AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2026: 8 ವಿಕೆಟ್​ಗಳಿಂದ ಗೆದ್ದು ನೇರವಾಗಿ ಫೈನಲ್​ಗೆ ಎಂಟ್ರಿಕೊಟ್ಟ ಆರ್​ಸಿಬಿ

RCB Dominates UPW in WPL 2026 Match 18: ಮಹಿಳಾ ಪ್ರೀಮಿಯರ್ ಲೀಗ್ 2026 ರ 18ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್​ಸಿಬಿ ಏಕಪಕ್ಷೀಯ ಗೆಲುವು ಸಾಧಿಸಿ ನೇರವಾಗಿ ಫೈನಲ್ ಪ್ರವೇಶಿಸಿದೆ. ಯುಪಿ ವಾರಿಯರ್ಸ್ ತಂಡ ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡವಾಗಿದೆ. ಯುಪಿ ತಂಡ 143 ರನ್ ಗಳಿಸಿದ್ದು, ಆರ್​ಸಿಬಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.

WPL 2026: 8 ವಿಕೆಟ್​ಗಳಿಂದ ಗೆದ್ದು ನೇರವಾಗಿ ಫೈನಲ್​ಗೆ ಎಂಟ್ರಿಕೊಟ್ಟ ಆರ್​ಸಿಬಿ
Rcb
ಪೃಥ್ವಿಶಂಕರ
|

Updated on:Jan 29, 2026 | 10:49 PM

Share

ಮಹಿಳಾ ಪ್ರೀಮಿಯರ್ ಲೀಗ್ (WPL 2026) 2026 ರ 18 ನೇ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ( RCB vs UP Warriors) ನಡುವೆ ನಡೆಯಿತು. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್​ಸಿಬಿ ತಂಡ ಏಕಪಕ್ಷೀಯ ಗೆಲುವು ದಾಖಲಿಸಿ ನೇರವಾಗಿ ಫೈನಲ್​ಗೆ ಟಿಕೆಟ್ ಪಡೆದುಕೊಂಡಿದೆ. ಇತ್ತ ಆರ್​ಸಿಬಿ ವಿರುದ್ಧ ಸೋತ ಯುಪಿ ವಾರಿಯರ್ಸ್​ ಮೊದಲ ತಂಡವಾಗಿ ಅಧಿಕೃತವಾಗಿ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ. ಯುಪಿ ತಂಡ ಪ್ಲೇಆಫ್‌ ರೇಸ್​ನಲ್ಲಿ ಜೀವಂತವಾಗಿರಬೇಕೆಂದರೆ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಆದರೆ ಅದು ಆಗಲಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ ವಾರಿಯರ್ಸ್‌ ಕೇವಲ 143 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಕೈಕೊಟ್ಟ ಯುಪಿ ಬ್ಯಾಟಿಂಗ್ ವಿಭಾಗ

ಈ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ, ಯುಪಿ ವಾರಿಯರ್ಸ್ ತಂಡವನ್ನು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 143 ರನ್‌ಗಳಿಗೆ ಕಟ್ಟಿಹಾಕಿತು. ಯುಪಿ ವಾರಿಯರ್ಸ್‌ ತಂಡದ ಪರ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ದೀಪ್ತಿ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಆದಾಗ್ಯೂ, ಇತರ ಯಾವುದೇ ಬ್ಯಾಟರ್​ಗೆ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ. ಮೇಗ್ ಲ್ಯಾನಿಂಗ್ 41 ರನ್ ಗಳಿಸಿದರೆ, ದೀಪ್ತಿ ಶರ್ಮಾ 55 ರನ್ ಗಳಿಸಿದರು. ಆದಾಗ್ಯೂ, ಇತರ ಯಾವುದೇ ಬ್ಯಾಟರ್​ಗೆ 15 ರನ್ ಗಡಿ ದಾಟಲು ಸಾಧ್ಯವಾಗಲಿಲ್ಲ.

ಹ್ಯಾರಿಸ್, ಸ್ಮೃತಿ ಶತಕದ ಜೊತೆಯಾಟ

ಇತ್ತ ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಕೂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 37 ಎಸೆತಗಳಲ್ಲಿ 13 ಬೌಂಡರಿ ಮತ್ತು ಎರಡು ಸಿಕ್ಸರ್‌ ಸಹಿತ 75 ರನ್ ಬಾರಿಸಿದರೆ, ನಾಯಕಿ ಸ್ಮೃತಿ ಮಂಧಾನ ಕೂಡ ಅಜೇಯ ಅರ್ಧಶತಕ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 108 ರನ್‌ಗಳ ಜೊತೆಯಾಟವನ್ನಾಡಿತು. ಗ್ರೇಸ್ ಹ್ಯಾರಿಸ್ ಔಟಾದ ನಂತರ, ಸ್ಮೃತಿ ಮಂಧಾನ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅಂತಿಮವಾಗಿ ಆರ್‌ಸಿಬಿ 13.1 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ಗಳ ನಷ್ಟಕ್ಕೆ ಗುರಿನ್ನು ತಲುಪಿತು.

WPL 2026: ಆರ್​ಸಿಬಿ ಪಂದ್ಯ ಸೋತರೂ ಎಲ್ಲರ ಹೃದಯ ಗೆದ್ದ ರಿಚಾ ಘೋಷ್

ರೋಚಕತೆ ಸೃಷ್ಟಿಸಿದ ಪ್ಲೇಆಫ್ ರೇಸ್

ಮಹಿಳಾ ಪ್ರೀಮಿಯರ್ ಲೀಗ್‌ನ ಪ್ಲೇಆಫ್ ಹಂತಕ್ಕೆ ಒಟ್ಟು ಮೂರು ತಂಡಗಳು ಅರ್ಹತೆ ಪಡೆಯಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಇದೀಗ ಎರಡು ಸ್ಥಾನ ಮಾತ್ರ ಬಾಕಿ ಉಳಿದಿವೆ. ಲೀಗ್ ಹಂತದಲ್ಲಿ ಕೇವಲ ಎರಡು ಪಂದ್ಯಗಳು ಉಳಿದಿದ್ದು, ಈ ಎರಡು ಪಂದ್ಯಗಳು ಉಳಿದ ತಂಡಗಳ ಭವಿಷ್ಯವನ್ನು ನಿರ್ಧರಿಸುತ್ತವೆ. ಮೊದಲ ಪಂದ್ಯ ಗುಜರಾತ್ ಮತ್ತು ಮುಂಬೈ ನಡುವೆ ನಡೆಯಲಿದ್ದು, ವಿಜೇತ ತಂಡ ಪ್ಲೇಆಫ್‌ಗೆ ಮುನ್ನಡೆಯುತ್ತದೆ. ಸೋತ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ನಡುವಿನ ಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:30 pm, Thu, 29 January 26

Follow Us
ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು
ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು
ಚಾಕೋಲೇಟ್ ಕೊಳ್ಳಲು ಅಂಗಡಿಗೆ ಬಂದ, ಚಿನ್ನದ ಸರ ಎಳೆದುಕೊಂಡು ಓಡಿದ!
ಚಾಕೋಲೇಟ್ ಕೊಳ್ಳಲು ಅಂಗಡಿಗೆ ಬಂದ, ಚಿನ್ನದ ಸರ ಎಳೆದುಕೊಂಡು ಓಡಿದ!
‘ನಾನು ಸ್ಟಾರ್ ಅಲ್ಲ, ಕಲಾವಿದೆ; ಕಲಾವಿದರಿಗೆ ಸಾವಿಲ್ಲ’: ಶ್ರುತಿ ಹರಿಹರನ್
‘ನಾನು ಸ್ಟಾರ್ ಅಲ್ಲ, ಕಲಾವಿದೆ; ಕಲಾವಿದರಿಗೆ ಸಾವಿಲ್ಲ’: ಶ್ರುತಿ ಹರಿಹರನ್
ದಲಿತ ಎನ್ನೋ ಕಾರಣಕ್ಕೆ ಎಳೆದಾಡಿ ಸ್ವಾಮೀಜಿ ಮೇಲೆ ಹಲ್ಲೆ
ದಲಿತ ಎನ್ನೋ ಕಾರಣಕ್ಕೆ ಎಳೆದಾಡಿ ಸ್ವಾಮೀಜಿ ಮೇಲೆ ಹಲ್ಲೆ
ಉಡುಪಿಯಲ್ಲೊಂದು ಅಪರೂಪದ ಘಟನೆ: ಗ್ಯಾಸ್ OTP ವ್ಯಕ್ತಿ ಜೀವ ಉಳಿಸಿದ್ಹೇಗೆ?
ಉಡುಪಿಯಲ್ಲೊಂದು ಅಪರೂಪದ ಘಟನೆ: ಗ್ಯಾಸ್ OTP ವ್ಯಕ್ತಿ ಜೀವ ಉಳಿಸಿದ್ಹೇಗೆ?
ದಾವಣಗೆರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಹ್ಲಾದ ಜೋಶಿ ಮಹತ್ವದ ಕರೆ
ದಾವಣಗೆರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಹ್ಲಾದ ಜೋಶಿ ಮಹತ್ವದ ಕರೆ
ಬೆಂಕಿ ಬೌಲಿಂಗ್: ಒಂದೇ ಒಂದು ಬೌಂಡರಿ ಹೊಡೆಸಿಕೊಳ್ಳದ ಶಮಿ!
ಬೆಂಕಿ ಬೌಲಿಂಗ್: ಒಂದೇ ಒಂದು ಬೌಂಡರಿ ಹೊಡೆಸಿಕೊಳ್ಳದ ಶಮಿ!
ನೆಲವೇ ಹಾಸಿಗೆ, ಕಟ್ಟೆಯೇ ತಲೆದಿಂಬು; ಪ್ರಭುದೇವ ಎಷ್ಟು ಸಿಂಪಲ್ ನೋಡಿ 
ನೆಲವೇ ಹಾಸಿಗೆ, ಕಟ್ಟೆಯೇ ತಲೆದಿಂಬು; ಪ್ರಭುದೇವ ಎಷ್ಟು ಸಿಂಪಲ್ ನೋಡಿ 
ಕಾದು ಕುಳಿತು ರೈಲು ಬರುತ್ತಿದ್ದಂತೆ ಪ್ರಯಾಣಿಕನನ್ನು ತಳ್ಳಿದ ವ್ಯಕ್ತಿ
ಕಾದು ಕುಳಿತು ರೈಲು ಬರುತ್ತಿದ್ದಂತೆ ಪ್ರಯಾಣಿಕನನ್ನು ತಳ್ಳಿದ ವ್ಯಕ್ತಿ
ಬೈ ಎಲೆಕ್ಷನ್ ಅಖಾಡದಲ್ಲಿಂದು ಸಿಎಂ ಮತಬೇಟೆ!
ಬೈ ಎಲೆಕ್ಷನ್ ಅಖಾಡದಲ್ಲಿಂದು ಸಿಎಂ ಮತಬೇಟೆ!