WPL 2026: ಮುಂಬೈ ವಿರುದ್ಧ ಟಾಸ್ ಗೆದ್ದು ಅಚ್ಚರಿಯ ನಿರ್ಧಾರ ತೆಗೆದುಕೊಂಡ ಗುಜರಾತ್
WPL 2026: ಮಹಿಳಾ ಪ್ರೀಮಿಯರ್ ಲೀಗ್‌ನ 19ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಎಲಿಮಿನೇಟರ್ ಸ್ಥಾನಕ್ಕಾಗಿ ಕಾದಾಡುತ್ತಿವೆ. ಗುಜರಾತ್ ಗೆದ್ದರೆ ಸ್ಥಾನ ಭದ್ರ, ಮುಂಬೈಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಟಾಸ್ ಗೆದ್ದ ಗುಜರಾತ್ ನಾಯಕಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಎರಡೂ ತಂಡಗಳು ಪ್ಲೇಆಫ್ ಪ್ರವೇಶಿಸಲು ಪ್ರಬಲ ಪ್ರದರ್ಶನ ನೀಡಲು ಸಜ್ಜಾಗಿವೆ.

ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) 19 ನೇ ಲೀಗ್ ಪಂದ್ಯವು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ (MI vs GG) ನಡುವೆ ವಡೋದರಾದ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಗುಜರಾತ್ ತಂಡ ಗೆದ್ದರೆ, ಅದು ಎಲಿಮಿನೇಟರ್ ಪಂದ್ಯದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ. ಇತ್ತ ಮುಂಬೈ ಇಂಡಿಯನ್ಸ್‌ಗೂ ಸಹ, ಈ ಪಂದ್ಯವು ಮಾಡು ಇಲ್ಲವೇ ಮಡಿ ಪರಿಸ್ಥಿತಿಯಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಮುಂಬೈ ಸೋಲನ್ನು ಎದುರಿಸಿದರೆ, ಟೂರ್ನಮೆಂಟ್‌ನಲ್ಲಿ ಅವರ ಪ್ರಯಾಣವು ಲೀಗ್ ಹಂತದಲ್ಲಿ ಕೊನೆಗೊಳ್ಳಬಹುದು.
ಟಾಸ್ ಗೆದ್ದ ಗುಜರಾತ್
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ನಾಯಕಿ ಆಶ್ಲೇ ಗಾರ್ಡ್ನರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಆವೃತ್ತಿಯಲ್ಲಿ ಟಾಸ್ ಗೆದ್ದ ನಾಯಕಿಯೊಬ್ಬರು ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವುದು ಇದೇ ಮೊದಲು. ಹೀಗಾಗಿ ವಿಭಿನ್ನ ನಿರ್ಧಾರ ತೆಗೆದುಕೊಂಡಿರುವ ಗುಜರಾತ್ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಟಾಸ್ ಜೊತೆಗೆ ಎರಡೂ ತಂಡಗಳ ಆಡುವ ಹನ್ನೊಂದರ ಬಳಗ ಹೊರಬಿದಿದ್ದು, ಎರಡೂ ತಂಡಗಳಲ್ಲೂ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
ಉಭಯ ತಂಡಗಳ ಪ್ರದರ್ಶನ
ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತನ್ನ ಆರಂಭಿಕ ಪಂದ್ಯದಲ್ಲಿ ಸೋತ ನಂತರ ಸತತ ಎರಡು ಗೆಲುವುಗಳೊಂದಿಗೆ ಗಮನಾರ್ಹ ಪುನರಾಗಮನ ಮಾಡಿದರು. ಇದರ ನಂತರ, ಮುಂದಿನ ಮೂರು ಪಂದ್ಯಗಳಲ್ಲಿ ಸತತ ಸೋಲುಗಳನ್ನು ಅನುಭವಿಸಿತು. ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ಮಹಿಳಾ ತಂಡವನ್ನು 15 ರನ್‌ಗಳಿಂದ ಸೋಲಿಸಿದ ಮುಂಬೈ ಎಲಿಮಿನೇಟರ್‌ನಲ್ಲಿ ತನ್ನ ಸ್ಥಾನ ಪಡೆಯುವ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಇತ್ತ ಆಶ್ಲೇ ಗಾರ್ಡ್ನರ್ ನಾಯಕತ್ವದಲ್ಲಿ, ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಸೀಸನ್‌ನಲ್ಲಿ ಆಡುತ್ತಿರುವ ಗುಜರಾತ್ ಜೈಂಟ್ಸ್, ಇಲ್ಲಿಯವರೆಗೆ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆಡಿರುವ ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಮೂರರಲ್ಲಿ ಮಾತ್ರ ಸೋತಿದೆ. ಈ ಪಂದ್ಯದಲ್ಲಿ ಗೆಲುವು ಎಲಿಮಿನೇಟರ್‌ನಲ್ಲಿ ಗುಜರಾತ್ ಜೈಂಟ್ಸ್‌ನ ಸ್ಥಾನವನ್ನು ಖಚಿತಪಡಿಸುತ್ತದೆ.
🚨 Toss 🚨@Giant_Cricket have won the toss against @mipaltan and elected to bat first.
Updates ▶️ https://t.co/0ABkT4LpSk#TATAWPL | #KhelEmotionKa | #GGvMI pic.twitter.com/h61peQWJSB
— Women's Premier League (WPL) (@wplt20) January 30, 2026
ಉಭಯ ತಂಡಗಳು
ಗುಜರಾತ್ ಜೈಂಟ್ಸ್: ಬೆತ್ ಮೂನಿ (ವಿಕೆಟ್ ಕೀಪರ್), ಸೋಫಿ ಡಿವೈನ್, ಅನುಷ್ಕಾ ಶರ್ಮಾ, ಆಶ್ಲೀಗ್ ಗಾರ್ಡನರ್ (ನಾಯಕಿ), ಜಾರ್ಜಿಯಾ ವಾರೆಹಮ್, ಭಾರ್ತಿ ಫುಲ್ಮಾಲಿ, ಕನಿಕಾ ಅಹುಜಾ, ಕಶ್ವಿ ಗೌತಮ್, ತನುಜಾ ಕನ್ವರ್, ರೇಣುಕಾ ಸಿಂಗ್ ಠಾಕೂರ್, ರಾಜೇಶ್ವರಿ ಗಾಯಕ್ವಾಡ್.
ಮುಂಬೈ ಇಂಡಿಯನ್ಸ್: ಹೇಲಿ ಮ್ಯಾಥ್ಯೂಸ್, ಸಜೀವನಾ ಸಜ್ನಾ, ನ್ಯಾಟ್ ಶೀವರ್ ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್, ರಾಹಿಲಾ ಫಿರ್ದೌಸ್ (ವಿಕೆಟ್ ಕೀಪರ್), ಸಂಸ್ಕೃತಿ ಗುಪ್ತಾ, ವೈಷ್ಣವಿ ಶರ್ಮಾ, ಶಬ್ನಿಮ್ ಇಸ್ಮಾಯಿಲ್, ಪೂನಂ ಖೆಮ್ನಾರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
