Zim Afro T10 2023: ಝಿಂಬಾಬ್ವೆಯಲ್ಲಿ ನಡೆಯುತ್ತಿರುವ ಝಿಮ್ ಆಫ್ರೊ ಟಿ10 ಲೀಗ್ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಶನಿವಾರ (ಜುಲೈ 29) ನಡೆಯಲಿರುವ ಫೈನಲ್ ಫೈಟ್ನಲ್ಲಿ ಜೋಬರ್ಗ್ ಬಫಲೋಸ್ ಹಾಗೂ ಡರ್ಬನ್ ಖಲಂದರ್ಸ್ ತಂಡಗಳು ಮುಖಾಮುಖಿಯಾಗಲಿದೆ. 5 ತಂಡಗಳ ನಡುವಿನ ಈ ಟೂರ್ನಿಯ ಪ್ಲೇಆಫ್ಸ್ ಸುತ್ತಿಗೆ ನಾಲ್ಕು ತಂಡಗಳು ಪ್ರವೇಶಿಸಿದ್ದವು. ಅದರಂತೆ ಮೊದಲ ಕ್ವಾಲಿಫೈಯರ್ನಲ್ಲಿ ಡರ್ಬನ್ ಖಲಂದರ್ಸ್ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿ ಜೋಬರ್ಗ್ ಬಫಲೋಸ್ ತಮಡವು ನೇರವಾಗಿ ಫೈನಲ್ಗೆ ಪ್ರವೇಶಿಸಿತ್ತು.
ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಕೇಪ್ಟೌನ್ ಸ್ಯಾಂಪ್ ಆರ್ಮಿ ತಂಡವನ್ನು 9 ವಿಕೆಟ್ಗಳಿಂದ ಮಣಿಸಿ ಹರಾರೆ ಹರಿಕೇನ್ಸ್ ತಂಡವು 2ನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಿತು.
2ನೇ ಕ್ವಾಲಿಫೈಯರ್ನಲ್ಲಿ ಹರಾರೆ ಹರಿಕೇನ್ಸ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿದ ಡರ್ಬನ್ ಖಲಂದರ್ಸ್ ತಂಡವು ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ಇದೀಗ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಡರ್ಬನ್ ಖಲಂದರ್ಸ್ ಹಾಗೂ ಜೋಬರ್ಗ್ ಬಫಲೋಸ್ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವುದು ವಿಶೇಷ.
ಅಂದರೆ ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಡರ್ಬನ್ ಖಲಂದರ್ಸ್ ತಂಡ: ಹಝರತುಲ್ಲಾ ಝಝೈ, ಟಿಮ್ ಸೀಫರ್ಟ್(ವಿಕೆಟ್ ಕೀಪರ್), ಆಂಡ್ರೆ ಫ್ಲೆಚರ್, ನಿಕ್ ವೆಲ್ಚ್, ಕ್ರೇಗ್ ಎರ್ವಿನ್(ನಾಯಕ), ಆಸಿಫ್ ಅಲಿ, ಜಾರ್ಜ್ ಲಿಂಡೆ, ಅಜ್ಮತುಲ್ಲಾ ಒಮರ್ಜಾಯ್, ಬ್ರಾಡ್ ಇವಾನ್ಸ್, ಟೆಂಡೈ ಚಟಾರಾ, ತಯ್ಯಬ್ ಅಬ್ಬಾಸ್, ಡೇರಿನ್ ಡುಪಾವಿಲೋನ್, ಮಿರ್ಜಾ ತಾಹಿರ್ ಬೈಗ್, ಮೊಹಮ್ಮದ್ ಅಮೀರ್, ಕ್ಲೈವ್ ಮದಂಡೆ, ಹಿಲ್ಟನ್ ಕಾರ್ಟ್‌ರೈಟ್, ಸಿಸಂದಾ ಮಗಾಲಾ, ಓವನ್ ಮುಝಾಂಡೊ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ್ದು ಕೇವಲ ಮೂವರು ಆಟಗಾರರು ಮಾತ್ರ..!
ಜೋಬರ್ಗ್ ಬಫಲೋಸ್ ತಂಡ: ಮೊಹಮ್ಮದ್ ಹಫೀಜ್ (ನಾಯಕ), ಟಾಮ್ ಬ್ಯಾಂಟನ್ (ವಿಕೆಟ್ ಕೀಪರ್), ವಿಲ್ ಸ್ಮೀಡ್, ಯೂಸುಫ್ ಪಠಾಣ್, ರವಿ ಬೋಪಾರಾ, ಮುಶ್ಫಿಕರ್ ರಹೀಮ್, ವೆಸ್ಲಿ ಮಾಧೆವೆರೆ, ವೆಲ್ಲಿಂಗ್ಟನ್ ಮಸಕಡ್ಜಾ, ನೂರ್ ಅಹ್ಮದ್, ಜೂನಿಯರ್ ದಲಾ, ಬ್ಲೆಸಿಂಗ್ ಮುಜರಾಬಾನಿ, ವಿಕ್ಟರ್, ಉಸ್ಮಾನ್ ಶಿನ್ವಾರಿ, ಓಡಿಯನ್ ಸ್ಮಿತ್, ಮಿಲ್ಟನ್ ಶುಂಬಾ, ಡೆಲಾನೊ ಪೊಟ್ಗೀಟರ್.
ಝಿಮ್ ಆಫ್ರೊ ಟಿ10 ಲೀಗ್ನ ಫೈನಲ್ ಪಂದ್ಯವನ್ನು ಭಾರತದಲ್ಲಿ ಸ್ಪೋರ್ಟ್ಸ್ 18 ಖೇಲ್ (ಹಿಂದಿ) ಚಾನೆಲ್‌ನಲ್ಲಿ ಲೈವ್ ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್ ಹಾಗೂ ವೆಬ್ಸೈಟ್ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.