌ರೌಂಡರ್ ಯುವರಾಜ್ ಸಿಂಗ್, ಸ್ಫೋಟಕ ಬ್ಯಾಟ್ಸ್‌ಮನ್ ಸುರೇಶ್ ರೈನಾ, ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಮತ್ತು ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಕ್ರಿಸ್ ಗೇಲ್ ಅವರಲ್ಲದೆ, ಅನೇಕ ಬಲಿಷ್ಠ ಬ್ಯಾಟ್ಸ್‌ಮನ್‌ಗಳು ಈ ಟೂರ್ನಿಯಲ್ಲಿ ಆಡಲಿದ್ದಾರೆ.

ಪಂದ್ಯಾವಳಿಯಲ್ಲಿ 7 ತಂಡಗಳು

ಈ ಲೀಗ್‌ನಲ್ಲಿ ದುಬೈ ಜೈಂಟ್ಸ್, ರಾಜಸ್ಥಾನ್ ಕಿಂಗ್ಸ್, ಡೆಲ್ಲಿ ಡೆವಿಲ್ಸ್, ಕ್ಯಾಂಡಿ ಸ್ಯಾಂಪ್ ಆರ್ಮಿ, ಪಂಜಾಬ್ ರಾಯಲ್ಸ್, ಎನ್‌ವೈ ಸೂಪರ್‌ಸ್ಟಾರ್ಸ್ ಸ್ಟ್ರೈಕರ್ಸ್ ಮತ್ತು ಕೊಲಂಬೊ ಲಯನ್ಸ್ ಸೇರಿದಂತೆ ಒಟ್ಟು 7 ತಂಡಗಳು ಭಾಗವಹಿಸಲಿವೆ. ಮಾರ್ಚ್ 8ರಿಂದ ಆರಂಭವಾಗಿ ಮಾರ್ಚ್ 19ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಇದು ಶ್ರೀಲಂಕಾದಲ್ಲಿ ನಡೆಯಲಿರುವ ಲೀಗ್‌ನ ಎರಡನೇ ಸೀಸನ್ ಆಗಿದೆ. 2023 ರಲ್ಲಿ ನಡೆದ ಲೀಗ್​ನ ಮೊದಲ ಸೀಸನ್ ಭಾರತದಲ್ಲಿ ನಡೆದಿತ್ತು. ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Fri, 1 March 24

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ
ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ