Stuart Broad: ಯುವರಾಜ್ ಸಿಂಗ್ ಬಾರಿಸಿದ 6 ಸಿಕ್ಸ್​ಗಳಿಂದ ನಾನು ಇಂದು ಇಲ್ಲಿದ್ದೇನೆ: ಸ್ಟುವರ್ಟ್ ಬ್ರಾಡ್

| Updated By: ಝಾಹಿರ್ ಯೂಸುಫ್

Updated on: Jul 31, 2023 | 3:30 PM

Stuart Broad: ಆ ಸಿಕ್ಸ್​ಗಳ ಬಳಿಕ ಸ್ಟುವರ್ಟ್ ಬ್ರಾಡ್ ತಮ್ಮ ಕೆರಿಯರ್​ನಲ್ಲಿ 800 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವ ಕೇವಲ 8 ಬೌಲರ್​ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ ಎಂಬುದು ವಿಶೇಷ.

Stuart Broad: ಯುವರಾಜ್ ಸಿಂಗ್ ಬಾರಿಸಿದ 6 ಸಿಕ್ಸ್​ಗಳಿಂದ ನಾನು ಇಂದು ಇಲ್ಲಿದ್ದೇನೆ: ಸ್ಟುವರ್ಟ್ ಬ್ರಾಡ್
Yuvraj Singh-Stuart Broad
Follow us on

ಸೆಪ್ಟೆಂಬರ್ 19, 2007…ಟಿ20 ವಿಶ್ವಕಪ್​ನ 21ನೇ..ಇಂಗ್ಲೆಂಡ್ ಹಾಗೂ ಭಾರತ ಮುಖಾಮುಖಿ. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 16 ಓವರ್​ಗಳಲ್ಲಿ 150 ಕ್ಕೂ ಹೆಚ್ಚಿನ ರನ್ ಕಲೆಹಾಕಿತ್ತು. ಕೊನೆಯ 4 ಓವರ್​ಗಳ ವೇಳೆ ಕ್ರೀಸ್​ನಲ್ಲಿದದ್ದು ಯುವರಾಜ್ ಸಿಂಗ್ ಹಾಗೂ ಎಂಎಸ್​ ಧೋನಿ. 18ನೇ ಓವರ್​ ಮುಕ್ತಾಯದ ವೇಳೆ ಯುವರಾಜ್ ಸಿಂಗ್ ಅವರನ್ನು ಆಂಡ್ರ್ಯೂ ಫ್ಲಿಂಟಾಫ್ ಕೆಣಕಿದ್ದರು. ಈ ಸಿಟ್ಟನೆಲ್ಲಾ ಯುವರಾಜ್ ಸಿಂಗ್ 19ನೇ ಓವರ್​ನಲ್ಲಿ ಹೊರಹಾಕಿದ್ದರು. ಅಂದು 19ನೇ ಓವರ್ ಎಸೆದಿದ್ದು 21 ವರ್ಷದ ಯುವ ವೇಗಿ ಸ್ಟುವರ್ಟ್ ಬ್ರಾಡ್. ಆ ಓವರ್​ನ 6 ಎಸೆತಗಳಲ್ಲೂ ಸಿಕ್ಸ್ ಸಿಡಿಸುವ ಮೂಲಕ ಯುವರಾಜ್ ಸಿಂಗ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದರೊಂದಿಗೆ ಯುವಿಯ ಹೆಸರು ದಾಖಲೆ ಪಟ್ಟಿಯಲ್ಲಿ ರಾರಾಜಿಸಿದರೆ, ಇತ್ತ 6 ಸಿಕ್ಸ್ ಹೊಡೆಸಿಕೊಂಡ ಬೌಲರ್​ ಎಂಬ ಹಣೆಪಟ್ಟಿ ಸ್ಟುವರ್ಟ್​ ಬ್ರಾಡ್​ ಪಾಲಾಯಿತು. ಇದೀಗ ಈ ಘಟನೆ ನಡೆದು 16 ವರ್ಷಗಳ ಬಳಿಕ ಸ್ಟುವರ್ಟ್ ಬ್ರಾಡ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

ಈ ವಿದಾಯಕ್ಕೂ ಮುನ್ನ ಯುವರಾಜ್ ಸಿಂಗ್ ಬಾರಿಸಿದ ಆ 6 ಸಿಕ್ಸ್​ಗಳ ಬಗ್ಗೆಗೂ ಮಾತನಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕೇಳಲಾದ ಆರು ಸಿಕ್ಸ್​ಗಳ ಪ್ರಶ್ನೆಗೆ ಹಸನ್ಮುಖಿಯಾಗಿಯೇ ಉತ್ತರಿಸಿದ ಬ್ರಾಡ್, ಅದೊಂದು ಘಟನೆ ನಡೆಯಬಾರದಿತ್ತು ಎಂದು ತಿಳಿಸಿದ್ದಾರೆ.

ಖಂಡಿತವಾಗಿಯೂ ಆರು ಸಿಕ್ಸ್​ಗಳನ್ನು ಹೊಡೆಸಿಕೊಂಡಿದ್ದು, ನನ್ನ ಪಾಲಿಗೆ ಕಠಿಣವಾಗಿತ್ತು. ಅಂತಹದೊಂದು ಘಟನೆಯೇ ನಡೆಯಬಾರದಿತ್ತು ಎಂದು ಬಯಸುತ್ತೇನೆ. ಆದರೆ ಅದೇ ನನ್ನ ವೃತ್ತಿಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಎಂದರೆ ತಪ್ಪಾಗಲಾರದು.

ಏಕೆಂದರೆ ಅಂದಿನ ನನ್ನ ಕೆಟ್ಟ ಓವರ್​ನಿಂದಾಗಿ ನಾನು ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದೆ. ಅದು ನನ್ನನ್ನು ಇಂದಿಗೂ ಪ್ರತಿಸ್ಪರ್ಧಿಯನ್ನಾಗಿ ಮಾಡಿದೆ. ನಾವೆಲ್ಲರೂ ಅಂತಹದೊಂದು ಕಠಿಣ ಕ್ಷಣಗಳ ಮೂಲಕ ಹಾದು ಹೋಗುತ್ತೇವೆ. ಇದಾದ ಬಳಿಕ ನಾವು ಹೇಗೆ ಕಂಬ್ಯಾಕ್ ಮಾಡುತ್ತೇವೆ ಎಂಬುದರ ಮೇಲೆ ನಮ್ಮ ಸಾಮರ್ಥ್ಯ ಅಡಗಿದೆ ಎಂದು ಸ್ಟುವರ್ಟ್ ಬ್ರಾಡ್ ತಿಳಿಸಿದರು.

ಅಂದು ಯುವರಾಜ್ ಸಿಂಗ್ ಒಂದೇ ಓವರ್​ನಲ್ಲಿ 6 ಸಿಕ್ಸ್​ ಸಿಡಿಸಿದ್ದರಿಂದ ನನ್ನ ಸಹ ಕ್ರಿಕೆಟ್​ ಅನ್ನು ಗಂಭೀರವಾಗಿ ಪರಿಗಣಿಸಿದೆ.  ಇದು ಪ್ರತಿಬಾರಿಯೂ ನನ್ನನ್ನು ಪ್ರತಿಸ್ಪರ್ಧಿಯಾಗಿರಲು ಪ್ರೇರೇಪಿಸಿತು. ಅದರಂತೆ ಇದೀಗ ಹಲವು ಸಾಧನೆಗಳೊಂದಿಗೆ ನಾನು ಇಂದು ಇಲ್ಲಿದ್ದೇನೆ ಎಂದು ಸ್ಟುವರ್ಟ್ ಬ್ರಾಡ್ ತಿಳಿಸಿದ್ದಾರೆ.

ಇದನ್ನೂ ಓದಿ: Stuart Broad: 151 ವಿಕೆಟ್ ಕಬಳಿಸಿ ಮತ್ತೊಂದು ದಾಖಲೆ ಬರೆದ ಸ್ಟುವರ್ಟ್ ಬ್ರಾಡ್

ಅಂದಹಾಗೆ ಆ ಸಿಕ್ಸ್​ಗಳ ಬಳಿಕ ಸ್ಟುವರ್ಟ್ ಬ್ರಾಡ್ ತಮ್ಮ ಕೆರಿಯರ್​ನಲ್ಲಿ 800 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವ ಕೇವಲ 8 ಬೌಲರ್​ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ ಎಂಬುದು ವಿಶೇಷ.

 

Published On - 3:27 pm, Mon, 31 July 23