Shaheen Afridi: ಅಳಿಯ ಶಾಹೀನ್‌ನ ಗಾಯವನ್ನು ಗೇಲಿ ಮಾಡಿದ ಮಾವ ಆಫ್ರಿದಿ..!
Asia Cup 2022: ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಶಾಹೀನ್ ಅಫ್ರಿದಿ ಬದಲಿಗೆ ಪಾಕ್ ತಂಡದಲ್ಲಿ ಇದೀಗ ಮೊಹಮ್ಮದ್ ಹಸ್ನೈನ್ ಸ್ಥಾನ ಪಡೆದಿದ್ದಾರೆ.

ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಗಾಯದ ಕಾರಣ ಏಷ್ಯಾಕಪ್ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಆಗಸ್ಟ್ 28 ರಂದು ಭಾರತದ ವಿರುದ್ದ ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಇದರ ಬೆನ್ನಲ್ಲೇ ಭಾರತ-ಪಾಕ್ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಕಿಚಾಯಿಸುವಿಕೆ ಶುರುವಾಗಿತ್ತು. ಇದೀಗ ಶಾಹೀನ್ ಅಫ್ರಿದಿ ಅವರ ಭಾವಿ ಮಾವ ಶಾಹಿದ್ ಅಫ್ರಿದಿ ಕೂಡ ಹಾಸ್ಯಚಟಾಕಿ ಹಾರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಶಾಹೀನ್ ಅಫ್ರಿದಿ ಗಾಯದ ಬಗ್ಗೆ ಟ್ವೀಟ್ ಮಾಡಿರುವ ಶಾಹೀದ್ ಅಫ್ರಿದಿ, ಶಾಹೀನ್ ತನ್ನ ಮಾತನ್ನು ಕೇಳಲಿಲ್ಲ. ತಾನು ಮೊದಲೇ ಆತನಿಗೆ ಡೈವ್ ಹೊಡೆಯದಂತೆ ಸೂಚಿಸಿದ್ದೆ. ನೀನು ಫಾಸ್ಟ್ ಬೌಲರ್. ಡೈವ್ ಹೊಡೆದ್ರೆ ಗಾಯಗೊಳ್ಳುತ್ತೀಯಾ ಎಂದು ತಿಳಿಸಿದ್ದೆ. ಆದರೆ ಆ ಬಳಿಕ ಅರಿವಾಯಿತು, ಆತ ಕೂಡ ಅಫ್ರಿದಿ ಎಂಬುದು…ಈ ಮೂಲಕ ಶಾಹೀನ್ ಅಫ್ರಿದಿಯ ನಡೆಯನ್ನು ಕಿಚಾಯಿಸುವ ಪೋಸ್ಟ್ ಹಾಕಿದ್ದಾರೆ.
Mene us ko pehle b mana Kia tha k dive mat maray, injury hosakti hai, ap fast bowler ho. Lekin bad me mene realise Kia k wo b Afridi hi hai ?
— Shahid Afridi (@SAfridiOfficial) August 21, 2022
ಶಾಹಿದ್ ಅಫ್ರಿದಿಯ ಅಳಿಯನಾಗಲಿರುವ ಶಾಹೀನ್:
ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಹಿರಿಯ ಮಗಳು ಅಕ್ಷಾ ಅವರನ್ನು ಶಾಹೀನ್ ಶಾ ಅಫ್ರಿದಿ ಮದುವೆಯಾಗಲಿದ್ದಾರೆ. ಆದರೆ ಈ ವಿವಾಹಕ್ಕೆ ಇನ್ನೂ ಕೂಡ ದಿನಾಂಕ ನಿಗದಿಪಡಿಸಲಾಗಿಲ್ಲ. ತನ್ನ ಮಗಳು ವೈದ್ಯೆಯಾಗಲು ಬಯಸಿದ್ದಾಳೆ. ಅವಳು ಪಾಕಿಸ್ತಾನದಲ್ಲಿ ಅಥವಾ ಇಂಗ್ಲೆಂಡ್‌ನಲ್ಲಿ ಶಿಕ್ಷಣವನ್ನು ಮುಂದುವರಿಸಬೇಕೆ ಎಂದು ಇನ್ನೂ ನಿರ್ಧರಿಸಲಾಗಿಲ್ಲ. ಹೀಗಾಗಿ ಮಗಳ ಶಿಕ್ಷಣ ಹಾಗೂ ಮದುವೆ ವಿಚಾರಗಳ ತೀರ್ಮಾನಗಳನ್ನು ಇನ್ನಷ್ಟೇ ನಿರ್ಧರಿಸಬೇಕಿಸಬೇಕೆಂದು ಅಫ್ರಿದಿ ತಿಳಿಸಿದ್ದಾರೆ.
ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಶಾಹೀನ್ ಅಫ್ರಿದಿ ಬದಲಿಗೆ ಪಾಕ್ ತಂಡದಲ್ಲಿ ಇದೀಗ ಮೊಹಮ್ಮದ್ ಹಸ್ನೈನ್ ಸ್ಥಾನ ಪಡೆದಿದ್ದಾರೆ. 22 ರ ಹರೆಯದ ಯುವ ವೇಗಿ ಸದ್ಯ ಇಂಗ್ಲೆಂಡ್‌ನಲ್ಲಿ ದಿ ಹಂಡ್ರೆಡ್ ಲೀಗ್ ಆಡುತ್ತಿದ್ದು, ಅದರಂತೆ ಏಷ್ಯಾಕಪ್ ವೇಳೆಗೆ ಪಾಕ್ ತಂಡವನ್ನು ಸೇರಿಕೊಳ್ಳಲಿದ್ದಾರೆ.




