WPL 2025: ಆರ್​ಸಿಬಿಯಿಂದ 7 ಪ್ಲೇಯರ್ಸ್ ಔಟ್..! ತಂಡದಲ್ಲಿ ಉಳಿದವರು ಯಾರ್ಯಾರು ಗೊತ್ತಾ?

|

Updated on: Nov 07, 2024 | 6:42 PM

WPL Retention 2025: ಐಪಿಎಲ್ ನಂತರ, ಈಗ ಮಹಿಳಾ ಪ್ರೀಮಿಯರ್ ಲೀಗ್‌ನ ಮುಂದಿನ ಸೀಸನ್​ಗಾಗಿ ಧಾರಣ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಮಿನಿ ಹರಾಜು ನಡೆಯುವುದರಿಂದ ಎಲ್ಲ ತಂಡಗಳು ಒಂದಿಷ್ಟು ಆಟಗಾರ್ತಿಯರನ್ನು ಉಳಿಸಿಕೊಂಡಿವೆ. ಕಳೆದ ಆವೃತ್ತಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಟ್ಟು 7 ಆಟಗಾರ್ತಿಯರನ್ನು ಬಿಡುಗಡೆ ಮಾಡಿದೆ.

WPL 2025: ಆರ್​ಸಿಬಿಯಿಂದ 7 ಪ್ಲೇಯರ್ಸ್ ಔಟ್..! ತಂಡದಲ್ಲಿ ಉಳಿದವರು ಯಾರ್ಯಾರು ಗೊತ್ತಾ?
ಆರ್​ಸಿಬಿ ಮಹಿಳಾ ತಂಡ
Follow us on

ಐಪಿಎಲ್​ನಂತೆ, ಮಹಿಳಾ ಪ್ರೀಮಿಯರ್​ ಲೀಗ್​ನಲ್ಲೂ ಮುಂಬರುವ ಸೀಸನ್​ಗಾಗಿ ಸಿದ್ಧತೆ ಆರಂಭವಾಗಿದೆ. ಅದರಂತೆ ಫ್ರಾಂಚೈಸಿಗಳು ತಾವು ತಮ್ಮಲ್ಲೇ ಉಳಿಸಿಕೊಂಡಿರುವ ಆಟಗಾರ್ತಿಯರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಇದರಲ್ಲಿ ಹಾಲಿ ಚಾಂಪಿಯನ್‌ ಆರ್​ಸಿಬಿ ಕೂಡ ಸೇರಿದ್ದು, ಮಿನಿ ಹರಾಜಿಗೂ ಮುನ್ನ ಈ ಫ್ರಾಂಚೈಸಿ 7 ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿದ್ದು, ಉಳಿದಂತೆ 14 ಆಟಗಾರ್ತಿಯರನ್ನು ತನ್ನಲ್ಲೇ ಉಳಿಸಿಕೊಂಡಿದೆ.ಆದರೆ ಐಪಿಎಲ್​ನಂತೆ ಡಬ್ಲ್ಯುಪಿಎಲ್​ನಲ್ಲಿ ಮೆಗಾ ಹರಾಜು ಇರುವುದಿಲ್ಲ. ಬದಲಿಗೆ ಮಿನಿ ಹರಾಜು ಇರಲಿದೆ. ಹೀಗಾಗಿ ಫ್ರಾಂಚೈಸಿಗಳು ಗರಿಷ್ಠ ಆಟಗಾರ್ತಿಯರನ್ನು ತಮ್ಮಲ್ಲೇ ಉಳಿಸಿಕೊಂಡು, ಕೆಲವೇ ಕೆಲವು ಆಟಗಾರ್ತಿಯರನ್ನು ತಂಡದಿಂದ ಕೈಬಿಟ್ಟಿವೆ.

ಬಿಸಿಸಿಐ ನಿಯಮದಂತೆ ಪ್ರತಿ ಫ್ರಾಂಚೈಸಿ 18 ಆಟಗಾರ್ತಿಯರನ್ನು ತಂಡವನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಅದರಲ್ಲಿ 6 ವಿದೇಶಿ ಆಟಗಾರ್ತಿಯರನ್ನು ಕಡ್ಡಾಯವಾಗಿ ಉಳಿಸಿಕೊಳ್ಳಲೇಬೇಕು. ಹೀಗಾಗಿ ಡ್ಯಾನಿ ವ್ಯಾಟ್ ಅವರನ್ನು ಕೆಲವು ದಿನಗಳ ಹಿಂದಷ್ಟೇ ಟ್ರೆಡಿಂಗ್ ಮೂಲಕ ಖರೀದಿಸಿದ್ದ ಆರ್​ಸಿಬಿ ಪಾಳದಲ್ಲಿ ವಿದೇಶಿ ಆಟಗಾರ್ತಿಯರ ಸಂಖ್ಯೆ 8 ಕ್ಕೆ ಏರಿತ್ತು. ಆದ್ದರಿಂದ ಆರ್​ಸಿಬಿ ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್ ಮತ್ತು ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ನಡಿನ್ ಡಿ ಕ್ಲರ್ಕ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.

ಆರ್​ಸಿಬಿಯಿಂದ ಹೊರಬಿದ್ದ ಆಟಗಾರ್ತಿಯರಿವರು

    1. ದಿಶಾ ಕಸತ್
    2. ಇಂದ್ರಾಣಿ ರಾಯ್
    3. ನಾಡಿನ್ ಡಿ ಕ್ಲರ್ಕ್
    4. ಶುಭಾ ಸತೀಶ್
    5. ಶ್ರದ್ಧಾ ಪೋಕರ್ಕರ್
    6. ಸಿಮ್ರಾನ್ ಬಹದ್ದೂರ್
    7. ಹೀದರ್ ನೈಟ್

— Royal Challengers Bengaluru (@RCBTweets) November 7, 2024

ಆರ್​ಸಿಬಿಯಲ್ಲೇ ಉಳಿದವರಿವರು

      1. ಸ್ಮೃತಿ ಮಂಧಾನ
      2. ಎಲ್ಲಿಸ್ ಪೆರ್ರಿ
      3. ರಿಚಾ ಘೋಷ್
      4. ಸಬ್ಬಿನೇನಿ ಮೇಘನಾ
      5. ಶ್ರೇಯಾಂಕಾ ಪಾಟೀಲ್
      6. ಜಾರ್ಜಿಯಾ ವಾರೆಹಮ್
      7. ಆಶಾ ಸೋಭಾನಾ
      8. ರೇಣುಕಾ ಸಿಂಗ್
      9. ಸೋಫಿ ಡಿವೈನ್
      10. ಸೋಫಿ ಮೊಲಿನೆಕ್ಸ್
      11. ಏಕ್ತಾ ಬಿಶ್ತ್
      12. ಕನಿಕಾ ಅಹುಜಾ
      13. ಕೇಟ್ ಕ್ರಾಸ್
      14. ಡೇನಿಯಲ್ ವ್ಯಾಟ್.

ಇದೀಗ ಆರ್​ಸಿಬಿ ತಂಡದಿಂದ ಬಿಡುಗಡೆಯಾಗಿರುವವರ ಪೈಕಿ ಐವರು ಭಾರತೀಯ ಆಟಗಾರ್ತಿಯರು ಸೇರಿದ್ದರೆ, ಇನ್ನಿಬ್ಬರು ವಿದೇಶಿ ಪ್ಲೇಯರ್​ಗಳು ಸೇರಿದ್ದಾರೆ. ಹೀಗಾಗಿ ಆರ್​ಸಿಬಿ ಪ್ರಸ್ತುತ ತನ್ನಲ್ಲಿ 14 ಆಟಗಾರ್ತಿಯರನ್ನು ಉಳಿಸಿಕೊಂಡಿರುವ ಕಾರಣ ಮಿನಿ ಹರಾಜಿನಲ್ಲಿ ಕನಿಷ್ಠ 4 ಆಟಗಾರ್ತಿಯರನ್ನು ಖರೀದಿಸಬೇಕಾಗಿದ್ದು, ತಂಡದ ಬಳಿ 3.25 ಕೋಟಿ ರೂ. ಹಣವಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:28 pm, Thu, 7 November 24