Zim Afro T10 2023: ಡರ್ಬನ್ ಖಲಂದರ್ಸ್ ಚಾಂಪಿಯನ್ಸ್

Joburg Buffaloes vs Durban Qalandars: ಚೊಚ್ಚಲ ಝಿಮ್ ಆಫ್ರೊ ಟಿ10 ಲೀಗ್​ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ ತಂಡ ಎಂಬ ಹಿರಿಮೆ ಡರ್ಬನ್ ಖಲಂದರ್ಸ್ ತಂಡದ ಪಾಲಾಗಿದೆ.

Zim Afro T10 2023: ಡರ್ಬನ್ ಖಲಂದರ್ಸ್ ಚಾಂಪಿಯನ್ಸ್
Durban Qalandars
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 29, 2023 | 10:53 PM

Zim Afro T10 2023: ಚೊಚ್ಚಲ ಝಿಮ್ ಆಫ್ರೊ ಟಿ10 ಲೀಗ್​ನಲ್ಲಿ ಡರ್ಬನ್ ಖಲಂದರ್ಸ್ (Durban Qalandars) ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಶನಿವಾರ ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜೋಬರ್ಗ್ ಬಫಲೋಸ್ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿ ಡರ್ಬನ್ ಖಲಂದರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಡರ್ಬನ್ ಖಲಂದರ್ಸ್ ತಂಡದ ನಾಯಕ ಕ್ರೇಗ್ ಇರ್ವಿನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಜೋಬರ್ಗ್ ಬಫಲೋಸ್ ಪರ ನಾಯಕ ಮೊಹಮ್ಮದ್ ಹಫೀಸ್ 13 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 32 ರನ್ ಬಾರಿಸಿದರೆ, ಟಾಮ್ ಬ್ಯಾಂಟನ್ 17 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 2 ಸಿಕ್ಸ್​ನೊಂದಿಗೆ 36 ರನ್​ ಚಚ್ಚಿದರು.

ಪರಿಣಾಮ ಮೊದಲ 4 ಓವರ್​ಗಳಲ್ಲಿಯೇ ಜೋಬರ್ಗ್ ಬಫಲೋಸ್ ತಂಡದ ಮೊತ್ತ 50ರ ಗಡಿದಾಟಿತು. ಆ ಬಳಿಕ ಬಂದ ಯೂಸುಫ್ ಪಠಾಣ್ 14 ಎಸೆತಗಳಲ್ಲಿ 5 ಫೋರ್​ಗಳೊಂದಿಗೆ 25 ರನ್​ಗಳ ಕೊಡುಗೆ ನೀಡಿದರು. ಇನ್ನು ರವಿ ಬೊಪಾರ 10 ಎಸೆತಗಳಲ್ಲಿ ಅಜೇಯ 22 ರನ್ ಬಾರಿಸುವ ಮೂಲಕ 10 ಓವರ್​ಗಳಲ್ಲಿ ಜೋಬರ್ಗ್ ತಂಡದ ಮೊತ್ತವನ್ನು 4 ವಿಕೆಟ್ ನಷ್ಟಕ್ಕೆ 127 ಕ್ಕೆ ತಂದು ನಿಲ್ಲಿಸಿದರು.

128 ರನ್​ಗಳ ಕಠಿಣ ಗುರಿ ಪಡೆದ ಡರ್ಬನ್ ಖಲಂದರ್ಸ್ ತಂಡಕ್ಕೆ ಆರಂಭಿಕರಾದ ಹಝರತುಲ್ಲಾ ಝಝೈ ಹಾಗೂ ಟಿಮ್ ಸೀಫರ್ಟ್ ಸ್ಪೋಟಕ ಆರಂಭ ಒದಗಿಸಿದ್ದರು. ಕೇವಲ 14 ಎಸೆತಗಳಲ್ಲಿ 30 ರನ್ ಬಾರಿಸಿ ಸೀಫರ್ಟ್ ಔಟಾದರೂ, ಮತ್ತೊಂದೆಡೆ ಝಝೈ ಅಬ್ಬರ ಮುಂದುವರೆಸಿದ್ದರು.

ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಂಡ್ರೆ ಫ್ಲೆಚರ್ 11 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 29 ರನ್​ಗಳ ಕೊಡುಗೆ ನೀಡಿದರು. ಇದಾಗ್ಯೂ ಕೊನೆಯ 2 ಓವರ್​ಗಳಲ್ಲಿ ಡರ್ಬನ್ ಖಲಂದರ್ಸ್ ತಂಡಕ್ಕೆ 24 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಆಸಿಫ್ ಅಲಿ 9 ಎಸೆತಗಳಲ್ಲಿ ಅಜೇಯ 21 ರನ್​ ಬಾರಿಸಿದರು. ಮತ್ತೊಂದೆಡೆ ಅಜೇಯರಾಗಿ ಉಳಿದ ಹಝರುತುಲ್ಲಾ ಝಝೈ 22 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 43 ರನ್ ಬಾರಿಸಿದರು.

ಈ ಮೂಲಕ 9.2 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 129 ರನ್ ಬಾರಿಸಿ ಡರ್ಬನ್ ಖಲಂದರ್ಸ್ ಫೈನಲ್​ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಚೊಚ್ಚಲ ಝಿಮ್ ಆಫ್ರೊ ಟಿ10 ಲೀಗ್​ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ ತಂಡ ಎಂಬ ಹಿರಿಮೆ ಡರ್ಬನ್ ಖಲಂದರ್ಸ್ ತಂಡದ ಪಾಲಾಗಿದೆ.

ಜೋಬರ್ಗ್ ಬಫಲೋಸ್ ಪ್ಲೇಯಿಂಗ್ 11: ಮೊಹಮ್ಮದ್ ಹಫೀಜ್ (ನಾಯ) ಟಾಮ್ ಬ್ಯಾಂಟನ್ ( ವಿಕೆಟ್ ಕೀಪರ್ ) , ವಿಲ್ ಸ್ಮೀಡ್ , ಯೂಸುಫ್ ಪಠಾಣ್ , ರವಿ ಬೋಪಾರಾ , ವೆಸ್ಲಿ ಮಾಧೆವೆರೆ , ಜೂನಿಯರ್ ಡಾಲಾ , ವೆಲ್ಲಿಂಗ್ಟನ್ ಮಸಕಡ್ಜಾ , ನೂರ್ ಅಹ್ಮದ್ , ಬ್ಲೆಸ್ಸಿಂಗ್ ಮುಜರಬಾನಿ , ವಿಕ್ಟರ್ ನ್ಯಾಯುಚಿ.

ಡರ್ಬನ್ ಖಲಂದರ್ಸ್ ಪ್ಲೇಯಿಂಗ್ 11: ಟಿಮ್ ಸೀಫರ್ಟ್ (ವಿಕೆಟ್ ಕೀಪರ್) , ಹಝರುತುಲ್ಲಾ ಝಝೈ, ಆಂಡ್ರೆ ಫ್ಲೆಚರ್ , ಅಸಿಫ್ ಅಲಿ , ಜಾರ್ಜ್ ಲಿಂಡೆ , ಕ್ರೇಗ್ ಇರ್ವಿನ್ (ನಾಯಕ) ಬ್ರಾಡ್ ಇವಾನ್ಸ್ , ನಿಕ್ ವೆಲ್ಚ್ , ಟೆಂಡೈ ಚತಾರಾ , ತಯ್ಯಬ್ ಅಬ್ಬಾಸ್ , ಡೇರಿನ್ ಡುಪಾವಿಲ್ಲನ್.

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ