DPL 2025: 15 ಬೌಂಡರಿ, 7 ಸಿಕ್ಸರ್; ಡಿಪಿಎಲ್ನಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಯಶ್ ಧುಲ್
Yash Dhull's First DPL Century: ಯಶ್ ಧುಲ್ ಅವರು ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್) 2025ರ ಎರಡನೇ ಪಂದ್ಯದಲ್ಲಿ ತಮ್ಮ ಮೊದಲ ಶತಕ ಬಾರಿಸಿ ತಮ್ಮ ತಂಡವಾದ ಸೆಂಟ್ರಲ್ ದೆಹಲಿ ಕಿಂಗ್ಸ್‌ಗೆ ಗೆಲುವು ತಂದುಕೊಟ್ಟಿದ್ದಾರೆ. 56 ಎಸೆತಗಳಲ್ಲಿ 101 ರನ್ ಗಳಿಸಿದ ಅವರು ಈ ಆವೃತ್ತಿಯಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಅದ್ಭುತ ಇನ್ನಿಂಗ್ಸ್‌ನಿಂದಾಗಿ, ದೆಹಲಿ ಕಿಂಗ್ಸ್ ತಂಡವು ನಾರ್ತ್ ದೆಹಲಿ ಸ್ಟ್ರೈಕರ್ಸ್ ವಿರುದ್ಧ 8 ವಿಕೆಟ್‌ಗಳ ಅಂತರದಿಂದ ಜಯಗಳಿಸಿತು.

ಭಾರತ ಅಂಡರ್-19 ತಂಡದ ಮಾಜಿ ನಾಯಕ ಯಶ್ ಧುಲ್ (Yash Dhul) 2025 ರ ದೆಹಲಿ ಪ್ರೀಮಿಯರ್ ಲೀಗ್ (DPL 2025) ನಲ್ಲಿ ಮೊದಲ ಶತಕ ಬಾರಿಸಿದ್ದಾರೆ. ಈ ಮೂಲಕ ಈ ಆವೃತ್ತಿಯಲ್ಲಿ ಶತಕ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೆಂಟ್ರಲ್ ದೆಹಲಿ ಕಿಂಗ್ಸ್ ಪರ ಆಡುತ್ತಿರುವ ಧುಲ್, ಡಿಪಿಎಲ್ 2025 ರ ಎರಡನೇ ಪಂದ್ಯದಲ್ಲಿ 56 ಎಸೆತಗಳಲ್ಲಿ 101 ರನ್ ಸಿಡಿಸಿದರು. ಅವರ ಇನ್ನಿಂಗ್ಸ್ನಲ್ಲಿ 15 ಬೌಂಡರಿ ಮತ್ತು ಸಿಕ್ಸರ್ ಕೂಡ ಸೇರಿದ್ದವು. ಯಶ್ ಅವರ ಅದ್ಭುತ ಇನ್ನಿಂಗ್ಸ್‌ನ ಆಧಾರದ ಮೇಲೆ ದೆಹಲಿ ಕಿಂಗ್ಸ್ ತಂಡ, ನಾರ್ತ್ ದೆಹಲಿ ಸ್ಟ್ರೈಕರ್ಸ್ ವಿರುದ್ಧದ ಪಂದ್ಯವನ್ನು 8 ವಿಕೆಟ್‌ಗಳಿಂದ 15 ಎಸೆತಗಳು ಬಾಕಿ ಇರುವಾಗಲೇ ಜಯಗಳಿಸಿತು.
ಎರಡನೇ ಪಂದ್ಯದಲ್ಲಿ ಶತಕ
ಡಿಪಿಎಲ್ 2025 ರ ಎರಡನೇ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಮತ್ತು ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ, ಸೆಂಟ್ರಲ್ ಡೆಲ್ಲಿ ಕಿಂಗ್ಸ್‌ನ ಆರಂಭಿಕ ಆಟಗಾರ ಯಶ್ ಧುಲ್ ಅದ್ಭುತ ಶತಕ ಗಳಿಸಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು. ಕೇವಲ 56 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಾಯದಿಂದ 180 ರ ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 101 ರನ್ ಸಿಡಿಸಿದರು.
ಯಶ್ ಧುಲ್ ಟೀಂ ಇಂಡಿಯಾ ಪರ ಅಂಡರ್-19 ತಂಡದ ನಾಯಕತ್ವ ವಹಿಸಿದ್ದರು. 2022 ರಲ್ಲಿ ತಮ್ಮ ನಾಯಕತ್ವದಲ್ಲಿಯೇ ಟೀಂ ಇಂಡಿಯಾವನ್ನು ಅಂಡರ್-19 ವಿಶ್ವಕಪ್ ಚಾಂಪಿಯನ್ ಮಾಡಿದ್ದರು. ಇದಲ್ಲದೆ, ಅವರು 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿಯೂ ಆಡಿದ್ದಾರೆ. ಈಗ ಅವರು ಡಿಪಿಎಲ್ನ ಎರಡನೇ ಸೀಸನ್ನಲ್ಲಿ ಶತಕ ಗಳಿಸುವ ಮೂಲಕ ಉತ್ತಮ ಆರಂಭವನ್ನು ಮಾಡಿದ್ದಾರೆ.
A stunning unbeaten century! 💯 101 off 56 balls* — pure class from Yash Dhull! North Delhi Strikers 🆚 Central Delhi Kings 2nd Match – DPL 2025#DPL2025 #IPL2026 #IPL2026Auction pic.twitter.com/DxLSHhKLDg
— KG Sports (@TheKGSports) August 3, 2025
ಪಂದ್ಯ ಹೇಗಿತ್ತು?
ಡಿಪಿಎಲ್ 2025 ರ ಎರಡನೇ ಪಂದ್ಯದಲ್ಲಿ, ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 174 ರನ್ ಗಳಿಸಿತು. ನಾರ್ತ್ ಡೆಲ್ಲಿಯ ಆರಂಭಿಕ ಆಟಗಾರ ಸಾರ್ಥಕ್ ರಂಜನ್ 60 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 82 ರನ್ ಗಳಿಸಿದರು. ಇವರ ಹೊರತಾಗಿ, ಅರ್ನವ್ ಬಗ್ಗಾ 43 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 67 ರನ್ ಗಳಿಸಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ, ಯಾವುದೇ ಬ್ಯಾಟ್ಸ್‌ಮನ್ ಎರಡಂಕಿಯ ಸ್ಕೋರ್ ತಲುಪಲು ಸಾಧ್ಯವಾಗಲಿಲ್ಲ. ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಪರ ಮೋನಿ ಗ್ರೆವಾಲ್ ಮತ್ತು ಗವಿಶ್ ಖುರಾನಾ ತಲಾ ಎರಡು ವಿಕೆಟ್ ಪಡೆದರು. ಸಿಮರ್‌ಜಿತ್ ಸಿಂಗ್ ಮತ್ತು ತೇಜಸ್ ತಲಾ ಒಂದು ವಿಕೆಟ್ ಪಡೆದರು.
15 ಎಸೆತಗಳು ಬಾಕಿ ಇರುವಾಗಲೇ ಗೆಲುವು
175 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಯಶ್ ಧುಲ್ ಚುರುಕಾದ ಆರಂಭ ನೀಡಿದರು. ಯಶ್ ಹೊರತುಪಡಿಸಿ, ಯುಗಲ್ ಸೈನಿ 24 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 36 ರನ್ ಗಳಿಸಿದರು. ಇವರ ಜೊತೆಗೆ, ನಾಯಕ ಜಾಂಟಿ ಸಿಧು 19 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್‌ಗಳ ಸಹಾಯದಿಂದ ಅಜೇಯ 23 ರನ್ ಗಳಿಸಿದರು. ಈ ರೀತಿಯಾಗಿ, ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡವು 17.3 ಓವರ್‌ಗಳಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ಪರ ಕುಲ್ದೀಪ್ ಯಾದವ್ ಎರಡು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
