T20 World Cup 2024: ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ಮುಂದಿರುವುದು ಕೇವಲ 19 ಪಂದ್ಯಗಳು..!
India Cricket Schedule: ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ 5 ಟಿ20 ಸರಣಿಗಳನ್ನು ಆಡಲಿದೆ. ಒಟ್ಟು 19 ಪಂದ್ಯಗಳನ್ನು ಒಳಗೊಂಡಿರುವ ಈ ಸರಣಿಯ ಮೂಲಕ ಭಾರತ ತಂಡವು ಟಿ20 ವಿಶ್ವಕಪ್ಗೆ ತಯಾರಿ ನಡೆಸಲಿದೆ.
ಏಕದಿನ ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಮುಂಬರುವ ಟಿ20 ವಿಶ್ವಕಪ್ ದಿನಾಂಕ ಕೂಡ ಫೈನಲ್ ಆಗಿದೆ. ಯುಎಸ್ಎ-ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಜೂನ್ 4, 2024 ರಿಂದ ಶುರುವಾಗಲಿದೆ. ಹಾಗೆಯೇ ಫೈನಲ್ ಪಂದ್ಯವು ಜೂನ್ 30 ರಂದು ನಡೆಯಲಿದೆ. ಅಂದರೆ ಟಿ20 ವಿಶ್ವಕಪ್ ಆರಂಭಕ್ಕೆ ಇನ್ನುಳಿದಿರುವುದು ಕೇವಲ 10 ತಿಂಗಳುಗಳು ಮಾತ್ರ. ಇತ್ತ ಈ 10 ತಿಂಗಳುಗಳಲ್ಲಿ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ಗೆ ತಯಾರಿ ನಡೆಸಬೇಕಿದೆ. ಹಾಗೆಯೇ ಟಿ20 ವಿಶ್ವಕಪ್ಗಾಗಿ ಬಲಿಷ್ಠ ಪಡೆಯನ್ನು ರೂಪಿಸಬೇಕಿದೆ. ಆದರೆ ಇದಕ್ಕಾಗಿ ಬಿಸಿಸಿಐ ರೂಪಿಸಿಕೊಂಡಿರುವ ವೇಳಾಪಟ್ಟಿಯಲ್ಲಿ ಭಾರತ ತಂಡದ ಮುಂದಿರುವುದು 19 ಪಂದ್ಯಗಳು ಮಾತ್ರ.
ಅಂದರೆ ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ಕೇವಲ 19 ಟಿ20 ಪಂದ್ಯಗಳನ್ನು ಮಾತ್ರ ಆಡಲಿದೆ. ಮೆನ್ ಇನ್ ಬ್ಲೂ ಮುಂದಿನ ಐದು ತಿಂಗಳುಗಳಲ್ಲಿ 5 ಸರಣಿಗಳನ್ನು ಆಡಲಿದ್ದು, ಇದಾದ ಬಳಿಕ ಎರಡು ತಿಂಗಳುಗಳ ಕಾಲ ಐಪಿಎಲ್ ನಡೆಯಲಿದೆ. ಜೂನ್ ಮೊದಲ ವಾರದಲ್ಲಿ ಟಿ20 ವಿಶ್ವಕಪ್ ಘೋಷಣೆಯಾಗಿರುವ ಕಾರಣ ಮುಂದಿನ ಐಪಿಎಲ್ ಮಾರ್ಚ್-ಮೇನಲ್ಲಿ ನಡೆಯುವುದು ಬಹುತೇಕ ಖಚಿತ. ಇನ್ನು ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಭಾರತ ತಂಡವು ಟಿ20 ವಿಶ್ವಕಪ್ಗಾಗಿ ಯುಎಸ್ಎ-ವೆಸ್ಟ್ ಇಂಡೀಸ್ಗೆ ಪ್ರಯಾಣಿಸಲಿದೆ.
ಐಪಿಎಲ್ ಆಡಿ ಸೋತಿದ್ದ ಟೀಮ್ ಇಂಡಿಯಾ:
2021 ರ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಪಾಲ್ಗೊಂಡಿತ್ತು. ಅಂದು ಲೀಗ್ ಹಂತದಲ್ಲೇ ಹೊರಬೀಳುವ ಮೂಲಕ ಭಾರತ ತಂಡವು ಅತ್ಯಂತ ಹೀನಾಯ ಪ್ರದರ್ಶನ ನೀಡಿತ್ತು. ಇದೀಗ ಮತ್ತೊಮ್ಮೆ ಐಪಿಎಲ್ ಬೆನ್ನಲ್ಲೇ ಭಾರತ ತಂಡವು ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳುವುದು ಖಚಿತ.
ಇತ್ತ ಐಪಿಎಲ್ ವೇಳೆ ಭಾರತೀಯ ಆಟಗಾರರು ವಿಶ್ರಾಂತಿ ಪಡೆಯದೇ ಸತತ ಪಂದ್ಯಗಳನ್ನಾಡಿರುತ್ತಾರೆ. ಹೀಗಾಗಿ ಇದು ಟಿ20 ವಿಶ್ವಕಪ್ ಮೇಲೆ ಪರಿಣಾಮ ಬೀರಲಿದೆಯಾ ಎಂಬ ಪ್ರಶ್ನೆಗೆ ಉತ್ತರ 2021ರ ಟಿ20 ವಿಶ್ವಕಪ್ ಫಲಿತಾಂಶ. ಒಟ್ಟಿನಲ್ಲಿ ಮುಂದಿನ 10 ತಿಂಗಳುಗಳ ಒಳಗೆ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್ಗಾಗಿ ಹೇಗೆ ತಯಾರಿ ನಡೆಸಲಿದೆ ಎಂಬುದೇ ಪ್ರಶ್ನೆ.
ಇದನ್ನೂ ಓದಿ: India T20 Squad: ಟೀಮ್ ಇಂಡಿಯಾದಲ್ಲಿ ಇಬ್ಬರೇ ಆಲ್ರೌಂಡರ್ಗಳು..!
ಟೀಮ್ ಇಂಡಿಯಾದ ಮುಂಬರುವ ಟಿ20 ಸರಣಿಗಳ ವೇಳಾಪಟ್ಟಿ:
- ಆಗಸ್ಟ್ 3 ರಿಂದ 13: ಭಾರತ vs ವೆಸ್ಟ್ ಇಂಡೀಸ್- 5 ಟಿ20 ಪಂದ್ಯಗಳ ಸರಣಿ
- ಆಗಸ್ಟ್ 18 ರಿಂದ 23: ಭಾರತ vs ಐರ್ಲೆಂಡ್ – 3 ಪಂದ್ಯಗಳ ಟಿ20 ಸರಣಿ
- ನವೆಂಬರ್ 23 ರಿಂದ ಡಿಸೆಂಬರ್ 3: ಭಾರತ vs ಆಸ್ಟ್ರೇಲಿಯಾ- 5 ಪಂದ್ಯಗಳ ಟಿ20 ಸರಣಿ
- ಡಿಸೆಂಬರ್ 10 ರಿಂದ 14: ಭಾರತ vs ಸೌತ್ ಆಫ್ರಿಕಾ- 3 ಪಂದ್ಯಗಳ ಟಿ20 ಸರಣಿ
- ಜನವರಿ 11 ರಿಂದ 17: ಭಾರತ vs ಅಫ್ಘಾನಿಸ್ತಾನ್- 3 ಪಂದ್ಯಗಳ ಟಿ20 ಸರಣಿ
Published On - 9:25 pm, Sat, 29 July 23