WPL 2026: ವಡೋದರಾದಲ್ಲಿ ಟಾಸ್ ಸೋತ ಆರ್ಸಿಬಿ; ಪ್ಲೇಯಿಂಗ್ 11 ಹೀಗಿದೆ
WPL 2026 RCB vs Gujarat Giants: ಮಹಿಳಾ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯ 2ನೇ ಹಂತ ಇಂದಿನಿಂದ ವಡೋದರಾದಲ್ಲಿ ಆರಂಭಗೊಂಡಿದೆ. ಅಜೇಯವಾಗಿ ಉಳಿದಿರುವ ಆರ್ಸಿಬಿ, ತಮ್ಮ 5ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಸೆಣಸುತ್ತಿದೆ. ಗುಜರಾತ್ ತಂಡದಲ್ಲಿ ಮಾಜಿ ಆರ್ಸಿಬಿ ಆಟಗಾರ್ತಿಯರಿದ್ದು, ಇದು ಪಂದ್ಯಕ್ಕೆ ಮತ್ತಷ್ಟು ರೋಚಕತೆ ನೀಡಿದೆ. ಆರ್ಸಿಬಿ ಗೆಲುವಿನ ಓಟ ಮುಂದುವರಿಸಲು, ಗುಜರಾತ್ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ದುಕೊಂಡಿದೆ. ಆರ್ಸಿಬಿ ಬದಲಾವಣೆಯಿಲ್ಲದೆ ಕಣಕ್ಕಿಳಿದಿದೆ.

ಮಹಿಳಾ ಪ್ರೀಮಿಯರ್ ಲೀಗ್ನ ( Women’s Premier League) 4ನೇ ಆವೃತ್ತಿಯ 2ನೇ ಹಂತ ಇಂದಿನಿಂದ ವಡೋದರಾದಲ್ಲಿ ಆರಂಭವಾಗುತ್ತಿದೆ. ಮೊದಲ ಹಂತದ 11 ಪಂದ್ಯಗಳು ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿದ್ದವು. ಈ ಮೈದಾನದಲ್ಲಿ 4 ಪಂದ್ಯಗಳನ್ನು ಆಡಿದ್ದ ಆರ್ಸಿಬಿ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಇದೀಗ ಐದನೇ ಪಂದ್ಯವನ್ನು ವಡೋದರಾದಲ್ಲಿ ಆಡುತ್ತಿದೆ. ಆರ್ಸಿಬಿಗೆ ಇಂದಿನ ಎದುರಾಳಿ ಬಲಿಷ್ಠ ಗುಜರಾತ್ ಜೈಂಟ್ಸ್ (RCB vs Gujarat Giants). ಈ ತಂಡದಲ್ಲಿ ಆರ್ಸಿಬಿಯ 4 ಮಾಜಿ ಆಟಗಾರ್ತಿಯರಿದ್ದು, ಇದೀಗ ಅವರ ವಿರುದ್ಧ ಆರ್ಸಿಬಿ ತಂಡ ಸೆಣಸಬೇಕಿದೆ. ಆರ್ಸಿಬಿ ಇದುವರೆಗೆ ಈ ಆವೃತ್ತಿಯಲ್ಲಿ ಅಜೇಯ ತಂಡವಾಗಿ ಉಳಿದಿದ್ದು, ಇದೀಗ ತನ್ನ ಐದನೇ ಪಂದ್ಯವನ್ನು ಗೆದ್ದು ತನ್ನ ಗೆಲುವಿನ ಓಟವನ್ನು ಮುಂದುವರೆಸುವ ಇರಾದೆಯಲ್ಲಿದೆ. ಇತ್ತ ಗುಜರಾತ್ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.
ಟಾಸ್ ಗೆದ್ದ ಗುಜರಾತ್
ಮೇಲೆ ಹೇಳಿದಂತೆ ಈ ಆವೃತ್ತಿಯ 12ನೇ ಪಂದ್ಯ ವಡೋದರಾದಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಈ ಮೈದಾನದಲ್ಲೂ ಇಬ್ಬನಿ ಪ್ರಮುಖ ಪಾತ್ರವಹಿಸುವುದರಿಂದ ಗುಜರಾತ್ ಈ ನಿರ್ಧಾರ ತೆಗೆದುಕೊಂಡಿದೆ. ಇತ್ತ ಟಾಸ್ ಸೋತಿರುವ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಬೇಕಿದೆ. ಇನ್ನು ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದ್ದು, ಆರ್ಸಿಬಿ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಅಂದರೆ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಈ ಪಂದ್ಯದಲ್ಲೂ ಆಡಲಿದೆ. ಇತ್ತ ಗುಜರಾತ್ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ.
🚨 Toss 🚨@Giant_Cricket won the toss and elected to field against @RCBTweets
Updates ▶️ https://t.co/KAjH515c64 #TATAWPL | #KhelEmotionKa | #GGvRCB pic.twitter.com/SVSXdsXeeg
— Women's Premier League (WPL) (@wplt20) January 19, 2026
ಉಭಯ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ಸ್ಮೃತಿ ಮಂಧಾನ (ನಾಯಕಿ), ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವೋಲ್, ರಿಚಾ ಘೋಷ್ (ವಿಕೆಟ್ ಕೀಪರ್), ಗೌತಮಿ ನಾಯ್ಕ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್,ಪ್ರೇಮಾ ರಾವತ್, ಶ್ರೇಯಾಂಕ ಪಾಟೀಲ್, ಸಯಾಲಿ ಸತ್ಘರೆ, ಲಾರೆನ್ ಬೆಲ್.
ಗುಜರಾತ್ ಜೈಂಟ್ಸ್ ಪ್ಲೇಯಿಂಗ್ XI: ಬೆತ್ ಮೂನಿ (ವಿಕೆಟ್ ಕೀಪರ್), ಸೋಫಿ ಡಿವೈನ್, ಅನುಷ್ಕಾ ಶರ್ಮಾ, ಆಶ್ಲೀಗ್ ಗಾರ್ಡ್ನರ್ (ನಾಯಕಿ), ಜಾರ್ಜಿಯಾ ವೇರ್ಹ್ಯಾಮ್, ಕನಿಕಾ ಅಹುಜಾ, ಭಾರತಿ ಫುಲ್ಮಾಲಿ, ಕಾಶ್ವೀ ಗೌತಮ್, ತನುಜಾ ಕನ್ವರ್, ಹ್ಯಾಪಿ ಕುಮಾರಿ, ರೇಣುಕಾ ಸಿಂಗ್ ಠಾಕೂರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:09 pm, Mon, 19 January 26
