AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI 2nd ODI: ರೋಹಿತ್, ವಿರಾಟ್​ಗೆ ವಿಶ್ರಾಂತಿ: ಹೀಗಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11

India vs West Indies 2nd ODI: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ಭಾರತದ ಪಾಲಾಗಲಿದೆ.

IND vs WI 2nd ODI: ರೋಹಿತ್, ವಿರಾಟ್​ಗೆ ವಿಶ್ರಾಂತಿ: ಹೀಗಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11
Team India
TV9 Web
| Edited By: |

Updated on:Jul 29, 2023 | 6:46 PM

Share

India vs West Indies 2nd ODI: ಭಾರತ-ವೆಸ್ಟ್ ಇಂಡೀಸ್ ನಡುವಣ 2ನೇ ಏಕದಿನ ಪಂದ್ಯ ಶುರುವಾಗಿದೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್​ ನಾಯಕ ಶಾಯ್​ ಹೋಪ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಇನ್ನು ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಮಾಡಲಾಗಿದೆ. ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಈ ಎರಡು ಸ್ಥಾನಗಳಲ್ಲಿ ಸಂಜು ಸ್ಯಾಮ್ಸನ್ ಹಾಗೂ ಅಕ್ಷರ್ ಪಟೇಲ್​ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಉಪನಾಯಕ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್​ಗಳ ಜಯ ಸಾಧಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದು. ಅತ್ತ ವೆಸ್ಟ್ ಇಂಡೀಸ್​ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ.

ಕೆರಿಬಿಯನ್ ಪಡೆ ಪಂದ್ಯದಲ್ಲಿ ಗೆದ್ದರೆ ಮಾತ್ರ ಸರಣಿ ಆಸೆಯನ್ನು ಜೀವಂತವಿರಿಸಿಕೊಳ್ಳಬಹುದು. ಹೀಗಾಗಿ ಉಭಯ ತಂಡಗಳಿಂದ ಈ ಪಂದ್ಯದಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ.

ವೆಸ್ಟ್ ಇಂಡೀಸ್ (ಪ್ಲೇಯಿಂಗ್ XI): ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಅಲಿಕ್ ಅಥಾನಾಝ್, ಶಾಯ್ ಹೋಪ್(ನಾಯಕ), ಶಿಮ್ರಾನ್ ಹೆಟ್ಮೆಯರ್, ಕೀಸಿ ಕಾರ್ಟಿ, ರೊಮಾರಿಯೋ ಶೆಫರ್ಡ್, ಯಾನಿಕ್ ಕ್ಯಾರಿಯಾ, ಗುಡಕೇಶ್ ಮೋಟಿ, ಅಲ್ಝಾರಿ ಜೋಸೆಫ್, ಜೇಡನ್ ಸೀಲ್ಸ್.

ಭಾರತ (ಪ್ಲೇಯಿಂಗ್ XI): ಶುಭ್​ಮನ್ ಗಿಲ್, ಇಶಾನ್ ಕಿಶನ್(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.

ವೆಸ್ಟ್ ಇಂಡೀಸ್ ಏಕದಿನ ತಂಡ: ಶಾಯ್ ಹೋಪ್ (ನಾಯಕ) , ಬ್ರಾಂಡನ್ ಕಿಂಗ್ , ಕೈಲ್ ಮೇಯರ್ಸ್ , ಅಲಿಕ್ ಅಥಾನಾಝ್, ಶಿಮ್ರಾನ್ ಹೆಟ್ಮೆಯರ್ , ರೋವ್​ಮನ್ ಪೊವೆಲ್ , ರೊಮಾರಿಯೋ ಶೆಫರ್ಡ್ , ಡೊಮಿನಿಕ್ ಡ್ರೇಕ್ಸ್ , ಯಾನಿಕ್ ಕ್ಯಾರಿಯಾ , ಗುಡಕೇಶ್ ಮೋಟಿ , ಜೇಡನ್ ಸೀಲ್ಸ್ , ಕೀಸಿ ಕಾರ್ಟಿ, ಒಶಾನೆ ಥಾಮಸ್ , ಅಲ್ಝಾರಿ ಜೋಸೆಫ್, ಕೆವಿನ್ ಸಿಂಕ್ಲೇರ್.

ಇದನ್ನೂ ಓದಿ: ICC Test Rankings: ಅಗ್ರ ಹತ್ತರಲ್ಲಿ ಟೀಮ್ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ

ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ) , ಇಶಾನ್ ಕಿಶನ್ (ವಿಕೆಟ್ ಕೀಪರ್) , ಶುಭ್​ಮನ್ ಗಿಲ್ , ವಿರಾಟ್ ಕೊಹ್ಲಿ , ಹಾರ್ದಿಕ್ ಪಾಂಡ್ಯ , ಸೂರ್ಯಕುಮಾರ್ ಯಾದವ್ , ರವೀಂದ್ರ ಜಡೇಜಾ , ಶಾರ್ದೂಲ್ ಠಾಕೂರ್ , ಕುಲ್ದೀಪ್ ಯಾದವ್ , ಉಮ್ರಾನ್ ಮಲಿಕ್ , ಮುಖೇಶ್ ಕುಮಾರ್ , ಯುಜ್ವೇಂದ್ರ ಚಾಹಲ್ , ಸಂಜು ಸ್ಯಾಮ್ಸನ್, ಜಯದೇವ್ ಉನಾದ್ಕಟ್, ರುತುರಾಜ್ ಗಾಯಕ್ವಾಡ್, ಅಕ್ಷರ್ ಪಟೇಲ್.

Published On - 6:44 pm, Sat, 29 July 23

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್