Zim Afro T10 2023: ಝಝೈ ಭರ್ಜರಿ ಬ್ಯಾಟಿಂಗ್: ಡರ್ಬನ್ ತಂಡಕ್ಕೆ ಜಯ

Durban Qalandars vs Joburg Buffaloes: ಕಠಿಣ ಗುರಿ ಬೆನ್ನತ್ತಿದ ಡರ್ಬನ್ ಖಲಂದರ್ಸ್ ತಂಡಕ್ಕೆ ಅಫ್ಘಾನ್ ಆಟಗಾರ ಹಝರತುಲ್ಲಾ ಝಝೈ ಸ್ಪೋಟಕ ಆರಂಭ ಒದಗಿಸಿದ್ದರು.

Zim Afro T10 2023: ಝಝೈ ಭರ್ಜರಿ ಬ್ಯಾಟಿಂಗ್: ಡರ್ಬನ್ ತಂಡಕ್ಕೆ ಜಯ
Durban Qalandars
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 23, 2023 | 6:43 PM

Zim Afro T10 2023: ಹರಾರೆಯಲ್ಲಿ ನಡೆಯುತ್ತಿರುವ ಝಿಮ್ ಆಫ್ರೊ ಟಿ10 ಲೀಗ್​ನ 5ನೇ ಪಂದ್ಯದಲ್ಲಿ ಜೋಬರ್ಗ್ ಬಫಲೋಸ್ ವಿರುದ್ಧ ಡರ್ಬನ್ ಖಲಂದರ್ಸ್ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಜೋಬರ್ಗ್ ಬಫಲೋಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟಾಮ್ ಬ್ಯಾಂಟನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಬ್ಯಾಂಟನ್ 31 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 55 ರನ್ ಬಾರಿಸಿದರು.

ಮತ್ತೊಂದೆಡೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ಮುಶ್ಫಿಕುರ್ ರಹೀಮ್ 19 ರನ್​ ಕಲೆಹಾಕಿದರು. ಈ ಮೂಲಕ ಜೋಬರ್ಗ್ ಬಫಲೋಸ್ ತಂಡವು 10 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 94 ರನ್ ಕಲೆಹಾಕಿತು.

95 ರನ್​ಗಳ ಗುರಿ ಬೆನ್ನತ್ತಿದ ಡರ್ಬನ್ ಖಲಂದರ್ಸ್ ತಂಡಕ್ಕೆ ಅಫ್ಘಾನ್ ಆಟಗಾರ ಹಝರತುಲ್ಲಾ ಝಝೈ ಸ್ಪೋಟಕ ಆರಂಭ ಒದಗಿಸಿದ್ದರು. 25 ಎಸೆತಗಳನ್ನು ಎದುರಿಸಿದ ಝಝೈ 3 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 41 ರನ್ ಚಚ್ಚಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಆಸಿಫ್ ಅಲಿ 13 ಎಸೆತಗಳಲ್ಲಿ 23 ರನ್ ಬಾರಿಸಿ ಉತ್ತಮ ಸಾಥ್ ನೀಡಿದರು. ಪರಿಣಾಮ 9.1 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಡರ್ಬನ್ ಖಲಂದರ್ಸ್ ತಂಡವು ಗುರಿ ಮುಟ್ಟಿತು. ಈ ಮೂಲಕ ಜೋಬರ್ಗ್​ ಬಫಲೋಸ್ ವಿರುದ್ಧ ಡರ್ಬನ್ ಖಲಂದರ್ಸ್ 7 ವಿಕೆಟ್​ಗಳ ಜಯ ಸಾಧಿಸಿದೆ.

ಡರ್ಬನ್ ಖಲಂದರ್ಸ್​ ಪ್ಲೇಯಿಂಗ್ 11: ಟಿಮ್ ಸೀಫರ್ಟ್ (ವಿಕೆಟ್ ಕೀಪರ್) , ಹಝರತುಲ್ಲಾ ಝಝೈ, ಆಂಡ್ರೆ ಫ್ಲೆಚರ್ , ಕ್ರೇಗ್ ಎರ್ವಿನ್ (ನಾಯಕ) , ಆಸಿಫ್ ಅಲಿ , ನಿಕ್ ವೆಲ್ಚ್ , ಜಾರ್ಜ್ ಲಿಂಡೆ , ಬ್ರಾಡ್ ಇವಾನ್ಸ್ , ಓವನ್ ಮುಝೊಂಡೋ , ಡೇರಿನ್ ಡುಪಾವಿಲ್ಲನ್ , ಟೆಂಡೈ ಚಟಾರಾ.

ಇದನ್ನೂ ಓದಿ: Team India: ಒಟ್ಟು 47 ಪ್ಲೇಯರ್ಸ್​: ಟೀಮ್ ಇಂಡಿಯಾದಿಂದ 32 ಆಟಗಾರರು ಔಟ್..!

ಜೋಬರ್ಗ್ ಬಫಲೋಸ್ ಪ್ಲೇಯಿಂಗ್ 11: ಟಾಮ್ ಬ್ಯಾಂಟನ್ , ವಿಲ್ ಸ್ಮೀಡ್ , ಮೊಹಮ್ಮದ್ ಹಫೀಜ್ (ನಾಯಕ) , ಮುಶ್ಫಿಕುರ್ ರಹೀಮ್ (ವಿಕೆಟ್ ಕೀಪರ್) , ಯೂಸುಫ್ ಪಠಾಣ್ , ವೆಸ್ಲಿ ಮಾಧೆವೆರೆ , ವೆಲ್ಲಿಂಗ್ಟನ್ ಮಸಕಡ್ಜಾ , ಜೂನಿಯರ್ ದಲಾ , ಬ್ಲೆಸ್ಸಿಂಗ್ ಮುಜರಬಾನಿ , ವಿಕ್ಟರ್ ನ್ಯಾಯುಚಿ , ನೂರ್ ಅಹ್ಮದ್.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್