AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2026: ಆರ್​ಸಿಬಿ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ; 7 ಎಸೆತಗಳಲ್ಲಿ 4 ವಿಕೆಟ್ ಪತನ

RCB vs DC WPL 2026: ನವಿ ಮುಂಬೈನಲ್ಲಿ ನಡೆದ ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ, ಡೆಲ್ಲಿ ತಂಡ ಟಾಸ್ ಸೋತು ಬ್ಯಾಟಿಂಗ್ ಮಾಡಿ ಭಾರಿ ಆರಂಭಿಕ ಆಘಾತ ಎದುರಿಸಿದೆ. ಕೇವಲ 2 ಓವರ್‌ಗಳಲ್ಲಿ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಲಾರೆನ್ ಬೆಲ್ ಮತ್ತು ಸಯಾಲಿ ಸತ್ಘರೆ ಅವರ ಮಾರಕ ದಾಳಿಗೆ ಲಿಜೆಲ್ಲೆ ಲೀ, ಲಾರಾ ವೊಲ್ವಾರ್ಡ್ಟ್, ಜೆಮಿಮಾ ರೋಡ್ರಿಗಸ್ ಮತ್ತು ಮರಿಝನ್ನೆ ಕಪ್ ಪೆವಿಲಿಯನ್ ಸೇರಿದರು.

WPL 2026: ಆರ್​ಸಿಬಿ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ; 7 ಎಸೆತಗಳಲ್ಲಿ 4 ವಿಕೆಟ್ ಪತನ
Rcb
ಪೃಥ್ವಿಶಂಕರ
|

Updated on:Jan 17, 2026 | 8:15 PM

Share

ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಡೆಲ್ಲಿ ತಂಡ ಮೊದಲ ಎರಡು ಓವರ್​ಗಳಲ್ಲೇ ಆಘಾತ ಎದುರಿಸಿದೆ. ಕೇವಲ 12 ಎಸೆತಗಳಲ್ಲಿ ಡೆಲ್ಲಿ ತಂಡದ ನಾಲ್ಕು ಪ್ರಮುಖ ವಿಕೆಟ್​ಗಳು ಪತನಗೊಂಡಿವೆ. ಅದರಲ್ಲೂ 7 ಎಸೆತಗಳಲ್ಲಿ ಡೆಲ್ಲಿ ತಂಡದ 4 ವಿಕೆಟ್​ಗಳು ಉದುರಿದ್ದು, ಆರ್​ಸಿಬಿಯ ಮಾರಕ ದಾಳಿಗೆ ಹಿಡಿದ ಕೈಗನ್ನಡಿಯಾಗಿತ್ತು.

ಮೊದಲ ಓವರ್​ನಲ್ಲಿ 2 ವಿಕೆಟ್

ಡೆಲ್ಲಿ ಪರ ಶಫಾಲಿ ವರ್ಮಾ ಮತ್ತು ಲಿಜೆಲ್ಲೆ ಲೀ ಆರಂಭಿಕರಾಗಿ ಕಣಕ್ಕಿಳಿದರು. ಲಿಜೆಲ್ಲೆ ಲೀ ತಾವು ಎದುರಿಸಿದ ಮೊದಲ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದರೆ, ನಂತರದ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಲಾರೆನ್ ಬೆಲ್ ಅವರ ಇನ್​ಸ್ವಿಂಗರ್ ಎಸೆತ ಲೀ ಅವರನ್ನು ಪೆವಿಲಿಯನ್‌ಗಟ್ಟಿತು. ನಂತರ ಬಂದ ಲಾರಾ ವೊಲ್ವಾರ್ಡ್ಟ್ ಕೂಡ ಅದೇ ಓವರ್​ನಲ್ಲಿ ಎರಡು ಎಸೆತಗಳನ್ನು ಎದುರಿಸಿ ಖಾತೆ ಕೂಡ ತೆರೆಯದೆ ವಿಕೆಟ್ ಒಪ್ಪಿಸಿದರು.

2ನೇ ಓವರ್​ನಲ್ಲಿ 2 ವಿಕೆಟ್

ಇನ್ನು ಎರಡನೇ ಓವರ್​ನಲ್ಲಿ ಆರ್​ಸಿಬಿ ಪರ ಸಯಾಲಿ ಸತ್ಘರೆ ಬೌಲಿಂಗ್ ಆರಂಭಿಸಿದರೆ, ಡೆಲ್ಲಿ ನಾಯಕಿ ಜೆಮಿಮಾ ರೋಡ್ರಿಗಸ್ ಸ್ಟ್ರೈಕ್​ನಲ್ಲಿದ್ದರು. ಜೆಮಿಮಾ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರೆ, ನಂತರದ ಎಸೆತದಲ್ಲಿ ಬೌಲ್ಡ್ ಆದರು. ಹೀಗಾಗಿ ಡೆಲ್ಲಿ ತಂಡ 10 ರನ್​ಗಳಿಗೆ ತನ್ನ 3 ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್​ಗೆ ಬಂದ ಅನುಭವಿ ಮರಿಝನ್ನೆ ಕಪ್ ಅವರ ಮೇಲೆ ಜವಾಬ್ದಾರಿ ಹೆಚ್ಚಿತ್ತು. ಆದರೆ ಮರಿಝನ್ನೆ ಕಪ್ ಕೂಡ ತಾವು ಎದುರಿಸಿದ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗುವ ಮೂಲಕ ಡೆಲ್ಲಿಗೆ 4ನೇ ಆಘಾತ ನೀಡಿದರು. ಹೀಗಾಗಿ ಡೆಲ್ಲಿ ತಂಡ 2 ಓವರ್​ಗಳ ಅಂತ್ಯಕ್ಕೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.

ಉಭಯ ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ಸ್ಮೃತಿ ಮಂಧಾನ (ನಾಯಕಿ), ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವೋಲ್ (ದಯಾಲನ್ ಹೇಮಲತಾ ಬದಲಿಗೆ), ರಿಚಾ ಘೋಷ್ (ವಿಕೆಟ್ ಕೀಪರ್), ಗೌತಮಿ ನಾಯ್ಕ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್,ಪ್ರೇಮಾ ರಾವತ್ (ಅರುಂಧತಿ ರೆಡ್ಡಿ ಬದಲಿಗೆ), ಶ್ರೇಯಾಂಕ ಪಾಟೀಲ್, ಸಯಾಲಿ ಸತ್ಘರೆ (ಲಿನ್ಸೆ ಸ್ಮಿತ್ ಬದಲಿಗೆ), ಲಾರೆನ್ ಬೆಲ್.

ದೆಹಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI: ಶಫಾಲಿ ವರ್ಮಾ, ಲಿಜೆಲ್ಲೆ ಲೀ (ವಿಕೆಟ್ ಕೀಪರ್), ಲಾರಾ ವೊಲ್ವಾರ್ಡ್ಟ್, ಜೆಮಿಮಾ ರೋಡ್ರಿಗಸ್ (ನಾಯಕಿ), ಮರಿಝನ್ನೆ ಕಪ್, ಸ್ನೇಹ ರಾಣಾ, ನಿಕಿ ಪ್ರಸಾದ್, ಮಿನ್ನು ಮಣಿ, ಶ್ರೀ ಚರಣಿ, ನಂದಿನಿ ಶರ್ಮಾ, ಲೂಸಿ ಹ್ಯಾಮಿಲ್ಟನ್ (ಚಿನೆಲ್ ಹೆನ್ರಿ ಬದಲಿಗೆ).

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:14 pm, Sat, 17 January 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ನಿಮ್ಮ ರಾಶಿಗನುಗುಣವಾಗಿ ಜೂನ್ 1 ರಿಂದ 7ರ ವರೆಗಿನ ವಾರ ಭವಿಷ್ಯ ತಿಳಿಯಿರಿ
ನಿಮ್ಮ ರಾಶಿಗನುಗುಣವಾಗಿ ಜೂನ್ 1 ರಿಂದ 7ರ ವರೆಗಿನ ವಾರ ಭವಿಷ್ಯ ತಿಳಿಯಿರಿ
ವರುಣಾರ್ಭಟಕ್ಕೆ ಮನೆಗಳಿಗೆ ನುಗ್ಗಿದ ನೀರು: ದವಸ ಧಾನ್ಯಗಳು ಜಲಾಹುತಿ
ವರುಣಾರ್ಭಟಕ್ಕೆ ಮನೆಗಳಿಗೆ ನುಗ್ಗಿದ ನೀರು: ದವಸ ಧಾನ್ಯಗಳು ಜಲಾಹುತಿ
ಸಾವಿನ ಕೊನೆ ಗಳಿಗೆಯಲ್ಲಿ ಬಾಯಿಗೆ ಗಂಗಾಜಲ ಯಾಕೆ ಬಿಡ್ತಾರೆ ಗೊತ್ತಾ?
ಸಾವಿನ ಕೊನೆ ಗಳಿಗೆಯಲ್ಲಿ ಬಾಯಿಗೆ ಗಂಗಾಜಲ ಯಾಕೆ ಬಿಡ್ತಾರೆ ಗೊತ್ತಾ?
ಇಂದು ಈ ರಾಶಿಯವರಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ
ಇಂದು ಈ ರಾಶಿಯವರಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ
ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ
ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ
ಪ್ರಮಾಣವಚನಕ್ಕೂ ಮುನ್ನವೇ ಡಿಕೆಶಿ​​​ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ
ಪ್ರಮಾಣವಚನಕ್ಕೂ ಮುನ್ನವೇ ಡಿಕೆಶಿ​​​ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ