50 ಓವರ್ ಪಂದ್ಯದಲ್ಲಿ 20 ರನ್ ಬಾರಿಸದ ಬ್ಯಾಟ್ಸ್​ಮನ್​ಗಳು: ಗೆದ್ದಿದ್ದು ಕೇವಲ 1 ವಿಕೆಟ್​ನಿಂದ..!

Yorkshire - Derbyshire: ಇಂತಹದೊಂದು ಅಪರೂಪದ ಪಂದ್ಯಕ್ಕೆ ಸಾಕ್ಷಿಯಾಗಿದ್ದು ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್. ಗ್ರೂಪ್-ಬಿ ನಲ್ಲಿ ನಡೆದ ಈ ಪಂದ್ಯದಲ್ಲಿ ಡರ್ಬಿಶೈರ್ ಹಾಗೂ ಯಾರ್ಕ್​ಶೈರ್ ತಂಡಗಳು ಮುಖಾಮುಖಿಯಾಗಿತ್ತು.

50 ಓವರ್ ಪಂದ್ಯದಲ್ಲಿ 20 ರನ್ ಬಾರಿಸದ ಬ್ಯಾಟ್ಸ್​ಮನ್​ಗಳು: ಗೆದ್ದಿದ್ದು ಕೇವಲ 1 ವಿಕೆಟ್​ನಿಂದ..!
Yorkshire - Derbyshire
Edited By:

Updated on: Aug 22, 2022 | 1:24 PM

50 ಓವರ್​ ಪಂದ್ಯ…ಅಂದರೆ ಬರೋಬ್ಬರಿ 300 ಎಸೆತಗಳು…ಆದರೆ ಇಲ್ಲೊಂದು ತಂಡದ ಬ್ಯಾಟ್ಸ್​ಮನ್​ಗಳ ವೈಯುಕ್ತಿಕ ಮೊತ್ತ 20 ರನ್ ದಾಟಿರಲಿಲ್ಲ ಎಂಬುದು ವಿಶೇಷ. ಇದಾಗ್ಯೂ 109 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ವೈಡ್-ನೋಬಾಲ್​ ಮೂಲಕ 10 ರನ್​ಗಳು ಹೆಚ್ಚುವರಿಯಾಗಿ ಲಭಿಸಿತ್ತು. ಅಚ್ಚರಿಯೆಂದರೆ 110 ರನ್​ಗಳ ಮೊತ್ತವನ್ನು ಬೆನ್ನತ್ತಿದ ಎದುರಾಳಿ ತಂಡ ಕೂಡ 9 ವಿಕೆಟ್ ಕಳೆದುಕೊಂಡು ರೋಚಕ ಜಯ ಸಾಧಿಸಿತ್ತು.

ಇಂತಹದೊಂದು ಅಪರೂಪದ ಪಂದ್ಯಕ್ಕೆ ಸಾಕ್ಷಿಯಾಗಿದ್ದು ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್. ಗ್ರೂಪ್-ಬಿ ನಲ್ಲಿ ನಡೆದ ಈ ಪಂದ್ಯದಲ್ಲಿ ಡರ್ಬಿಶೈರ್ ಹಾಗೂ ಯಾರ್ಕ್​ಶೈರ್ ತಂಡಗಳು ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಡರ್ಬಿಶೈರ್ ತಂಡವು ಯಾರ್ಕ್​ಶೈರ್ ಬೌಲರ್​ಗಳ ದಾಳಿಗೆ ತತ್ತರಿಸಿತು.

ರನ್​ಗಳಿಸುವುದು ಇರಲಿ, ಕ್ರೀಸ್​ ಕಚ್ಚಿ ನಿಲ್ಲುವ ಪ್ರಯತ್ನ ಮಾಡಿದ ಡರ್ಬಿಶೈರ್ ಅಂತಿಮವಾಗಿ 42.4 ಓವರ್​ಗಳಲ್ಲಿ 109 ರನ್​ಗಳಿಗೆ ಆಲೌಟ್ ಆಯಿತು. ತಂಡದ ಪರ ಹ್ಯಾರಿ ಕೇಮ್ 58 ಎಸೆತಗಳಲ್ಲಿ 19 ರನ್​ಗಳಿಸಿದ್ದು ಗರಿಷ್ಠ ಸ್ಕೋರ್. ಇದಾಗ್ಯೂ ಯಾವುದೇ ಬ್ಯಾಟ್ಸ್​ಮನ್​ಗಳ ಸ್ಕೋರ್ 20ರ ಗಡಿದಾಟಿರಲಿಲ್ಲ. ಹಾಗೆಯೇ 10 ಹೆಚ್ಚುವರಿ ರನ್​ಗಳ ನೆರವಿನಿಂದ ಡರ್ಬಿಶೈರ್ 109 ರನ್​ಗಳನ್ನು ಕಲೆಹಾಕಿತು.

ಇದನ್ನೂ ಓದಿ
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

110 ರನ್​ಗಳ ಸಾಧಾರಣ ಸವಾಲು ಪಡೆದ ಯಾರ್ಕ್​ಶೈರ್ ತಂಡವು 78 ರನ್​ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ಪಂದ್ಯವು ರೋಚಕತೆಯತ್ತ ಸಾಗಲಾರಂಭಿಸಿತು. 101 ರನ್​ಗಳಿಗೆ 8 ವಿಕೆಟ್ ಉರುಳಿಸಿದ ಡರ್ಬಿಶೈರ್ ಒಂದು ಹಂತದಲ್ಲಿ ಗೆಲ್ಲುವ ಸೂಚನೆ ನೀಡಿತು. ಆದರೆ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹ್ಯಾರಿಸ್ ಸುಲ್ಲಿವನ್ 17 ಎಸೆತಗಳನ್ನು ಎದುರಿಸಿ 7 ರನ್ ಕಲೆಹಾಕಿದರು. ಇದಾಗ್ಯೂ 109 ರನ್​ಗಳಿಸಿದ್ದ ವೇಳೆ 9ನೇ ವಿಕೆಟ್ ಕೂಡ ಪತನಗೊಂಡಿತು. ಈ ಹಂತದಲ್ಲಿ ಎಚ್ಚರಿಕೆಯ ಆಟವಾಡಿದ ಸುಲ್ಲಿವನ್ ಒಂದು ರನ್​ಗಳಿಸುವ ಮೂಲಕ ತಂಡಕ್ಕೆ ಒಂದು ವಿಕೆಟ್​ನ ರೋಚಕ ಜಯ ತಂದುಕೊಟ್ಟರು.