
2026 ರ ಮಹಿಳಾ ಪ್ರೀಮಿಯರ್ ಲೀಗ್ನ 4ನೇ ಆವೃತ್ತಿಯ ಮೆಗಾ ಹರಾಜು (WPL 2026 Mega Auction) ನಾಳೆ ಅಂದರೆ ನವೆಂಬರ್ 27 ರಂದು ನವದೆಹಲಿಯಲ್ಲಿ ನಡೆಯಲಿದೆ. ಈ ಮೆಗಾ ಹರಾಜು ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿದೆ. ಈ ಹರಾಜಿನಲ್ಲಿ ಒಟ್ಟು 277 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಇವರಲ್ಲಿ 194 ಭಾರತೀಯ ಆಟಗಾರ್ತಿಯರು ಮತ್ತು 66 ವಿದೇಶಿ ಆಟಗಾರ್ತಿಯರು ಸೇರಿದ್ದಾರೆ. ಇದು ಮೆಗಾ ಹರಾಜು ಆಗಿರುವ ಕಾರಣ ಐದು ಫ್ರಾಂಚೈಸಿಗಳು ಒಟ್ಟು 16 ಆಟಗಾರರ್ತಿಯರನ್ನು ತಂಡದಲ್ಲಿ ಉಳಿಸಿಕೊಂಡಿವೆ. ಉಳಿದಂತೆ ಎಲ್ಲಾ ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿದ್ದು, ನಾಳೆ ನಡೆಯಲಿರುವ ಹರಾಜಿನಲ್ಲಿ ತಮಗೆ ಬೇಕಾಗಿರುವ ಆಟಗಾರ್ತಿಯರನ್ನು ಖರೀದಿಸುವ ಮೂಲಕ ತಂಡವನ್ನು ಬಲಿಷ್ಠಗೊಳಿಸಲು ನೋಡಲಿವೆ.
ಮಹಿಳಾ ಪ್ರೀಮಿಯರ್ ಲೀಗ್ 2026 ರ ಹರಾಜು ನವೆಂಬರ್ 27 ರ ಗುರುವಾರ ಮಧ್ಯಾಹ್ನ 3.30 ರಿಂದ ನವದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ನಡೆಯಲಿದೆ.
ಮಹಿಳಾ ಪ್ರೀಮಿಯರ್ ಲೀಗ್ನ ಮೆಗಾ ಹರಾಜನ್ನು JioHotstar ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ . ಈವೆಂಟ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಈವೆಂಟ್ ವರದಿ ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗುತ್ತದೆ, ಆದರೆ ಹರಾಜು ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗುತ್ತದೆ.
ಮುಂಬೈ ಇಂಡಿಯನ್ಸ್: ನ್ಯಾಟ್ ಸಿವರ್-ಬ್ರಂಟ್ (3.5 ಕೋಟಿ ರೂ.), ಹರ್ಮನ್ಪ್ರೀತ್ ಕೌರ್ (2.5 ಕೋಟಿ ರೂ.), ಹೇಲಿ ಮ್ಯಾಥ್ಯೂಸ್ (1.75 ಕೋಟಿ ರೂ.), ಅಮನ್ಜೋತ್ ಕೌರ್ (1 ಕೋಟಿ ರೂ.), ಜಿ. ಕಮಲಿನಿ (50 ಲಕ್ಷ ರೂ.)
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (3.5 ಕೋಟಿ ರೂ.), ರಿಚಾ ಘೋಷ್ (2.75 ಕೋಟಿ ರೂ.), ಎಲ್ಲಿಸ್ ಪೆರ್ರಿ (2 ಕೋಟಿ ರೂ.), ಶ್ರೇಯಾಂಕ ಪಾಟೀಲ್ (60 ಲಕ್ಷ ರೂ.)
ಗುಜರಾತ್ ಜೈಂಟ್ಸ್: ಆಶ್ಲೀ ಗಾರ್ಡ್ನರ್ (3.5 ಕೋಟಿ ರೂ.), ಬೆತ್ ಮೂನಿ (2.5 ಕೋಟಿ ರೂ.)
ಯುಪಿ ವಾರಿಯರ್ಸ್: ಶ್ವೇತಾ ಸೆಹ್ರಾವತ್ (50 ಲಕ್ಷ)
ಡೆಲ್ಲಿ ಕ್ಯಾಪಿಟಲ್ಸ್: ಜೆಮಿಮಾ ರೊಡ್ರಿಗಸ್ ( 2.2 ಕೋಟಿ), ಶಫಾಲಿ ವರ್ಮಾ ( 2.2 ಕೋಟಿ), ಅನ್ನಾಬೆಲ್ ಸದರ್ಲ್ಯಾಂಡ್ ( 2.2 ಕೋಟಿ), ಮರಿಜಾನ್ನೆ ಕಾಪ್ (2.2 ಕೋಟಿ), ನಿಕಿ ಪ್ರಸಾದ್ ( 50 ಲಕ್ಷ).
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ